ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) 2024-25ನೇ ಸಾಲಿನ ಚುನಾವಣೆ ಘೋಷಿಸಿದ್ದು, ನಾಳೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2:00ರಿಂದ ಸಂಜೆ 6:00ರವರೆಗೆ ಮತದಾನ ನಡೆಯಲಿದೆ. ಚಲನಚಿತ್ರೋದ್ಯಮದ ಪ್ರಮುಖ ಸಂಸ್ಥೆಗೆ ಹೊಸ ನಾಯಕನನ್ನು ಈ ಚುನಾವಣೆ ನಿರ್ಧರಿಸಲಿದೆ.
ಅಧ್ಯಕ್ಷೀಯ ರೇಸ್ನಲ್ಲಿ ಎಂ.ನರಸಿಂಹಲು: ಕನ್ನಡ ಚಿತ್ರರಂಗದ ಅನುಭವಿ ಎಂ.ನರಸಿಂಹಲು ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ. ಇವರು ನಾಲ್ಕು ದಶಕಗಳ ಕಾಲ ನಿರ್ಮಾಪಕ, ವಿತರಕ, ಪ್ರದರ್ಶಕರಾಗಿ ಮತ್ತು ಕೆಎಫ್ಸಿಸಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತಹ ಹೆಸರಾಂತ ನಟರೊಂದಿಗೆ ಕೆಲಸ ಮಾಡಿದ ಅನುಭವವಿದೆ.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಅರೆಸ್ಟ್!
ನರಸಿಂಹಲು ತಮ್ಮ ಹೇಳಿಕೆಯಲ್ಲಿ, ಕನ್ನಡ ಚಲನಚಿತ್ರೋದ್ಯಮಕ್ಕೆ ತಮ್ಮ ಸಮರ್ಪಣಾಭಾವವನ್ನು ಒತ್ತಿ ಹೇಳಿದ್ದಾರೆ. ತಾವು ಆಯ್ಕೆಯಾದರೆ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. "ಸಿನಿಮಾ ನನ್ನ ಜೀವನ ಮತ್ತು ನನ್ನ ಕುಟುಂಬ. ಎಂದೆಂದಿಗೂ ಈ ಉದ್ಯಮಕ್ಕೆ ಬದ್ಧ. ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಲು ನನಗೊಂದು ಅವಕಾಶ ನೀಡುವಂತೆ ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ನರಸಿಂಹಲು ಅವರ 10 ಅಂಶಗಳ ಪ್ರಣಾಳಿಕೆ:
1. ಆರೋಗ್ಯ: ಸದಸ್ಯರಿಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ಔಷಧಗಳು (ಸಬ್ಸಿಡಿ).
2. ವೆಚ್ಚ ಕಡಿತ: ಪ್ರದರ್ಶಕರಿಗೆ ಸ್ಯಾಟಲೈಟ್ ಮತ್ತು ತಂತ್ರಜ್ಞಾನದ ವೆಚ್ಚವನ್ನು ಕಡಿಮೆ ಮಾಡೋ ಪ್ರಯತ್ನಗಳು ನಡೆಯಲಿವೆ.
3. ವಿದ್ಯಾರ್ಥಿವೇತನಗಳು: ಈ ಇಂಡಸ್ಟ್ರಿಯರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಪೂರೈಸಲಾಗುತ್ತದೆ.
4. ಸರ್ಕಾರದ ಬೆಂಬಲ: ಹೊಸ ಪ್ರದರ್ಶಕರು ಮತ್ತು ನಿರ್ಮಾಪಕರಿಗೆ ಅನುದಾನ ಮತ್ತು ಸಬ್ಸಿಡಿಗಳನ್ನು ಖಾತರಿಪಡಿಸುವುದು.
5. ಕಮ್ಯುನಿಟಿ ಈವೆಂಟ್ಸ್: ಸದಸ್ಯರು ಮತ್ತು ಕುಟುಂಬಗಳಿಗೆ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು.
6. ತೆರಿಗೆ ಸುಧಾರಣೆಗಳು: ರಾಜ್ಯ ಸರ್ಕಾರದೊಂದಿಗೆ ಆಸ್ತಿ ತೆರಿಗೆ ಮತ್ತು ಪರವಾನಗಿ ನವೀಕರಣ ಸಮಸ್ಯೆಗಳನ್ನು ಪರಿಹರಿಸುವುದು.
7. ಸ್ಮಾರ್ಟ್ ಟೆಕ್ನಾಲಜಿ: ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಸಾಫ್ಟ್ವೇರ್ಗಳನ್ನು ಅಳವಡಿಸುವುದು.
8. ಸೀನಿಯರ್ ಬೆನಿಫಿಟ್ಸ್: 60 ವರ್ಷ ಮೇಲ್ಪಟ್ಟ ಸದಸ್ಯರಿಗೆ ಮಂಥ್ಲಿ ಪೆನ್ಷನ್ ನೀಡುವುದು.
9. ವಿವಾದ ಪರಿಹಾರ: ಉದ್ಯಮಕ್ಕೆ ಸಂಬಂಧಿಸಿದ ಸಂಘರ್ಷಗಳಿಗೆ ತ್ವರಿತ ಪರಿಹಾರ.
10. ಸಬ್ಸಿಡಿ ಹೆಚ್ಚಳ: ಚಲನಚಿತ್ರ ನಿರ್ಮಾಪಕರಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿಗಾಗಿ ಪ್ರತಿಪಾದಿಸುವುದು.
ಕೆಎಫ್ಸಿಸಿ ಮಾಜಿ ಅಧ್ಯಕ್ಷರು ಮತ್ತು ಅವರ ತಂಡದ ಬೆಂಬಲದೊಂದಿಗೆ ನರಸಿಂಹಲು ಅವರ ಪ್ರಚಾರ ಜೋರಾಗಿದೆ. ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂಡಸ್ಟ್ರಿಯ ಸವಾಲುಗಳನ್ನು ಎದುರಿಸಲು ಸಮರ್ಥ ನಾಯಕತ್ವದ ತಂಡವನ್ನು ಆಯ್ಕೆ ಮಾಡಲು ಕೆಎಫ್ಸಿಸಿ ಎದುರು ನೋಡುತ್ತಿದೆ.
ಇದನ್ನೂ ಓದಿ: ಧನರಾಜ್ ಆಚಾರ್ಗೆ ಹೊಡೆದ ರಜತ್: ಇವರನ್ನು ಮನೆಯಿಂದ ಹೊರಕಳುಹಿಸಬೇಕಾ! ಏನಂತೀರಿ?
ಭಾರತೀಯ ಚಿತ್ರರಂಗದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕರ್ನಾಟಕದ ಚಲನಚಿತ್ರೋದ್ಯಮದ ದಿಕ್ಕನ್ನು ನಿರ್ಧರಿಸಲು ಕೆಎಫ್ಸಿಸಿ ಚುನಾವಣೆಗಳು ನಿರ್ಣಾಯಕವಾಗಿವೆ. ಉದ್ಯಮದ ಭವಿಷ್ಯಕ್ಕಾಗಿ ಭಾಗವಹಿಸಲು ಮತ್ತು ತಮ್ಮ ಮತಗಳನ್ನು ಚಲಾಯಿಸಲು ಸದಸ್ಯರನ್ನು ಪ್ರೋತ್ಸಾಹಿಸಲಾಗಿದೆ.
"ನಮ್ಮ ಪ್ರೀತಿಯ ಚಲನಚಿತ್ರೋದ್ಯಮದ ಪ್ರಗತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಡಿಸೆಂಬರ್ 14ರಂದು ನಿಮ್ಮ ಬೆಂಬಲಕ್ಕೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ" ಎಂದು ನರಸಿಂಹಲು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.