ETV Bharat / entertainment

'ದೇವರ': ಉತ್ತರ ಭಾರತದ ವಿತರಣಾ ಹಕ್ಕು ಪಡೆದ ಕರಣ್​ ಜೋಹರ್ ಕಂಪನಿ - Devara - DEVARA

'ದೇವರ' ಸಿನಿಮಾದ ನಾರ್ತ್ ಥಿಯೇಟ್ರಿಕಲ್ ಡಿಸ್ಟ್ರಿಬ್ಯೂಶನ್ ರೈಟ್ಸ್ ಅನ್ನು ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ಸ್ ಪಡೆದುಕೊಂಡಿದೆ.

Karan Johar's Dharma Productions got Devara's North  Theatrical distribution right
'ದೇವರ' ಉತ್ತರ ಭಾರತದ ವಿತರಣಾ ಹಕ್ಕನ್ನು ಪಡೆದುಕೊಂಡ ಕರಣ್​ ಜೋಹರ್ ಕಂಪನಿ
author img

By ETV Bharat Karnataka Team

Published : Apr 10, 2024, 6:51 PM IST

ಟಾಲಿವುಡ್ ಸ್ಟಾರ್ ಹೀರೋ ಜೂನಿಯರ್ ಎನ್​​ಟಿಆರ್-ಖ್ಯಾತ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಶನ್​ನ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಸಿನಿಮಾದ ನಾರ್ತ್ ಥಿಯೇಟ್ರಿಕಲ್ ಡಿಸ್ಟ್ರಿಬ್ಯೂಶನ್ ರೈಟ್ಸ್ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

2015ರಲ್ಲಿ ಕರಣ್ ಜೋಹರ್ ತಮ್ಮ ಧರ್ಮ ಪ್ರೊಡಕ್ಷನ್ಸ್ ಮೂಲಕ 'ಬಾಹುಬಲಿ'ಯ ಹಿಂದಿ ಆವೃತ್ತಿಯನ್ನು ಉತ್ತರ ರಾಜ್ಯಗಳಲ್ಲಿ ಬಿಡುಗಡೆ ಮಾಡಿದ್ದರು. ಸಿನಿಮಾ ಸೂಪರ್ ಡೂಪರ್ ಹಿಟ್​ ಆಗಿತ್ತು. ಇದೀಗ ಜೂನಿಯರ್ ಎನ್​ಟಿಆರ್ ಕೂಡ ಆರ್​ಆರ್​ಆರ್ ಮೂಲಕ ದೇಶ, ವಿದೇಶಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮ ಪ್ರೊಡಕ್ಷನ್ಸ್ ಗೆಲ್ಲುವ ವಿಶ್ವಾಸದೊಂದಿಗೆ ಜೂನಿಯರ್ ಎನ್‌ಟಿಆರ್ ಅವರ 'ದೇವರ' ಚಿತ್ರದ ಉತ್ತರ ಭಾರತದ ವಿತರಣಾ ಹಕ್ಕು ಪಡೆದುಕೊಂಡಿದೆ. ಇದರೊಂದಿಗೆ ಎಎ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ.

Karan Johar's Dharma Productions got Devara's North  Theatrical distribution right
ಕರಣ್​ ಜೋಹರ್ ಇನ್​ಸ್ಟಾಗ್ರಾಮ್​ ಸ್ಟೋರಿ

ಕರಣ್ ಜೋಹರ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ದೇವರ ಚಿತ್ರದ ಉತ್ತರ ಭಾರತದ ಚಿತ್ರಮಂದಿರ ವಿತರಣೆ ಹಕ್ಕುಗಳ ಪಾಲುದಾರಿಕೆಯನ್ನು ಘೋಷಿಸಲು ಹೆಮ್ಮೆಪಡುತ್ತೇವೆ. ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಸಿನಿಮೀಯ ಅನುಭವಕ್ಕಾಗಿ ಸಖತ್​ ಥ್ರಿಲ್​ ಆಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಾಹ್ನವಿ ಕತ್ತಲ್ಲಿ 'ಶಿಕು' ಬರಹದ ಡೈಮಂಡ್ ನೆಕ್ಲೇಸ್: ಪ್ರೇಮ ಸಂಬಂಧದ ಸುಳಿವು ಕೊಟ್ರಾ? - Janhvi Kapoor

ದೇವರ ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದ ಮೊದಲ ಭಾಗ ಅಕ್ಟೋಬರ್ 10ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಈ ಚಿತ್ರದ ಮೂಲಕ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ದಕ್ಷಿಣದ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಜಾಹ್ನವಿ ಮತ್ತು ಜೂನಿಯರ್​ ಎನ್​ಟಿಆರ್​​ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು. ಜಾಹ್ನವಿ, ದೇವರ ಮಾತ್ರವಲ್ಲದೇ ರಾಮ್​ ಚರಣ್​​ ಅಭಿನಯದ ಮುಂದಿನ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ 'ತಲೈವರ್ 171'ರಲ್ಲಿ ಶಾರುಖ್​ ಖಾನ್? - Thalaivar 171

ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ ಅಡಿ ಮಿಕ್ಕಿಲಿನೇನಿ ಸುಧಾಕರ್, ಕೊಸರಾಜು ಹರಿಕೃಷ್ಣ ಮತ್ತು ನಂದಮೂರಿ ಕಲ್ಯಾಣ್ ರಾಮ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 120 ಕೋಟಿ ರೂ.ಗೂ ಅಧಿಕ ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳು ಜೂ.ಎನ್‌ಟಿಆರ್‌ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.