ETV Bharat / entertainment

ಕರಣ್ ಜೋಹರ್​​ಗೆ 'ಬಾಡಿ ಡಿಸ್ಮಾರ್ಫಿಯಾ': ಏನಿದು? ಆ ದಿನಗಳ ಬೇಸರ ತೋಡಿಕೊಂಡ ನಿರ್ಮಾಪಕ! - Karan Johar Body Dysmorphia - KARAN JOHAR BODY DYSMORPHIA

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ-ನಿರ್ಮಾಪಕ ಕರಣ್​ ಜೋಹರ್​​ ತಾವು ಎದುರಿಸಿದ ಮಾನಸಿಕ ತೊಳಲಾಟಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.

Karan Johar
ಸಿನಿಮಾ ನಿರ್ಮಾಪಕ ಕರಣ್ ಜೋಹರ್​​ (Karan Johar Instagram)
author img

By ETV Bharat Karnataka Team

Published : Jul 10, 2024, 8:52 AM IST

ಕರಣ್ ಜೋಹರ್, ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ. ಇತ್ತೀಚೆಗೆ, ತಾವು ಬದುಕಿನಲ್ಲಿ ಎದುರಿಸಿದ ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಬಾಡಿ ಡಿಸ್ಮಾರ್ಫಿಯಾ (Body Dysmorphia) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯಿರುವ ಜನರು ತಮ್ಮ ನೋಟ ಮತ್ತು ದೇಹದ ನ್ಯೂನತೆಗಳ ಬಗ್ಗೆ ಅತಿಯಾಗಿ ಯೋಚಿಸಿ ಅತೀವ ತೊಂದರೆಗೊಳಗಾಗುತ್ತಾರೆ.

ಬಾಲ್ಯದಲ್ಲಿ ತಮಗೆ ಅತ್ಯುತ್ತಮ ಧ್ವನಿ ಇರಲಿಲ್ಲ ಎಂಬ ಕಾರಣಕ್ಕೆ ಗುಟ್ಟಾಗಿ ವಾಯ್ಸ್ ಮಾಡ್ಯುಲೇಷನ್ ಕ್ಲಾಸ್​ಗಳಿಗೆ ಹಾಜರಾಗಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಲ್ಲದೇ ತಾನು ಇತರೆ ಹುಡುಗರಂತೆ ಇಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಬೇಸರಗೊಂಡಿದ್ದನ್ನೂ ಬಹಿರಂಗಪಡಿಸಿದರು.

"ನನ್ನ ದನಿ ಬಹಳ ಮೃದುವಾಗಿ ಹುಡುಗಿಯಂತಿದೆ ಎಂದು ಮುಜುಗರಕ್ಕೊಳಗಾಗಿದ್ದೆ. ಅದನ್ನು ಸರಿಪಡಿಸಲು ನಾನು ಓರ್ವರ ಸಲಹೆಯ ಮೇರೆಗೆ ಸ್ಪೀಕಿಂಗ್​ ಕ್ಲಾಸ್​ಗೆ ಸೇರಿಕೊಂಡೆ. ಈ ವಿಚಾರವನ್ನು ಮನೆಯಲ್ಲಿ ಮುಚ್ಚಿಟ್ಟೆ. ಕಂಪ್ಯೂಟರ್ ಕ್ಲಾಸ್​ಗೆ ಹೋಗುವುದಾಗಿ ತಂದೆಗೆ ತಿಳಿಸಿ, ವಾಯ್ಸ್ ಮಾಡ್ಯೂಲೇಶನ್​ ಕ್ಲಾಸ್​ಗೆ ಹಾಜರಾಗಿದ್ದೆ" ಎಂದು ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ನಿರ್ದೇಶಕ ತಿಳಿಸಿದರು.

"ಬಾಲ್ಯದಲ್ಲಿ, ಹೆತ್ತವರು ಬಯಸಿದ ರೀತಿ ಆಗುವಲ್ಲಿ ವಿಫಲನಾಗಿದ್ದೇನೆ ಎಂದು ಭಾವಿಸುತ್ತಿದ್ದೆ. ಒಮ್ಮೆ, ಪ್ರತಿಭಾ ಸ್ಪರ್ಧೆಯಲ್ಲಿ ಎಲ್ಲರೂ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದರು. ನಾನೂ ಮಾಡಿದ್ದೆ. ಕೆಲವರು ನನ್ನನ್ನು ಅಣಕಿಸಿ, ನಗಲು ಪ್ರಾರಂಭಿಸಿದರು. ನನ್ನ ತಾಯಿ ಕೂಡಾ ಅಲ್ಲಿ ಪ್ರೇಕ್ಷಕರಾಗಿ ಕುಳಿತಿದ್ದರು. ಮನೆಗೆ ಹೋಗಿ ಬಹಳ ಕಣ್ಣೀರಿಟ್ಟಿದ್ದೆ. ನಾನೇಕೆ ಇತರೆ ಹುಡುಗರಂತೆ ಇರಬಾರದು? ಎಂದೆನಿಸಿತ್ತು" ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಇದನ್ನೂ ಓದಿ: 25 ದಿನ ಪೂರೈಸಿದ 'Love...ಲಿ': ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ವಸಿಷ್ಠ ಸಿಂಹ ಮನವಿ - Love li Movie

"ನನಗೆ ಬಾಡಿ ಡಿಸ್ಮಾರ್ಫಿಯಾ ಇದೆ. ಈಗಲೂ ಸ್ವಿಮ್ಮಿಂಗ್​ ಪೂಲ್ ಅಥವಾ ಕೊಳಕ್ಕಿಳಿಯಲು ಹಿಂಜರಿಯುತ್ತೇನೆ. ಭಯಪಡದೆ ಮುಂದೆ ಹೆಜ್ಜೆ ಇಡುವುದು ಹೇಗೆ ಎಂಬುದು ಇನ್ನೂ ನನಗೆ ತಿಳಿದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ನಾನು ಬಹಳ ಪ್ರಯತ್ನಿಸಿದೆ. ಯಾವಾಗಲೂ ಓವರ್​​ ಸೈಝ್​​ ಬಟ್ಟೆಗಳನ್ನೇ ಧರಿಸುತ್ತೇನೆ'' ಎಂದು ಸೂಪರ್ ಹಿಟ್ ಕಭಿ ಖುಷಿ ಕಭಿ ಘಮ್ ಚಿತ್ರದ ನಿರ್ದೇಶಕ ತಿಳಿಸಿದರು.

ಇದನ್ನೂ ಓದಿ: 'ಕಿಂಗ್‌' ಸಿನಿಮಾಗೂ ಮುನ್ನ ನ್ಯೂಯಾರ್ಕ್‌ನಲ್ಲಿ ಮಗಳೊಂದಿಗೆ ಶಾರುಖ್​​​​ ಶಾಪಿಂಗ್​ - SRK Suhana in New York

ಚಿತ್ರರಂಗದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿರುವ ಕರಣ್​​, ಮದುವೆಯಾಗಿಲ್ಲ. ಆದ್ರೆ, ಆಧುನಿಕ ವೈದ್ಯಕೀಯ ಸೌಲಭ್ಯಗಳ ಸಹಾಯದಿಂದ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಇವರು, ತಮ್ಮ ಮಾನಸಿಕ ತೊಳಲಾಟಗಳ ಬಗ್ಗೆ ಈವರೆಗೆ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ, ಬಾಡಿ ಡಿಸ್ಮಾರ್ಫಿಯಾಗೆ ಸಂಬಂಧಿಸಿದಂತೆ ಹೆಚ್ಚಾಗಿ ಓವರ್​ ಸೈಝ್​​ ಡ್ರೆಸ್​ನಲ್ಲೇ ಕಾಣಿಸಿಕೊಳ್ಳುತ್ತಾರೆ. ಕ್ಯಾಶುವಲ್​ ಡ್ರೆಸ್ಸಿಂಗ್​​ಗೆ ಗಮನ ಕೊಟ್ಟವರೇ ಅಲ್ಲ. ವೆಲ್​ ಡ್ರೆಸ್ಡ್ ಎಂದೇ ಫೇಮಸ್​ ಆದವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.