ETV Bharat / entertainment

ಬಾಲಿವುಡ್​ಗೆ ಧ್ರುವ ಸರ್ಜಾ ಎಂಟ್ರಿ: 'ವಾರ್ 2'ನಲ್ಲಿ ಹೃತಿಕ್ ರೋಷನ್ ಸಹೋದರನಾಗಿ ಆ್ಯಕ್ಷನ್​ ಪ್ರಿನ್ಸ್​​ - Dhruva Sarja to Bollywood - DHRUVA SARJA TO BOLLYWOOD

ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​​ ​​ಧ್ರುವ ಸರ್ಜಾ ​ಸೂಪರ್ ಸ್ಟಾರ್ ಹೃತಿಕ್ ರೋಷನ್ ಮುಖ್ಯಭೂಮಿಕೆಯ 'ವಾರ್ 2' ಚಿತ್ರದಲ್ಲಿ ನಟಿಸೋ ಮೂಲಕ ಬಾಲಿವುಡ್​ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ, ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

Dhruva Sarja
ಧ್ರುವ ಸರ್ಜಾ (ETV Bharat)
author img

By ETV Bharat Karnataka Team

Published : May 28, 2024, 7:07 PM IST

​​ಧ್ರುವ ಸರ್ಜಾ, ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ತನ್ನದೇ ಫ್ಯಾನ್​ ಬೇಸ್​ ಹೊಂದಿರುವ ಆ್ಯಕ್ಷನ್​ ಪ್ರಿನ್ಸ್​​ ಮುಖ್ಯಭೂಮಿಕೆಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಪ್ರಸ್ತುತ 'ಕೆ.ಡಿ' ಮತ್ತು 'ಮಾರ್ಟಿನ್'​​ ಸಲುವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್ ಸಿಕ್ಕಿದೆ. ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೊಂದಿರುವ ಧ್ರುವ ಬಾಲಿವುಡ್ ಪ್ರವೇಶಿಸೋ ಬಗ್ಗೆ ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ಬಾಲಿವುಡ್​ ಸೂಪರ್ ಸ್ಟಾರ್ ಹೃತಿಕ್ ರೋಷನ್ ಮುಖ್ಯಭೂಮಿಕೆಯ 'ವಾರ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ವಾರ್ 2' ಮೂಲಕ ಬಾಲಿವುಡ್‌ಗೆ ಪದಾರ್ಪಣೆ: ಬಾಲಿವುಡ್​ನ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ವಾರ್ 2ನಲ್ಲಿ ಧ್ರುವ ಸರ್ಜಾ ಅವರಿಗೆ ಪಾತ್ರವನ್ನು ಆಫರ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ನಿರ್ದೇಶಕ ಅಯಾನ್ ಮುಖರ್ಜಿ 2019ರ 'ವಾರ್' ಸಿನಿಮಾದ ಸೀಕ್ವೆಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್, ಜಾನ್ ಅಬ್ರಹಾಂ, ಜೂನಿಯರ್ ಎನ್​​​ಟಿಆರ್, ಕಿಯಾರಾ ಅಡ್ವಾಣಿ ಮತ್ತು ಶಬಿ ಅಹ್ಲುವಾಲಿಯಾದಂತಹ ಖ್ಯಾತನಾಮರು ಕಾಣಿಸಿಕೊಳ್ಳಲಿದ್ದಾರೆ. ಇದೇ ಚಿತ್ರದಲ್ಲಿ ಧ್ರುವ ಸರ್ಜಾ ಹೃತಿಕ್ ರೋಷನ್ ಅವರ ಸಹೋದರನ ಪಾತ್ರವನ್ನು ನಿರ್ವಹಿಸೋ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಧಿಕೃತ ಮಾಹಿತಿ ಕೊಡುವಂತೆ ಆ್ಯಕ್ಷನ್​ ಪ್ರಿನ್ಸ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಎನ್‌ಟಿಆರ್​ಗೆ ಭಾರತ ರತ್ನ ನೀಡುವಂತೆ ಚಿರಂಜೀವಿ ಮನವಿ: ಪಿಎಂ ಮೋದಿ ಕೊಟ್ಟ ಭರವಸೆಯೇನು? - NTR 101st Birth Anniversary

ETV Bharat Logo

Copyright © 2024 Ushodaya Enterprises Pvt. Ltd., All Rights Reserved.