ಪ್ಯಾನ್-ಇಂಡಿಯನ್ ಸ್ಟಾರ್ ಪ್ರಭಾಸ್ ತಮ್ಮ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್ ಸಿನಿಮಾ 'ಕಲ್ಕಿ 2898 ಎಡಿ' ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ. ಬಹುತಾರಾಗಣದ ಬಿಗ್ ಪ್ರಾಜೆಕ್ಟ್ ಇದೇ ಗುರುವಾರ (ಜೂನ್ 27, 2024) ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಒಂದು ದೊಡ್ಡ ಸಿನಿಮೀಯ ಅನುಭವ ನೀಡಲು ಸಜ್ಜಾಗಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಕಾತುರದಲ್ಲಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಇತರೆ ರಾಜ್ಯಗಳಲ್ಲಿ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ತೆರೆಯಲಾಗಿದೆ. ಹೈದರಾಬಾದ್‌ನ ಅನೇಕ ಮಲ್ಟಿಪ್ಲೆಕ್ಸ್‌ಗಳು ಹೆಚ್ಚಿನ ಸಂಖ್ಯೆಯ ಶೋಗಳನ್ನು ಆಯೋಜಿಸುತ್ತಿವೆ.
ಹೊಸದಾಗಿ ತೆರೆಯಲಾದ ಮಲ್ಟಿಪ್ಲೆಕ್ಸ್ - ಅಪರ್ಣಾ ಸಿನಿಮಾಸ್ 'ಕಲ್ಕಿ 2898 ಎಡಿ' ತೆರೆಕಾಣುವ ಮೊದಲ ದಿನವೇ (ಗುರುವಾರ) 42 ಶೋಗಳನ್ನು ಏರ್ಪಡಿಸಿ ದಾಖಲೆ ನಿರ್ಮಿಸಿದೆ. ಈ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳು 'ಸೋಲ್ಡ್ ಔಟ್' ಆಗಿದ್ದು, ಸಿನಿಮಾದ ಕ್ರೇಜ್ ಹೇಗಿದೆ ಎಂಬುದು ಸ್ಪಷ್ಟವಾಗಿದೆ. ಟಿಕೆಟ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ ಪ್ರಕಾರ, ಮೊದಲ 60 ನಿಮಿಷಗಳಲ್ಲಿ (1 ಗಂಟೆ) ಬರೋಬ್ಬರಿ 36,000 ಟಿಕೆಟ್‌ಗಳು ಮಾರಾಟವಾಗಿವೆ. ತೆಲಂಗಾಣದ ಎಲ್ಲಾ ಶೋಗಳ ಟಿಕೆಟ್‌ಗಳು ಮಾರಾಟವಾಗಿವೆ. ಚಿತ್ರದ ಮೊದಲ ದಿನಕ್ಕೆ, ಭಾರತದಾದ್ಯಂತ 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇನ್ನೂ ಹೆಚ್ಚಿನ ಸಂಖ್ಯೆಯ ಮಲ್ಟಿಪ್ಲೆಕ್ಸ್‌ಗಳು ಬುಕ್ಕಿಂಗ್ ಅನ್ನು ಇನ್ನಷ್ಟೇ ಪ್ರಾರಂಭಿಸಬೇಕಿರುವುದರಿಂದ, ಈ ಅಂಕಿ-ಅಂಶ ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: 28 ವರ್ಷಗಳ ನಂತರ ಬರ್ತಿದೆ ಕಮಲ್ ಹಾಸನ್ ನಟನೆಯ 'ಇಂಡಿಯನ್ 2'; ಸಂಜೆ 7ಕ್ಕೆ ಟ್ರೇಲರ್ ನೋಡಿ - Indian 2 Trailer
ಎಲ್ಲಾ 210 ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಆಗುತ್ತಿರುವ ಮೊದಲ ಭಾರತೀಯ ಚಿತ್ರ 'ಕಲ್ಕಿ 2898 ಎಡಿ'. ಟ್ರೇಡ್ ವೆಬ್ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಪ್ರಭಾಸ್ ಮುಖ್ಯಭೂಮಿಕೆಯ ಈ ಚಿತ್ರ ಜೂನ್ 27 ರಂದು (ಮೊದಲ ದಿನ) ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗಳೊಂದಿಗೆ ಪ್ರಯಾಣ ಆರಂಭಿಸಲಿರುವ ಮೂರನೇ ಭಾರತೀಯ ಚಿತ್ರ (ಆರ್ಆರ್ಆರ್ ಮತ್ತು ಬಾಹುಬಲಿ 2 ನಂತರ) ಆಗೋ ಸಾಧ್ಯತೆಗಳು ಹೆಚ್ಚಿವೆ.
ಇದನ್ನೂ ಓದಿ: ಪ್ರಭಾಸ್ 'ಕಲ್ಕಿ' ಚಿತ್ರದ 'ಬುಜ್ಜಿ' ವಾಹನವನ್ನೇರಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ - Rishab Shetty rides Bujji
ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರು ಮುಖ್ಯಭೂಮಿಕೆಯಲ್ಲಿರೋದೇ ಈ ಚಿತ್ರದ ಹೈಲೈಟ್. ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ರಾಜೇಂದ್ರ ಪ್ರಸಾದ್, ಶಾಶ್ವತ ಚಟರ್ಜಿ, ಪಶುಪತಿ, ಬ್ರಹ್ಮಾನಂದಂ, ಶೋಬನಾ, ಅನ್ನಾ ಬೆನ್, ಮೃಣಾಲ್ ಠಾಕೂರ್ ಮತ್ತು ಹರ್ಷಿತ್ ಮಲ್ಗಿರೆಡ್ಡಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಡೈರೆಕ್ಟರ್ ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾಗೆ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಬಿಗ್ ಬಜೆಟ್ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಪಂಚದಾದ್ಯಂತ ಐಮ್ಯಾಕ್ಸ್, 4ಡಿಎಕ್ಸ್ ಮತ್ತು 3ಡಿ ಫಾರ್ಮ್ಯಾಟ್ನಲ್ಲಿ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ.