ETV Bharat / entertainment

3 ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿಗೂ ಅಧಿಕ ಕಲೆಕ್ಷನ್​​: 'ಕಲ್ಕಿ' ಅಬ್ಬರ ಜೋರು - Kalki Worldwide Collection - KALKI WORLDWIDE COLLECTION

'ಕಲ್ಕಿ 2898 ಎಡಿ' ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿಗೂ ಅಧಿಕ ಮತ್ತು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ದಾಖಲೆ ಬರೆದಿದೆ.

Kalki 2898 AD Poster
'ಕಲ್ಕಿ 2898 ಎಡಿ ಪೋಸ್ಟರ್ (Kalki 2898 AD X handle)
author img

By ETV Bharat Karnataka Team

Published : Jun 30, 2024, 6:08 PM IST

ಪ್ಯಾನ್​​ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ತೆರೆಕಂಡ ಕೇವಲ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿ ದಾಖಲೆ ಬರೆದಿದೆ. ಫ್ಯಾನ್ಸ್​​​ ತಮ್ಮ ಮೆಚ್ಚಿನ ನಟರ ಸಿನಿಮಾ ಸಾಧನೆಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಬಹುಬೇಡಿಕೆ ಕಲಾವಿದರು ಬಣ್ಣ ಹಚ್ಚಿದ್ದಾರೆ. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್​​ ಬರೋಬ್ಬರಿ 600 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ ಎಂದು ವರದಿಯಾಗಿದೆ. ಈಗಾಗಲೇ ಸಿನಿಮಾ ಜಾಗತಿಕವಾಗಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿದ್ದು, ಒಟಿಟಿ ರೈಟ್ಸ್ ಕೂಡ ದೊಡ್ಡ ಮಟ್ಟಕ್ಕೆ ಸೇಲ್​ ಆಗಿದೆ. ಹಾಗಾಗಿ ಸಿನಿಮಾಗೆ ಹಾಕಿದ ಬಂಡವಾಳ ಬಹುತೇಕ ವಾಪಸ್​ ಬಂದಂತಾಗಿದೆ.

ಪ್ಯಾನ್​ ಇಂಡಿಯಾ ಸ್ಟಾರ್​​ ಪ್ರಭಾಸ್ ಜೊತೆ ಬಾಲಿವುಡ್​ ಸೂಪರ್ ಸ್ಟಾರ್​ಗಳಾದ ಅಮಿತಾಭ್​​ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಅತಿಥಿ ಪಾತ್ರಗಳಲ್ಲಿದ್ದರೆ, ದಿಶಾ ಪಟಾನಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೂರೇ ದಿನದಲ್ಲಿ ಭಾರತದಲ್ಲಿ ₹200 ಕೋಟಿ ಗಳಿಸಿದ 'ಕಲ್ಕಿ 2898 ಎಡಿ' - Kalki Movie Collection

ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಕೇವಲ ಮೂರು ದಿನಗಳಲ್ಲಿ 220 ಕೋಟಿ ರೂ. ಗಳಿಸಿರುವ ಈ ಮೈಥೋಲಾಜಿಕಲ್​ ಸೈನ್ಸ್ ಫಿಕ್ಷನ್​ ಥ್ರಿಲ್ಲರ್ ವಿಶ್ವದಾದ್ಯಂತ 415 ಕೋಟಿ ರೂ. ಕಲೆಕ್ಷನ್​​ ಮಾಡುವಲ್ಲಿ ಯಶಸ್ವಿಯಾಗಿದೆ. ವೈಜಯಂತಿ ಮೂವೀಸ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಚಿತ್ರದ ಒಟ್ಟು ಗಳಿಕೆಯನ್ನು ಬಹಿರಂಗಪಡಿಸಿದೆ. ಪ್ರಪಂಚದಾದ್ಯಂತದ ಒಟ್ಟು ಕಲೆಕ್ಷನ್​ ಅಂಕಿ-ಅಂಶವನ್ನು ಹಂಚಿಕೊಂಡ ಚಿತ್ರ ತಯಾರಕರು "ದಿ ಫೋರ್ಸ್ ಈಸ್ ಅನ್​​​ಸ್ಟಾಪಬಲ್" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವ ಚಾಂಪಿಯನ್ನರಿಗೆ​ ಯಶ್​​, ಸುದೀಪ್​, ರಶ್ಮಿಕಾ ಸೇರಿ ಕನ್ನಡ ತಾರೆಯರಿಂದ ಅಭಿನಂದನೆ - Sandalwood Stars Reactions

ಕಲ್ಕಿ 2898 ಎಡಿ, ಹಿಂದೂ ಮಹಾಕಾವ್ಯ ಮಹಾಭಾರತದ ವಿಚಾರಗಳನ್ನು ಒಳಗೊಂಡ ವೈಜ್ಞಾನಿಕ ಕಾಲ್ಪನಿಕ ಕಥೆ. ವಿಶ್ವದಾದ್ಯಂತ ಜೂನ್​ 27ರಂದು ಆರು ಭಾಷೆಗಳಲ್ಲಿ - ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ವೈಜಯಂತಿ ಮೂವೀಸ್‌ನ ಬಿಗ್​ ಬಜೆಟ್​​ ಸಿನಿಮಾ ಮೊದಲ ದಿನವೇ ಜಗತ್ತಿನಾದ್ಯಂತ 191.5 ಕೋಟಿ ರೂ. ಕಲೆಕ್ಷನ್​​ ಮಾಡಿದೆ. ನಂತರ, ಶುಕ್ರವಾರದಂದು 107 ಕೋಟಿ ರೂ. ಮತ್ತು ಶನಿವಾರದಂದು 152.5 ಕೋಟಿ ರೂಪಾಯಿಗಳನ್ನು ಕಲೆಕ್ಷನ್​ ಮಾಡಿರುವ 'ಕಲ್ಕಿ 2898 ಎಡಿ'ಯ ಇಂದಿನ ಅಂದರೆ ಭಾನುವಾರದ ಕಲೆಕ್ಷನ್​ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.