ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸೇರಿದಂತೆ ಘಟಾನುಘಟಿಗಳ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಸುತ್ತಲಿನ ಸದ್ದು ಜೋರಾಗೇ ಇದೆ. ಟೀಸರ್‌ನಲ್ಲಿ ಹಿರಿಯ ಹೆಸರಾಂತ ನಟ ಅಮಿತಾಭ್ ಬಚ್ಚನ್ ಅವರನ್ನು ಅಶ್ವತ್ಥಾಮನಾಗಿ ಪರಿಚಯಿಸಲಾಗಿದ್ದು, ಪ್ರೇಕ್ಷಕರ ಉತ್ಸಾಹ ಉತ್ತುಂಗಕ್ಕೇರಿದೆ. ಚಿತ್ರದ ಕಥಾಹಂದರ ಬಹಿರಂಗಗೊಂಡಿಲ್ಲ. ಆದರೆ ಸಿನಿಮಾದ ಸಹ-ಲೇಖಕರು ಚಿತ್ರದ ವಿಶಿಷ್ಟ ಪರಿಕಲ್ಪನೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಬಿ.ಎಸ್ ಸರ್ವಜ್ಞ ಕುಮಾರ್ (B.S. Sarwagna Kumar), ತೆಲುಗು ಒಟಿಟಿ ಪ್ಲಾಟ್‌ಫಾರ್ಮ್ 'ಆಹಾ'ದಲ್ಲಿ ಲಭ್ಯವಿರುವ ಮೈ ಡಿಯರ್ ಡೋಂಗಾ ಸಿನಿಮಾ ನಿರ್ದೇಶಿಸಿ ಜನಪ್ರಿಯರಾಗಿದ್ದಾರೆ. ಕಲ್ಕಿ 2898 ಎಡಿ ಚಿತ್ರದಲ್ಲಿ ಸಹ - ಲೇಖಕರಾಗಿಯೂ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನಡೆದ ಮೈ ಡಿಯರ್ ಡೋಂಗಾ ಚಿತ್ರದ ಸಕ್ಸಸ್ ಸೆಲೆಬ್ರೇಶನ್ ಈವೆಂಟ್‌ನಲ್ಲಿ ಕಲ್ಕಿ ಚಿತ್ರದ ಅದ್ಭುತ ಪರಿಕಲ್ಪನೆ ಮತ್ತು ಕಥಾ ನಿರೂಪಣೆ ಬಗ್ಗೆ ಸುಳಿವು ಬಿಟ್ಟುಕೊಟ್ಟರು.
ಈವೆಂಟ್‌ನಲ್ಲಿ ಬರಹಗಾರರಿಗೆ ಕಲ್ಕಿ 2898 ಎಡಿ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ, "ನಾನು ಕಲ್ಕಿ 2898 ಎಡಿ ಚಿತ್ರದಲ್ಲಿ ಹೆಚ್ಚುವರಿ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ನಾನು ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಚಿತ್ರ ಈ ಹಿಂದೆ ಯಾರೂ ಪ್ರಯತ್ನಿಸದ ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿರುತ್ತದೆ ಎಂಬುದನಷ್ಟೇ ಹೇಳಬಲ್ಲೆ" ಎಂದು ಉತ್ತರಿಸಿದರು.
ಸ್ವತಃ ನಾಯಕ ನಟ ಪ್ರಭಾಸ್, ಐಪಿಎಲ್ ಪಂದ್ಯದ ವೇಳೆ ಪ್ರಚಾರ ನಡೆಸಿದ್ದಾರೆ. ಪಂದ್ಯದ ವೇಳೆ ಪ್ರಸಾರವಾದ ಪ್ರಚಾರದ ವಿಡಿಯೋದಲ್ಲಿ, ಚಿತ್ರದಲ್ಲಿರುವ ತಮ್ಮ ಭೈರವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ಪ್ರಚಾರದ ಜೊತೆ ತಮ್ಮ ಪಾತ್ರವನ್ನೂ ಪ್ರಚಾರ ಮಾಡಿದ್ದರು. ಕ್ರೀಡೆ ಮತ್ತು ಸಿನಿಮಾ ಕ್ಷೇತ್ರಗಳೆರಡರ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ.
ಇದನ್ನೂ ಓದಿ: ಯಶ್ ನಟನೆಯ 'ಟಾಕ್ಸಿಕ್'ನ ಕರೀನಾ ಕಪೂರ್ ಪಾತ್ರಕ್ಕೆ ನಯನತಾರ - Yash Toxic
ಚಿತ್ರದ ಸುತ್ತಲಿನ ನಿರೀಕ್ಷೆಯ ಹೊರತಾಗಿಯೂ, ಇತ್ತೀಚಿನ ಪೋಸ್ಟರ್‌ನಲ್ಲಿನ ದೀಪಿಕಾ ಪಡುಕೋಣೆ ಅವರ ನೋಟದ ಬಗ್ಗೆ ಟೀಕೆಗಳು ವ್ಯಕ್ತವಾದವು. ಡ್ಯೂನ್‌ನಲ್ಲಿನ ಝೆಂಡಾಯಾ ಅವರ ನೋಟಕ್ಕೆ ಹೋಲಿಸಲಾಯಿತು. ಈವೆಂಟ್ ಒಂದರಲ್ಲಿ ನಾಗ್ ಅಶ್ವಿನ್ ಈ ಹೋಲಿಕೆಗಳನ್ನು ನಿರಾಕರಿಸಿ, ಚಿತ್ರದ ವಿಶಿಷ್ಟತೆ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ಶುಕ್ರವಾರದ ಹೈವೋಲ್ಟೇಜ್ ಐಪಿಎಲ್ ಪಂದ್ಯದ ಪ್ರಚಾರಕ್ಕೆ 'ಕಲ್ಕಿ'ಯ 'ಭೈರವ'ನಾಗಿ ಬಂದ ಪ್ರಭಾಸ್ - Prabhas
ಅಶ್ವಿನಿ ದತ್ ನಿರ್ಮಾಣದ 'ಕಲ್ಕಿ 2898 ಎಡಿ' ಜೂನ್ 27ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಚಿತ್ರ ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಎಂದು ನಂಬಲಾಗಿದೆ. ಆರಂಭದಲ್ಲಿ ವೈಜ್ಞಾನಿಕ ಚಿತ್ರ ಎಂದು ಹೇಳಲಾಗಿತ್ತು. ಇತ್ತೀಚಿನ ಟೀಸರ್‌ನಲ್ಲಿ, ಅಮಿತಾಭ್ ಅವರ ಅಶ್ವತ್ಥಾಮನ ಚಿತ್ರಣವನ್ನು ನೋಡಿದ ನಂತರ ವಿಜ್ಞಾನದೊಂದಿಗೆ ಪುರಾಣದ ಅಂಶಗಳನ್ನು ಒಳಗೊಂಡಿರುವ ವಿಶಿಷ್ಟ ಸಿನಿಮಾ ಸಾಹಸ ಎಂದು ಸಿನಿಪ್ರಿಯರು ನಂಬಿದ್ದಾರೆ.