ETV Bharat / entertainment

ಶಾರುಖ್ ಖಾನ್​ ಆರೋಗ್ಯದಲ್ಲಿ ಚೇತರಿಕೆ, ಭಾನುವಾರ ಫೀಲ್ಡ್​​ಗೆ: ಜೂಹಿ ಚಾವ್ಲಾ - Shah Rukh Khan Health - SHAH RUKH KHAN HEALTH

ನಟ ಶಾರುಖ್ ಖಾನ್ ಆರೋಗ್ಯದ ಬಗ್ಗೆ ನಟಿ ಜೂಹಿ ಚಾವ್ಲಾ ಮಾಹಿತಿ ನೀಡಿದ್ದಾರೆ.

Juhi Chawla, Shah Rukh Khan
ಜೂಹಿ ಚಾವ್ಲಾ, ಶಾರುಖ್​ ಖಾನ್​ (ANI)
author img

By ETV Bharat Karnataka Team

Published : May 23, 2024, 10:26 AM IST

ಬಾಲಿವುಡ್‌ ಸೂಪರ್​ ಸ್ಟಾರ್ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್‌ ಕಾರಣ ಅಹಮದಾಬಾದ್‌ನ ಕೆಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ-ಮಾಲೀಕರೂ ಆಗಿರುವ ಬಾಲಿವುಡ್ ನಟಿ ಜೂಹಿ ಚಾವ್ಲಾ, ಶಾರುಖ್‌ ಹೆಲ್ತ್ ಅಪ್ಡೇಟ್ಸ್ ಒದಗಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜೂಹಿ ಚಾವ್ಲಾ, ಅಭಿಮಾನಿಗಳಿಗೆ ಧೈರ್ಯ ತುಂಬಿದರು. "ಶಾರುಖ್ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಭಾನುವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್) ಫೈನಲ್‌ನಲ್ಲಿ ತಮ್ಮ ತಂಡವನ್ನು ಹುರಿದುಂಬಿಸಲಿದ್ದಾರೆ. ಮೊನ್ನೆ ರಾತ್ರಿ ಅವರು ಆರೋಗ್ಯವಾಗಿರಲಿಲ್ಲ. ಆದರೆ ಸೂಕ್ತ ಆರೈಕೆಯ ನಂತರ ಚೇತರಿಸಿಕೊಂಡಿದ್ದಾರೆ" ಎಂದು ಮಾಹಿತಿ ಹಂಚಿಕೊಂಡರು.

"ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಈ ವಾರಾಂತ್ಯ ಐಪಿಎಲ್​​​ ಫೈನಲ್‌ನಲ್ಲಿ ತಮ್ಮ ತಂಡದ ಆಟವನ್ನು ಸ್ಟೇಡಿಯಂ ಸ್ಟ್ಯಾಂಡ್‌ನಲ್ಲಿ ನಿಂತು ವೀಕ್ಷಿಸಲಿದ್ದಾರೆ" ಎಂದು ಜೂಹಿ ತಿಳಿಸಿದರು.

ಜೂಹಿ ಚಾವ್ಲಾ ಮತ್ತು ಪತಿ ಜಯ್ ಮೆಹ್ತಾ ಶಾರುಖ್‌ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಕೂಡ ಆಗಮಿಸಿರುವ ವಿಡಿಯೋ ವೈರಲ್​​ ಆಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ವೀಕ್ಷಿಸಲು ಎಸ್‌ಆರ್​ಕೆ ಮಂಗಳವಾರ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ನಟನ ಜೊತೆಗೆ ಮ್ಯಾನೇಜರ್ ಪೂಜಾ ದದ್ಲಾನಿ, ಕಿರಿಯ ಪುತ್ರ ಅಬ್ರಾಮ್ ಮತ್ತು ಮಗಳು ಸುಹಾನಾ ಖಾನ್ ಇದ್ದರು. ಮಂಗಳವಾರ ರಾತ್ರಿ ಕೆಕೆಆರ್​​ ತಂಡವನ್ನು ಬೆಂಬಲಿಸಲು ಸುಹಾನಾ, ಗೆಳತಿಯರಾದ ಅನನ್ಯಾ ಪಾಂಡೆ, ಶನಾಯಾ ಕಪೂರ್ ಮತ್ತು ತಂಡದ ಸಹ-ಮಾಲೀಕರಾದ ಜೂಹಿ ಚಾವ್ಲಾ ಜಾಗೂ ಜಯ್​​​ ಮೆಹ್ತಾ ಕ್ರೀಡಾಂಗಣದಲ್ಲಿದ್ದರು.

ಇದನ್ನೂ ಓದಿ: ನಟ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು; ಅಹಮದಾಬಾದ್‌ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಬಳಿಕ ಡಿಸ್ಚಾರ್ಜ್ - Shah Rukh Khan Health

ಆಟದ ನಂತರ ಶಾರುಖ್​​, ಸುಹಾನಾ ಮತ್ತು ಅಬ್ರಾಮ್ ಅಭಿಮಾನಿಗಳಿಗೆ ಶುಭಾಶಯ ಕೋರಲೆಂದು ನರೇಂದ್ರ ಮೋದಿ ಸ್ಟೇಡಿಯಂಗೆ ಒಂದು ಸುತ್ತು ಹಾಕಿದರು. ನಟ ತನ್ನ ಪಾಪ್ಯುಲರ್​​ ಸಿಗ್ನೇಚರ್ ಸ್ಟೆಪ್​ ಪ್ರದರ್ಶಿಸಿದರು. ಈ ಕುರಿತ ಸ್ಟೇಡಿಯಂನಿಂದ ಹಲವು ವಿಡಿಯೋಗಳು ವೈರಲ್​​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿವೆ.

ಇದನ್ನೂ ಓದಿ: ಬಿಗ್ ಬಾಸ್ ಒಟಿಟಿ ಸೀಸನ್ 3 ಟೀಸರ್​ ರಿಲೀಸ್​: ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಅನಿಲ್​ ಕಪೂರ್? - Bigg Boss OTT

ಶಾರುಖ್ ಸಿನಿಮಾ: ಶಾರುಖ್​ ಕೊನೆಯದಾಗಿ ರಾಜ್‌ಕುಮಾರ್ ಹಿರಾನಿಯವರ ಡಂಕಿ ಚಿತ್ರದಲ್ಲಿ ಕಾಣಿಸಿಕೊಂಡರು. ವರದಿಗಳ ಪ್ರಕಾರ, ಜುಲೈನಲ್ಲಿ 'ಕಿಂಗ್' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.