ETV Bharat / entertainment

ಜೂ.ಎನ್​ಟಿಆರ್​ ಜನ್ಮದಿನಕ್ಕೆ 'ದೇವರ' ಫಸ್ಟ್ ಸಾಂಗ್​ ರಿಲೀಸ್​​ - Jr NTR Devara - JR NTR DEVARA

ಮೇ 20, ಜೂನಿಯರ್ ಎನ್​​​ಟಿಆರ್​ ಹುಟ್ಟುಹಬ್ಬದ ಸಂದರ್ಭ ದೇವರ ಚಿತ್ರದ ಮೊದಲ ಹಾಡು ಅನಾವರಣಗೊಳ್ಳುವ ಸಾಧ್ಯತೆಯಿದೆ.

Jr NTR starrer Devara
ಜೂ.ಎನ್​ಟಿಆರ್ (Film poster)
author img

By ETV Bharat Karnataka Team

Published : May 15, 2024, 6:27 PM IST

''ದೇವರ: ಭಾಗ 1'' 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಆರ್​ಆರ್​ಆರ್​ ಖ್ಯಾತಿಯ ಜೂನಿಯರ್ ಎನ್​ಟಿಆರ್​ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್, ಸೂಪರ್ ಸ್ಟಾರ್ ಸೈಫ್​ ಅಲಿ ಖಾನ್​ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಎದುರು ನೋಡುತ್ತಿದ್ದು, ಸದ್ಯ ಸಾಂಗ್​​ ರಿಲೀಸ್​ ಡೇಟ್​​ ಸಖತ್​ ಸದ್ದು ಮಾಡುತ್ತಿದೆ.

ಮೇ. 20ರಂದು ನಾಯಕ ನಟ ಜೂನಿಯರ್ ಎನ್​ಟಿಆರ್​​ ಜನ್ಮದಿನ. ಹುಟ್ಟುಹಬ್ಬದ ಸಂದರ್ಭ 'ದೇವರ' ಚಿತ್ರದ ಮೊದಲ ಗೀತೆ ಅನಾವರಣಗೊಳ್ಳಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಚಿತ್ರತಂಡ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಮ್ಯೂಸಿಕ್ ಸಂಸ್ಥೆಯ ಲೇಟೆಸ್ಟ್ ಸೊಷಿಯಲ್​ ಮೀಡಿಯಾ ಪೋಸ್ಟ್ ದೇವರ ಸುತ್ತಲಿನ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.

ವರದಿಗಳ ಪ್ರಕಾರ, ಮೇ. 20ರಂದು ದೇವರ ಮೊದಲ ಹಾಡು ಅನಾವರಣಗೊಳ್ಳಲಿದೆ. ಇದೀಗ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್ ಎಕ್ಸ್​​​ನಲ್ಲಿ ಟಿ - ಸೀರಿಸ್​​​ ಕೂಡ ದೇವರ ಕುರಿತಾದ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದು, ಅಂತೆ ಕಂತೆಗಳಿಗೆ ಬಹುತೇಕ ಫುಲ್​​ ಸ್ಟಾಪ್​ ಇಟ್ಟಿದೆ. ಹೆಚ್ಚೇನನ್ನೂ ಬಹಿರಂಗಪಡಿಸದಿದ್ದರೂ, ಟಿ - ಸೀರಿಸ್​​​ ಚಿತ್ರದ ಒಂದು ಫೋಟೋ ಶೇರ್ ಮಾಡಿದೆ. ಅದಕ್ಕೆ 'ದೇವರ' ಎಂದು ಕ್ಯಾಪ್ಷನ್ ಕೊಡಲಾಗಿದೆ. ಇದು ಹಾಡು ಬಿಡುಗಡೆ ಆಗಲಿದೆ ಎಂಬ ವದಂತಿಯನ್ನು ಬಹುತೇಕ ದೃಢೀಕರಿಸಿದೆ.

ಟಿ ಸೀರಿಸ್​ ಸೌತ್ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಜೂನಿಯರ್​ ಎನ್​ಟಿಆರ್​​ ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ "ಮ್ಯಾನ್​ ಆಫ್​ ಮಾಸೆಸ್", "ಆಲ್​ ಹೈಲ್​ ದಿ ಟೈಗರ್" ಮತ್ತು "ದೇವರ ಫಸ್ಟ್ ಸಿಂಗಲ್" ಎಂಬ ಹ್ಯಾಶ್‌ಟ್ಯಾಗ್‌ಗಳಿಂದ ಸಿನಿಮಾವನ್ನು ಟ್ರೆಂಡ್​​ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಭಾರತ ಮುನ್ನುಗ್ಗುತ್ತಿದೆ': ದೇಶದ ಅಭಿವೃದ್ಧಿ, ಅಟಲ್ ಸೇತು ಬಗ್ಗೆ ರಶ್ಮಿಕಾ ಗುಣಗಾನ - Rashmika Mandanna

ಕೊರಟಾಲ ಶಿವ ನಿರ್ದೇಶನದ ಈ ಚಿತ್ರವನ್ನು ಮೊದಲು ಒಂದೇ ಭಾಗದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ನಂತರ ತಯಾರಕರು ಎರಡು ಭಾಗಗಗಳಲ್ಲಿ ಚಿತ್ರ ಮೂಡಿ ಬರಲಿದೆ ಎಂದು ಘೋಷಿಸಿದರು. ಇದು ಜಾಹ್ನವಿ ಕಪೂರ್ ಅವರ ತೆಲುಗು ಚೊಚ್ಚಲ ಚಿತ್ರವೂ ಹೌದು. ಸೈಫ್ ಅಲಿ ಖಾನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗಿತ ಸಂಯೋಜಿಸುತ್ತಿದ್ದಾರೆ. ಈ ಮೊದಲು ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 10ಕ್ಕೆ ಮುಂದೂಡಿದರು. ಇನ್ನೂ, ಜೂನಿಯರ್ ಎನ್‌ಟಿಆರ್ ಕೂಡ 'ವಾರ್ 2' ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸಲಿದ್ದಾರೆ. ಸೂಪರ್ ಸ್ಟಾರ್ ಹೃತಿಕ್ ರೋಷನ್ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಚಂದು ಚಾಂಪಿಯನ್‌ ಪೋಸ್ಟರ್​: ದೈಹಿಕ ರೂಪಾಂತರಕ್ಕೆ ಒಳಗಾದ ಕಾರ್ತಿಕ್ ಆರ್ಯನ್ - Chandu Champion Poster

ETV Bharat Logo

Copyright © 2024 Ushodaya Enterprises Pvt. Ltd., All Rights Reserved.