ETV Bharat / entertainment

ಸೆಟ್ಟೇರಿದ ಜೂ.ಎನ್​ಟಿಆರ್-ಪ್ರಶಾಂತ್ ನೀಲ್​ ಕಾಂಬೋದ​ ಹೊಸ ಸಿನಿಮಾ - Prashanth Neel NTR31 - PRASHANTH NEEL NTR31

ಬೆರಳೆಣಿಕೆ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಅವರ​​​ ಹೊಸ ಸಿನಿಮಾದ ಪೂಜಾ ಕಾರ್ಯಕ್ರಮ ಇಂದು ನೆರವೇರಿಸಿತು. ತಾತ್ಕಾಲಿಕ ಶೀರ್ಷಿಕೆಯ 'ಎನ್​ಟಿಆರ್​​ 31'ರಲ್ಲಿ ಆರ್​ಆರ್​ಆರ್​ ಸ್ಟಾರ್ ಜೂನಿಯರ್​ ಎನ್​ಟಿಆರ್​​ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ.

Jr NTR, Prashanth Neel
ಜೂ.ಎನ್​ಟಿಆರ್, ಪ್ರಶಾಂತ್ ನೀಲ್​​​ (ETV Bharat)
author img

By ETV Bharat Karnataka Team

Published : Aug 9, 2024, 4:24 PM IST

ಕೆಜಿಎಫ್​​​, ಸಲಾರ್​​​ ಖ್ಯಾತಿಯ ಪ್ರಶಾಂತ್ ನೀಲ್ ಸಾರಥ್ಯದ ಮುಂದಿನ ಬಹುನಿರೀಕ್ಷಿತ ಚಿತ್ರವೇ 'ಎನ್​ಟಿಆರ್​ 31'. ಕೆಲವೇ ಸಿನಿಮಾಗಳಿಂದ ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿರುವ ಕನ್ನಡದ ನಿರ್ದೇಶಕರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ಹೊಸ ಸಿನಿಮಾ ಸೆಟ್ಟೇರಿತು. ಸೌತ್​ ಸೂಪರ್​ ಸ್ಟಾರ್​ ಜೂನಿಯರ್​ ಎನ್​ಟಿಆರ್​ ಬಣ್ಣ ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದಾರೆ.

ಬ್ಲಾಕ್​ಬಸ್ಟರ್​​ 'ಆರ್​​ಆರ್​​ಆರ್​' ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ತಮ್ಮ ಮುಂದಿನ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ 'ದೇವರ' ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಿನಿಮಾ ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ದೇವರ ಭಾಗ 1ರ ಬಿಡುಗಡೆಗೂ ಮುನ್ನ ಜೂನಿಯರ್ ಎನ್​ಟಿಆರ್​ ತಮ್ಮ ಎನ್​ಟಿಆರ್​​ 31 ಪ್ರೊಜೆಕ್ಟ್​​ನ ಪೂಜಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

'ಎನ್​ಟಿಆರ್​​ 31' ತಾತ್ಕಾಲಿಕ ಶೀರ್ಷಿಕೆ. ಚಿತ್ರದ ಅಧಿಕೃತ ಶೀರ್ಷಿಕೆ ಡ್ರ್ಯಾಗನ್ ಆಗಬಹುದು ಎಂಬ ಊಹೆಯಿದೆ. ಪ್ರಶಾಂತ್ ನೀಲ್ ಪ್ರೊಜೆಕ್ಟ್​​​ನ ಪೂಜೆ ನೆರವೇರಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

ಈ ಪ್ರೊಜೆಕ್ಟ್​​ ಹಿಂದಿರುವ ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್​​ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನೂ ಇಂದೇ ಘೋಷಿಸಿದೆ. "ಈ ಬಾರಿ, ಅವನ ಆಳ್ವಿಕೆಯಲ್ಲಿ ಭೂಮಿ ಕಂಪಿಸಲಿದೆ! ಎನ್​​ಟಿಆರ್​​ ನೀಲ್ ಸಿನಿಮಾ 2026ರ ಜನವರಿ 9ರಂದು ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿಂದು ನಡೆದ ಪೂಜಾ ಸಮಾರಂಭದ ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​​ಫಾರ್ಮ್​ಗಳಲ್ಲಿ ವೈರಲ್​​ ಅಗಿದೆ. ವೈರಲ್ ಕ್ಲಿಪ್‌ಗಳಲ್ಲಿ ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಚಿತ್ರದ ಪಾತ್ರವರ್ಗ, ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳೆಯುತ್ತಿರೋ ಪ್ರತಿಭೆಗೆ ಕರೆಮಾಡಿದ ಯಶ್​: 'ನಮ್ಮೆಲ್ಲರನ್ನು ಮೀರಿಸುವಂತಾಗಿ, ಅದೇ ನಮಗೆ ಕೊಡೋ ಗೌರವ'ವೆಂದ ರಾಕಿಂಗ್​ ಸ್ಟಾರ್ - Yash calls Kanti

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಆರ್​ಆರ್​ಆರ್​ ಸ್ಟಾರ್ ಜೂನಿಯರ್ ಎನ್​​ಟಿಆರ್ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಿದು. ಈ ಹಿಂದೆ, ಜೂನಿಯರ್ ಎನ್‌ಟಿಆರ್ ದೇವರ ಭಾಗ 1ರ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ನೀಲ್ ಸೌತ್​ನ ಮತ್ತೋರ್ವ ಸೂಪರ್‌ಸ್ಟಾರ್ ಪ್ರಭಾಸ್‌ ಅವರ ಸಲಾರ್ ಭಾಗ 2: ಶೌರ್ಯಾಂಗ ಪರ್ವಂ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಈ ಇಬ್ಬರು ಸದ್ಯ ತಮ್ಮ ಎನ್​ಟಿಆರ್​​31ರ ಪ್ರಯಾಣ ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: 'ಭೀಮ'ನ ಅದ್ಧೂರಿ ಎಂಟ್ರಿ: ವಿಶೇಷಚೇತನ ಅಭಿಮಾನಿಯನ್ನು ಥಿಯೇಟರ್​ಗೆ ಸ್ವಾಗತಿಸಿದ ದುನಿಯಾ ವಿಜಯ್​​ - Bheema Grand Release

ಜೂನಿಯರ್ ಎನ್​​ಟಿಆರ್​​ ದೇವರ ಸಿನಿಮಾ ಬಗ್ಗೆ ನೋಡೋದಾದ್ರೆ, ಪಾರ್ಟ್ 1 ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಮೂಲಕ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​ ತೆಲುಗು ಮಂದಿಗೆ ಹತ್ತಿರವಾಗಲಿದ್ದಾರೆ. ಜೊತೆಗೆ ಬಾಲಿವುಡ್​ನ ಸೂಪರ್​ ಸ್ಟಾರ್​ ಸೈಫ್​ ಅಲಿ ಖಾನ್​​ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ, 2025ರಲ್ಲಿ ತೆರೆಕಾಣಲಿರುವ ಬಾಲಿವುಡ್​ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ವಾರ್ 2ರಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.