ETV Bharat / entertainment

ಜವಾನ್​ 2: ಮತ್ತೊಮ್ಮೆ ಕೈ ಜೋಡಿಸಲಿದ್ದಾರಾ ಶಾರುಖ್​-ಅಟ್ಲೀ? - Jawan 2 - JAWAN 2

ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಚಿತ್ರರಂಗದ ಹೆಸರಾಂತ ನಿರ್ದೇಶಕ ಅಟ್ಲೀ ತಮ್ಮ ಮುಂದಿನ ಪ್ರಾಜೆಕ್ಟ್ಸ್​​ ಬಗ್ಗೆ ಮಾತನಾಡಿದ್ದಾರೆ.

ಅಟ್ಲೀ ಮತ್ತು ಶಾರುಖ್​ ಖಾನ್​
Atlee and Shah Rukh Khan
author img

By ETV Bharat Karnataka Team

Published : Mar 22, 2024, 9:55 AM IST

2023ರಲ್ಲಿ ಬಿಡುಗಡೆಯಾದ 'ಜವಾನ್​​' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿತ್ತು. ದಕ್ಷಿಣ ಚಿತ್ರರಂಗದ ಹೆಸರಾಂತ ನಿರ್ದೇಶಕ ಅಟ್ಲೀ ಹಾಗೂ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡಿರುವ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​​ ಕಾಂಬೋದಲ್ಲಿ ಬಂದ ಈ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಜವಾನ್‌ ಮೂಲಕ ಅಟ್ಲೀ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಆ್ಯಕ್ಷನ್ ಥ್ರಿಲ್ಲರ್‌ನೊಂದಿಗೆ ದಾಖಲೆಗಳನ್ನು ಪುಡಿಗಟ್ಟಿರುವ ಅಟ್ಲೀ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಚಿತ್ರದ ಮುಂದುವರಿದ ಕುರಿತು ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದರು.

ಕಳೆದ ವರ್ಷ ಸೆಪ್ಟೆಂಬರ್​​ 7ರಂದು ಚಿತ್ರಮಂದಿರ ಪ್ರವೇಶಿಸಿದ ಅರುಣ್ ಕುಮಾರ್ (ಅಟ್ಲೀ) ನಿರ್ದೇಶನದ ಜವಾನ್ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಜವಾನ್​ ಮೂಲಕ ಅಟ್ಲೀ ಹಿಂದಿ ಪ್ರೇಕ್ಷರನ್ನೂ ಸೆಳೆದರು. ಶಾರುಖ್ ಖಾನ್ ಅವರ ಸ್ಟಾರ್ ಪವರ್ ಕೂಡಾ ಹೆಚ್ಚಿತು. ಚಿತ್ರದ ಕಥಾಹಂದರ, ಆ್ಯಕ್ಷನ್ ಸೀನ್ಸ್, ಹಾಡುಗಳು, ಪಾತ್ರವರ್ಗ ಎಲ್ಲವೂ ಗಲ್ಲಾಪೆಟ್ಟಿಗೆ ಯಶಸ್ಸಿಗೆ ಕಾರಣವಾಯ್ತು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅಟ್ಲೀ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ತಮ್ಮ ಮುಂಬರುವ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು.

ಜವಾನ್ 2ನಲ್ಲಿ ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆ ಎದುರಾದಾಗ, "ಅದರ ಬಗ್ಗೆ ಖಚಿತತೆ ಇಲ್ಲ. ಆದರೆ ನಿಮಗೆ ಸರ್ಪ್ರೈಸ್​ ಎನಿಸುವಂಥದ್ದನ್ನು ಬರೆಯುತ್ತೇನೆ. ಪ್ರತೀ ಚಿತ್ರ, ಸೀಕ್ವೆಲ್ ಆಗುವ ಅವಕಾಶ ಹೊಂದಿರುತ್ತದೆ. ಆದರೆ ನಾನು ಯಾವಾಗಲೂ ಹೊಸ ಮತ್ತು ಅನಿರೀಕ್ಷಿತ ಕಂಟೆಂಟ್​ನಿಂದ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತೇನೆ. ನಿಮಗೆ ಏನನ್ನಾದರೂ ತಂದೇ ತರುತ್ತೇನೆ, ನೋಡೋಣ" ಎಂದು ಉತ್ತರಿಸಿದರು.

ಇದನ್ನೂ ಓದಿ: ಕಾಲ್ನಡಿಗೆ ಮೂಲಕ ತಿರುಮಲಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಟಿ ಜಾಹ್ನವಿ ಕಪೂರ್​ - Jahnavi Kapoor visits Tirupati

ಶಾರುಖ್ ಖಾನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಯೂ ಎದುರಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಖಂಡಿತವಾಗಿಯೂ, ನಿರಾಕರಿಸುವ ಮಾತೇ ಇಲ್ಲ. ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ಯಾವಾಗ, ಹೇಗೆ ಮತ್ತು ಏನು ಎಂಬುದು ಸಂಪೂರ್ಣವಾಗಿ ಶಾರುಖ್​ ಸರ್​ಗೆ ಬಿಟ್ಟಿದ್ದು" ಎಂದು ತಿಳಿಸಿದರು. ಎಸ್‌ಆರ್‌ಕೆ ಜೊತೆ ಕೆಲಸ ಮಾಡಿದ ಅನುಭವ ಮತ್ತು ಜವಾನ್​​ ಚಿತ್ರೀಕರಣದ ವಾತಾವರಣ ಹೇಗಿತ್ತು ಎಂದು ಕೇಳಲಾಯಿತು. "ಅದು ಅದ್ಭುತ. ಅವರು ಅತ್ಯಂತ ಖುಷಿಯ ಮತ್ತು ಭಾವನಾತ್ಮಕವಾಗಿ ವ್ಯಕ್ತಿ. ದೂರದೃಷ್ಟಿವುಳ್ಳ ವ್ಯಕ್ತಿತ್ವ. ಚಲನಚಿತ್ರ ನಿರ್ಮಾಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರು ನನ್ನ ಸಿನಿಮಾದ ಬೈಬಲ್" ಎಂದು ಬಣ್ಣಿಸಿದರು.

ಇದನ್ನೂ ಓದಿ: 25M ಇನ್‌ಸ್ಟಾಗ್ರಾಮ್ ಫಾಲೋವರ್ಸ್​ ಸಂಪಾದಿಸಿದ ದಕ್ಷಿಣ ಭಾರತದ ಮೊದಲ ನಟ ಇವರು! - Allu Arjun

ಅಟ್ಲೀ ಸಿನಿಮಾ ಗಮನಿಸುವುದಾದರೆ, ತಾತ್ಕಾಲಿಕವಾಗಿ VD 18 ಎಂದು ಹೆಸರಿಸಿರುವ ಬಾಲಿವುಡ್​ ನಟ ವರುಣ್ ಧವನ್ ಅವರ ಸಿನಿಮಾ ತಂಡದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮುರಾದ್ ಖೇತಾನಿ ಜೊತೆ ಸಹ-ನಿರ್ಮಾಪಕನಾಗಿ ಈ ತಂಡದ ಭಾಗವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.