ETV Bharat / entertainment

ಜಾಹ್ನವಿ ಜನ್ಮದಿನ: ರಾಮ್​​ ಚರಣ್​ ಜೊತೆ ಹೊಸ ಸಿನಿಮಾ- ಅಧಿಕೃತ ಘೋಷಣೆ - RC 16

ತೆಲುಗಿನ 'ದೇವರ' ಬಳಿಕ ರಾಮ್​​ ಚರಣ್​ ಜೊತೆ ಸ್ಕ್ರೀನ್​​ ಶೇರ್ ಮಾಡಲು ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ರೆಡಿಯಾಗಿದ್ದಾರೆ.

Janhvi Kapoor movie with Ram Charan
ರಾಮ್​​ ಚರಣ್​ ಜೊತೆ ಜಾಹ್ನವಿ ಕಪೂರ್​ ಸಿನಿಮಾ
author img

By ETV Bharat Karnataka Team

Published : Mar 6, 2024, 1:19 PM IST

ಭಾರತೀಯ ಚಿತ್ರರಂಗದಲ್ಲಿ ಸಖತ್​​ ಹೆಸರು ಸಂಪಾದಿಸಿದ್ದ ನಟಿ ದಿ.ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್​​ ದಂಪತಿಯ ಹಿರಿಪುತ್ರಿ ಜಾಹ್ನವಿ ಕಪೂರ್​ ಅವರಿಗಿಂದು ಜನ್ಮದಿನದ ಸಂಭ್ರಮ. 27ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್​ ಬೆಡಗಿಗೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶಗಳು ಹರಿದುಬರುತ್ತಿವೆ. ಸಾಲು ಸಾಲು ಸಿನಿಮಾಗಳಲ್ಲಿ ಈ ಚೆಂದುಳ್ಳಿ ಚೆಲುವೆ ಬ್ಯುಸಿಯಾಗಿದ್ದು, ಇವರ ನಟನೆಯ ಬಹುನಿರೀಕ್ಷಿತ ಚಿತ್ರವೊಂದರ ಅಧಿಕೃತ ಮಾಹಿತಿ ಇದೀಗ ಬಹಿರಂಗಗೊಂಡಿದೆ.

'ಆರ್​ಆರ್​ಆರ್'​ ಸಿನಿಮಾದಲ್ಲಿ ಜೂನಿಯರ್​​ ಎನ್​ಟಿಆರ್​ ಮತ್ತು ರಾಮ್​ಚರಣ್​ ಅಮೋಘ ಅಭಿನಯ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಜೂನಿಯರ್​​ ಎನ್​ಟಿಆರ್ ಜೊತೆ 'ದೇವರ' ಸಿನಿಮಾದಲ್ಲಿ ನಟಿಸುವ ಮೂಲಕ ಜಾಹ್ನವಿ ಕಪೂರ್​​ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ರಾಮ್​ಚರಣ್​​ ಜೊತೆಗಿನ ಸಿನಿಮಾ ಕೂಡ ಅಫೀಶಿಯಲ್​​ ಆಗಿ ಅನೌನ್ಸ್ ಆಗಿದ್ದು, ಸಿನಿಪ್ರಿಯರು ಮತ್ತಷ್ಟು ಉತ್ಸುಕರಾಗಿದ್ದಾರೆ. ​

ತೆಲುಗು ಚಿತ್ರವೊಂದರಲ್ಲಿ ರಾಮ್ ಚರಣ್ ಜೊತೆ ಜಾಹ್ನವಿ ಕಪೂರ್ ಅಭಿನಯಿಸಲಿದ್ದಾರೆ ಎಂಬುದು ಈ ಹಿಂದೆ ಕೇವಲ ಊಹಾಪೋಹದ ವಿಷಯವಾಗಿತ್ತು. ಆದ್ರೀಗ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ಜಾಹ್ನವಿ ಜನ್ಮದಿನದ ಹಿನ್ನೆಲೆಯಲ್ಲಿ 'ಆರ್‌ಸಿ 16' ತಂಡ ನಾಯಕನಟಿಯನ್ನು ಚಿತ್ರಕ್ಕೆ ಬರಮಾಡಿಕೊಳ್ಳುವ ಪೋಸ್ಟ್ ಮೂಲಕ ಕಪೂರ್​ಗೆ ಬರ್ತ್​​ಡೇ ಗಿಫ್ಟ್​ ಕೊಟ್ಟಿದೆ.

ತಾತ್ಕಾಲಿಕ ಶೀರ್ಷಿಕೆ 'ಆರ್‌ಸಿ 16' ಹಿಂದಿರುವ ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಇಂದು ಸೋಷಿಯಲ್​ ಮೀಡಿಯಾದಲ್ಲಿ ಜಾಹ್ನವಿ ಕಪೂರ್​​ಗೆ ವಿಶೇಷವಾಗಿ ಶುಭ ಕೋರಿದೆ. ಈ ಮೂಲಕ ರಾಮ್​​ ಚರಣ್​​ ಜೊತೆ ಜಾಹ್ನವಿ ನಟಿಸುವುದು ಪಕ್ಕಾ ಆಗಿದೆ. ಆರ್​ಆರ್​ಆರ್​ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರುವ ಮಾಡಿರುವ ರಾಮ್​​ ಚರಣ್​ ಅವರ ಮುಂದಿನ ಪ್ರಾಜೆಕ್ಟ್​ಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಇನ್ನು, ಸಮಂತಾ ರುತ್​ ಪ್ರಭು ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಸಂಪರ್ಕಿಸಲಾಗಿದೆ ಎಂಬ ಊಹಾಪೋಹಗಳೂ ಇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬೀಳಬಹುದು.

ಇದನ್ನೂ ಓದಿ: 'ಹಾಡೇ ಹಿಂಗೈತೆ, ಸಿನಿಮಾ ಹೆಂಗಿರಬಹುದು?': ಉಪ್ಪಿಯ 'UI' ಟ್ರೋಲ್​​ ಸಾಂಗ್​​ಗೆ ಹುಬ್ಬೇರಿಸಿದ ಫ್ಯಾನ್ಸ್

ಸೂಪರ್​ ಹಿಟ್ 'ಉಪ್ಪೇನಾ' ಸಿನಿಮಾಗೆ ಹೆಸರುವಾಸಿಯಾಗಿರುವ ಬುಚ್ಚಿ ಬಾಬು ಸನಾ ನಿರ್ದೇಶನದ ಆರ್‌ಸಿ 16 ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಪ್ರಸ್ತುತಪಡಿಸುತ್ತಿದೆ. ವೆಂಕಟ ಸತೀಶ್ ಕಿಲಾರು ನಿರ್ಮಾಣದ ಚೊಚ್ಚಲ ಚಿತ್ರವಿದು. ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಕೂಡ ಈ ಚಿತ್ರದ ಹಿಂದಿರುವ ಪ್ರೊಡಕ್ಷನ್​​ ಬ್ಯಾನರ್​ಗಳು. ಎ.ಆರ್.ರೆಹಮಾನ್ ಸಂಗೀತವಿರಲಿದೆ.

ಇದನ್ನೂ ಓದಿ: ಹೃತಿಕ್​ ರೋಷನ್​ ನಟನೆಯ 'ವಾರ್​ 2'ನಲ್ಲಿ ಜೂ. ಎನ್​ಟಿಆರ್​ ಪಾತ್ರವೇನು?

ಜೂನಿಯರ್ ಎನ್‌ಟಿಆರ್ ಅಭಿನಯದ 'ದೇವರ' ಚಿತ್ರದಲ್ಲೂ ಜಾಹ್ನವಿ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. 'ಆರ್‌ಸಿ 16' ತೆಲುಗಿನ ಎರಡನೇ ಚಿತ್ರ. ಕೊರಟಾಲ ಶಿವ ನಿರ್ದೇಶನದ ದೇವರ ಭಾಗ 1 ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ಜಾಹ್ನವಿ ನಟನೆಯ 'ಉಲಜ್ಹ್' ಮತ್ತು 'ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ' ಚಿತ್ರಗಳ ಶೂಟಿಂಗ್‌ ಪೂರ್ಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.