ETV Bharat / entertainment

ಮಂಗಳೂರಿಗೆ ಮತ್ತೊಂದು ಸೌಂದರ್ಯ ಪ್ರಶಸ್ತಿ; ಈಶಿಕಾ ಶೆಟ್ಟಿಗೆ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ' ಗರಿ

author img

By ETV Bharat Karnataka Team

Published : Mar 5, 2024, 1:05 PM IST

Updated : Mar 6, 2024, 2:53 PM IST

ಮಂಗಳೂರಿನ ಈಶಿಕಾ ಶೆಟ್ಟಿ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

Ishika Shetty from Mangalore
ಮಂಗಳೂರಿನ ಈಶಿಕಾ ಶೆಟ್ಟಿ
ಮಂಗಳೂರಿನ ಈಶಿಕಾ ಶೆಟ್ಟಿ

ಮಂಗಳೂರು(ದಕ್ಷಿಣ ಕನ್ನಡ): ಸೌಂದರ್ಯ ಸ್ಫರ್ಧೆಯಲ್ಲಿ ಮಂಗಳೂರಿನ ಬೆಡಗಿಯರು ಯಾವಾಗಲೂ ಮುಂದಿರುತ್ತಾರೆ. ಇದಕ್ಕೆ ಈ ಮೊದಲು ವಿಜೇತ ಯುವತಿಯರೇ ನಿದರ್ಶನ. ಈಗ ಮತ್ತೋರ್ವ ಕಡಲೂರಿನ ಯುವತಿ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ದೆಹಲಿಯ ಬಾಲಕಟೋರ ಸ್ಟೇಡಿಯಂನಲ್ಲಿ ಫೆಬ್ರವರಿ 27ರಂದು ಗ್ಲೋಬಲ್ ಇಂಡಿಯಾ ಎಂಟರ್‌ಟೈನ್​​ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತಪಡಿಸಿರುವ ಮಿಸ್ಸಸ್/ಮಿಸ್ಟರ್ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ 2024' ಪ್ರಶಸ್ತಿ ಗೆದ್ದರು.

ಮೂಲತಃ ತುಳುನಾಡಿನವರೇ ಆದ ಬಾಲಿವುಡ್‌ನ ಖ್ಯಾತ ಚಿತ್ರನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್, ಮೆಂಟರ್ ಜತಿನ್ ಕಿರ್ಬಾತ್ ಅವರು ಅಂತಿಮ ಸುತ್ತಿನ ಜ್ಯೂರಿಯಾಗಿ ಪಾಲ್ಗೊಂಡಿದ್ದ ಈ ಸೌಂದರ್ಯ ಸ್ಪರ್ಧೆಗೆ ದೇಶದ ನಾನಾ ರಾಜ್ಯಗಳ ಒಟ್ಟು 65 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಈಶಿಕಾ ಶೆಟ್ಟಿ ಪ್ರಥಮ ಪ್ರಶಸ್ತಿ ಪಡೆದರು.

ಕಾವೂರಿನ ಶಿವನಗರದಲ್ಲಿ ವಾಸವಾಗಿರುವ ಈಶಿಕಾ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ. ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸಕ್ತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. 2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌದರ್ಯ ಸ್ಪರ್ಧೆಯಲ್ಲಿ ಮಿಸ್‌ ಟೀನ್ ಮಂಗಳೂರು ಆಗಿಯೂ ಹಾಗೂ 2023ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ ಮಾಡೆಲಿಂಗ್ ಮ್ಯಾನೇಜ್ಮೆಂಟ್ ನಡೆಸಿರುವ ಮಿಸ್ ಟೀನ್ ಕರ್ನಾಟಕ 2023ರ ಸ್ಪರ್ಧೆಯಲ್ಲಿ ರನ್​ರ್​ ಅಪ್​ ಆಗಿಯೂ ಪ್ರಶಸ್ತಿ ಜಯಿಸಿದ್ದರು. ಬಾಲ್ಯದಿಂದಲೂ ಶಿಕ್ಷಣದ ಜೊತೆ ನಟನೆ, ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ಹಲವು ಸಾಧನೆಗಳನ್ನು ಮಾಡಿದ್ದಾರೆ. ಸಾಧಕಿಯನ್ನು ಹಲವು ಸಂಘ-ಸಂಸ್ಥೆಗಳೂ ಸನ್ಮಾನಿಸಿ ಗೌರವಿಸಿವೆ.

ಇದನ್ನೂ ಓದಿ: 6 ತಿಂಗಳ ಪ್ರಯತ್ನದಲ್ಲೇ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಯುವತಿ

ಈ ಬಗ್ಗೆ ಮಾತನಾಡಿದ ಈಶಿಕಾ ಶೆಟ್ಟಿ, "ಈ ಸ್ಪರ್ಧೆಯಲ್ಲಿ 65 ಮಂದಿ ಸ್ಪರ್ಧಿಗಳಿದ್ದರು. ಕರ್ನಾಟಕದಿಂದ ನಾನೊಬ್ಬಳೇ ಭಾಗಿಯಾಗಿದ್ದೆ. ಹೆಮ್ಮೆ ಅನ್ನಿಸುತ್ತಿದೆ. ನನಗೆ ಕ್ರಿಯೇಟಿವ್ ಪರ್ಸನ್ ಆಗಬೇಕು ಎಂಬ ಆಸಕ್ತಿ ಇತ್ತು. ಶಾಲಾ ದಿನಗಳಿಂದಲೇ ನಾಟಕದಲ್ಲಿ ಆಸಕ್ತಿ ಇತ್ತು. ಮಾಡಲಿಂಗ್ ಬಗ್ಗೆಯೂ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದೆ. 2022ರಲ್ಲಿ ಮಿಸ್ ಟೀನ್ ಮಂಗಳೂರು, 2023ರಲ್ಲಿ ಮಿಸ್ ಟೀನ್ ಕರ್ನಾಟಕ ರನ್ನರ್‌ ಅಪ್ ಆಗಿ ಹೊರಹೊಮ್ಮಿದ್ದೇನೆ. ನನಗೆ ಇನ್ನಷ್ಟು ಸಾಧನೆ ಮಾಡಬೇಕೆಂಬ ಕನಸಿದೆ" ಎಂದು ತಿಳಿಸಿದರು.

ಸೌಂದರ್ಯ ಪ್ರಶಸ್ತಿ ಗೆದ್ದ ಮಂಗಳೂರಿನ ಬೆಡಗಿಯರು:

  • ಸಿನಿ‌ ಶೆಟ್ಟಿ: ಉಡುಪಿ ಜಿಲ್ಲೆಯ ಸಿನಿ ಶೆಟ್ಟಿ 2022ರಲ್ಲಿ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022' ಪ್ರಶಸ್ತಿ ಗೆದ್ದುಕೊಂಡಿದ್ದರು. ಬೆಳ್ಳಂಪಳ್ಳಿ ಮೂಲದವರಾದ ಇವರು ಮುಂಬೈನಲ್ಲಿ ವಾಸವಾಗಿದ್ದಾರೆ.
    ಯಶಸ್ವಿನಿ ದೇವಾಡಿಗ
    ಯಶಸ್ವಿನಿ ದೇವಾಡಿಗ
  • ಯಶಸ್ವಿನಿ ದೇವಾಡಿಗ: ಸುರತ್ಕಲ್​ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಥಾಯ್ಲೆಂಡ್​ನಲ್ಲಿ ನಡೆದಿದ್ದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್​ನ್ಯಾಷನಲ್-2023 ಕಿರೀಟ ಮುಡಿಗೇರಿಸಿಕೊಂಡಿದ್ದರು. ಯಶಸ್ವಿನಿ ದೇವಾಡಿಗ ಮಂಗಳೂರಿನ ಸುರತ್ಕಲ್​ನ ಗೋವಿಂದದಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
  • ವೆನ್ಸಿಟಾ ಡಯಾಸ್: ಮಂಗಳೂರಿನ ವೆನ್ಸಿಟಾ ಡಯಾಸ್ ಎಂಬ ಯುವತಿ ಮಿಸ್ ಟೀನ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿ 2019ರಲ್ಲಿ ಥಾಯ್ಲೆಂಡ್​​​​ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
  • ಮಿಸೆಸ್ ಸ್ಪರ್ಧೆಯಲ್ಲೂ ಕಿರೀಟ: ಬೆಂಗಳೂರಿನಲ್ಲಿ ಪ್ರತಿಭಾ ಸೌನ್ಸಿಮಠ್ ಅವರು ಆಯೋಜಿಸಿದ ಏಳನೇ ಆವೃತ್ತಿಯ ಮಿಸೆಸ್ ಇಂಡಿಯಾ ಕರ್ನಾಟಕದಲ್ಲಿ ಮೂವರು ಮಹಿಳೆಯರು ಕಿರೀಟ ಜಯಿಸಿದ್ದರು. ಮಿಸೆಸ್ ಇಂಡಿಯಾ ಕರ್ನಾಟಕದ 20 ರಿಂದ 40 ವರ್ಷದ ವಿಭಾಗದಲ್ಲಿ ಸೌಮ್ಯಲತಾ, ಮಿಸೆಸ್ ಇಂಡಿಯಾ ಕರ್ನಾಟಕ ಕ್ಲಾಸಿಕ್ ವಿಭಾಗದಲ್ಲಿ (40-60 ವರ್ಷ) ಶಾಲೆಟ್ ಫೆರಾವೊ, ಡಾ‌.ಜೆಸ್ಸಿ ಮರಿಯಾ ಡಿಸೋಜ ಅವರು ರನ್ನರ್ ಅಪ್ ಆಗಿದ್ದರು.
  • ಐಶ್ವರ್ಯ ರೈ: ಮಂಗಳೂರು ಮೂಲದ ನಟಿ ಐಶ್ವರ್ಯ ರೈ ಅವರು 1994 ರಲ್ಲಿ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದ್ದರು. ಆ ಬಳಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ.

Last Updated : Mar 6, 2024, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.