ETV Bharat / entertainment

ದೇಶದ ಮೊದಲ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ: ಸಂಪೂರ್ಣ ಮಾಹಿತಿ - WAVES 2024

author img

By ETV Bharat Entertainment Team

Published : Jul 31, 2024, 7:53 PM IST

ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ ನವೆಂಬರ್ 20 ರಿಂದ 24ರವರೆಗೆ ಗೋವಾದಲ್ಲಿ ನಡೆಯಲಿದೆ.

Waves 2024
ವೇವ್ಸ್ 2024 (IANS photo)

ಹೈದರಾಬಾದ್: ಜಾಹೀರಾತು, ಗೇಮಿಂಗ್, ಕಂಟೆಂಟ್ ಪ್ರೊಡಕ್ಷನ್, ಅನಿಮೇಷನ್ ಅಥವಾ ಮ್ಯೂಸಿಕ್​​ ಕ್ಷೇತ್ರಗಳಲ್ಲಿನ ವೃತ್ತಿಪರರೇ?. ಹೌದು ಎಂದಾದ್ರೆ, ನಿಮಗಾಗಿ ಒಂದು ಸುದ್ದಿ ಇಲ್ಲಿದೆ. ನವೆಂಬರ್ 20 ರಿಂದ 24ರವರೆಗೆ ಗೋವಾದಲ್ಲಿ ಪ್ರತಿಷ್ಠಿತ ಇಂಟರ್​ ನ್ಯಾಷನಲ್​ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಈಎಫ್ಎಫ್​​ಐ) ಜೊತೆಗೆ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (World Audio Visual and Entertainment Summit - WAVES) ಅನ್ನು ಆಯೋಜಿಸಲು ದೇಶ ಸಜ್ಜಾಗಿದೆ. ಇದು ಇಂಡಸ್ಟ್ರಿಯ ಗೇಮ್ ಚೇಂಜರ್ ಆಗಲಿದೆ ಅನ್ನೋ ವಿಶ್ವಾಸವಿದೆ.

ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದರು.

ಈ ಶೃಂಗಸಭೆ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ನಡೆಯಲಿರುವ ಪ್ರಮುಖ ಈವೆಂಟ್​. ಜಾಹೀರಾತು, ಗೇಮಿಂಗ್, ಕಂಟೆಂಟ್​ ಪ್ರೊಡಕ್ಷನ್​​, ಅನಿಮೇಷನ್ ಮತ್ತು ಸಂಗೀತದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಒಂದು ಉತ್ತಮ ಅವಕಾಶ ಒದಗಿಸುತ್ತದೆ. ಅವಕಾಶಗಳನ್ನು ಚರ್ಚಿಸಲು, ಇರುವ ಸವಾಲುಗಳನ್ನು ಎದುರಿಸಲು, ಹೂಡಿಕೆ ಆಕರ್ಷಿಸಲು ಮತ್ತು ಕ್ಷೇತ್ರದ ಭವಿಷ್ಯದ ಹಾದಿಯನ್ನು ವ್ಯಾಖ್ಯಾನಿಸಲು ಸಹಾಯ ಮಾಡಲು ಶೃಂಗಸಭೆಯು ಉದ್ಯಮದ ಪ್ರಮುಖರು, ಯುವ ಮನಸ್ಸುಗಳನ್ನು ಒಟ್ಟುಗೂಡಿಸುತ್ತದೆ. ಭಾಗವಹಿಸುವವರು ಇಲ್ಲಿ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ತಮ್ಮ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಂಡವಾಳ ಹೂಡಿಕೆಗೂ ಸಹಕಾರಿ. ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಕ್ಷೆತ್ರದಲ್ಲಿ ಹೊಸ ಅವಕಾಶಗಳನ್ನು ಇಲ್ಲಿ ಕಂಡುಕೊಳ್ಳಬಹುದು. ವೇವ್ಸ್ ನೀಡುವ ಅವಕಾಶಗಳನ್ನು ಬಳಸಿಕೊಳ್ಳಲು ನಿಮಗೆ ಅವಕಾಶವಿದೆ.

ವೇವ್ಸ್​​​ನ ಉದ್ದೇಶಗಳು:

  • ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಪರಿಣಿತರನ್ನು ಭಾರತಕ್ಕೆ ಆಕರ್ಷಿಸುವುದು.
  • ಬೌದ್ಧಿಕ ಸಾಮರ್ಥ್ಯದ ಅಭಿವೃದ್ಧಿಯಲ್ಲಿ ಭಾರತವನ್ನು ಪ್ರಮುಖ ಕೇಂದ್ರವಾಗಿ ಇರಿಸುವ ಕ್ರಿಯೇಟಿವ್​ ಎಕಾನಮಿಯನ್ನು ಪೋಷಿಸುವುದು.
  • ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು.
  • ಅಂತಾರಾಷ್ಟ್ರೀಯ ಬೇಡಿಕೆಗಳನ್ನು ಪೂರೈಸಲು ನುರಿತ ಉದ್ಯೋಗಿಗಳನ್ನು ಸಬಲೀಕರಣಗೊಳಿಸುವುದು.
  • ಭಾರತವನ್ನು ವ್ಯಾಪಾರ ಸ್ನೇಹಿ ಮತ್ತು ಹೂಡಿಕೆಗೆ ಸಿದ್ಧವಾಗಿರುವ ತಾಣವಾಗಿ ಪ್ರಚಾರ ಮಾಡುವುದು.
  • ಹೊಸ ಟ್ರೆಂಡ್ಸ್, ನವೀನ ತಂತ್ರಜ್ಞಾನಗಳು ಮತ್ತು ಟ್ರಾನ್ಸ್​ಫಾರ್ಮೇಟಿವ್​​ ಪ್ರ್ಯಾಕ್ಟೀಸ್​​​ಗಳಿಗೆ ಹೊಂದಿಕೊಳ್ಳುವುದು.

ಇದನ್ನೂ ಒದಿ: ಆಧಾರ್ ಕೇಂದ್ರದಲ್ಲಿನ ಸ್ಥಿತಿಗತಿಯನ್ನು ಖಂಡಿಸಿದ ನಿರ್ದೇಶಕ ಹನ್ಸಲ್ ಮೆಹ್ತಾ - Hansal Mehta

ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭಾರತವನ್ನು ಪ್ರಬಲ ಜಾಗತಿಕ ಶಕ್ತಿಯಾಗಿ ಸ್ಥಾಪಿಸುವ ಗುರಿಯೊಂದಿಗೆ, ವೇವ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾನದಂಡಗಳನ್ನು ಪ್ರೇರೇಪಿಸಲು ಪ್ರಯತ್ನಿಸುತ್ತದೆ. ವಿಶಿಷ್ಟ ವೇದಿಕೆಯ ಮೂಲಕ ವಿಶ್ವದಾದ್ಯಂತ ಮಾಧ್ಯಮ ಮತ್ತು ಮನರಂಜನಾ ನುರಿತರಿಗೆ ಅಥವಾ ನಾಯಕರಿಗೆ ಹೂಡಿಕೆ ಅವಕಾಶಗಳನ್ನು ಒದಗಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.