ETV Bharat / state

ಚಿಕ್ಕಬಳ್ಳಾಪುರ: ರಸ್ತೆ ವಿಚಾರಕ್ಕೆ ನೆರೆಹೊರೆಯವರಿಂದ ಜಗಳ, ಮನನೊಂದು ಬಾಲಕ ಆತ್ಮಹತ್ಯೆ - BOY SUICIDE - BOY SUICIDE

ಮನೆ ಮುಂದು ಹಾದು ಹೋಗುವ ರಸ್ತೆಯ ವಿಚಾರವಾಗಿ ಅಕ್ಕ-ಪಕ್ಕದ ಕುಟುಂಬಸ್ಥರು ಮಾಡಿದ ಜಗಳದಿಂದ ಬಾಲಕನೋರ್ವ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆರೋಪಿಗಳ ಮನೆ ಪರಿಶೀಲಿಸುತ್ತಿರುವ ಪೊಲೀಸರು
ಆರೋಪಿಗಳ ಮನೆ ಪರಿಶೀಲಿಸುತ್ತಿರುವ ಪೊಲೀಸರು (ETV Bharat)
author img

By ETV Bharat Karnataka Team

Published : Sep 9, 2024, 7:07 AM IST

ಚಿಕ್ಕಬಳ್ಳಾಪುರ: ಅಕ್ಕ-ಪಕ್ಕದ ಮನೆಯವರು ವಿವಾದಿತ ರಸ್ತೆ ಜಾಗದ ವಿಚಾರವಾಗಿ ಮಾಡಿದ ಜಗಳದಿಂದ ಮನನೊಂದು ಬಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಹಾಗೂ ಪುಷ್ಪ ದಂಪತಿಗಳ 16 ವರ್ಷದ ಮಗ ಮೃತ ಬಾಲಕ.

ಮೃತ ಬಾಲಕನ ತಂದೆ ಹೇಳಿಕೆ: 'ಶನಿವಾರ ಸಂಜೆ ಗ್ರಾಮದ ರಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ, ಹಾಗೂ ಲಕ್ಷಯ್ಯ ಹಾಗೂ ಆಶಮ್ಮ ದಂಪತಿ ಎಂಬುವವರು ಪುತ್ರ ಸುದೀಪ್ ಹಾಗೂ ಆತನ ತಂಗಿಯ ಮೇಲೆ ವಿವಾದಿತ ರಸ್ತೆಯಲ್ಲಿ ಓಡಾಡಿದ ಕಾರಣ ಜಗಳ ಮಾಡಿ ಹಲ್ಲೆ ಮಾಡಿದ್ದರು. ಈ ವೇಳೆ ಕೋಪಗೊಂಡ ಮಗ ಇಟ್ಟಿಗೆ ತೆಗೆದುಕೊಂಡು ಎಸೆದಿದ್ದು ರಾಮಯ್ಯ ಎಂಬುವವರು ಗಾಯಗೊಂಡಿದ್ದರು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನನ್ನ ಹಾಗೂ ಮಗನ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡಿ ಸುಮ್ನನಾಗದೆ ನಿಮ್ಮನ್ನು ಜೈಲಿಗೆ ಹಾಕಿಸದೆ ಬಿಡುವುದಿಲ್ಲ ಎಂದು ಎರಡು ಕುಟುಂಬದವರು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ನನ್ನ ಮಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಮೃತ ಬಾಲಕನ ತಂದೆ ಮಂಜುನಾಥ್​ ತಿಳಿಸಿದ್ದಾರೆ.

ಘಟನೆ ನಂತರ ಆಶಮ್ಮ ಹಾಗೂ ಲಕ್ಷ್ಮಮ್ಮನವರ ಕುಟುಂಬಸ್ಥರು ಮನೆಗೆ ಬೀಗಗಳನ್ನು ಜಡಿದು ಪರಾರಿಯಾಗಿದ್ದಾರೆ. ಈ ಸಂಬಧವೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುಟುಂಬಗಳು ಕಳೆದ 2 ವರ್ಷಗಳಿಂದ ರಸ್ತೆ ವಿಚಾರವಾಗಿ ಮೃತನ ಪೋಷಕರೊಂದಿಗೆ ಜಗಳವಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಪ್ರೇಮ ವೈಫಲ್ಯ: ಧಾರವಾಡದಲ್ಲಿ ಚಿಕ್ಕಮಗಳೂರಿನ ಯುವಕ ಆತ್ಮಹತ್ಯೆ - Young Man Committed Suicide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.