ETV Bharat / entertainment

28 ವರ್ಷಗಳ ನಂತರ ಬರ್ತಿದೆ ಕಮಲ್‌ ಹಾಸನ್‌ ನಟನೆಯ 'ಇಂಡಿಯನ್ 2'​​; ಸಂಜೆ 7ಕ್ಕೆ ಟ್ರೇಲರ್ ನೋಡಿ - Indian 2 Trailer - INDIAN 2 TRAILER

ಇಂದು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಇಂಡಿಯನ್ 2' ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿತು.

Indian 2 Trailer Release event
ಇಂಡಿಯನ್ 2 ಟ್ರೇಲರ್ ರಿಲೀಸ್ ಈವೆಂಟ್ (ETV Bharat)
author img

By ETV Bharat Karnataka Team

Published : Jun 25, 2024, 3:53 PM IST

ಚೆನ್ನೈ(ತಮಿಳುನಾಡು): ನಟ ಕಮಲ್ ಹಾಸನ್ ಹಾಗೂ ನಿರ್ದೇಶಕ ಶಂಕರ್ ಕಾಂಬಿನೇಶನ್ನಿನ ಬಹುನಿರೀಕ್ಷಿತ 'ಇಂಡಿಯನ್ 2' ಚಿತ್ರದ ಟ್ರೇಲರ್ ಬಿಡುಗಡೆ ಇಂದು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆಯಿತು. ಚಿತ್ರಮಂದಿರದಲ್ಲಿ ಆಯ್ದ ಪ್ರೇಕ್ಷಕರಿಗೆ ಟ್ರೇಲರ್ ಪ್ರದರ್ಶಿಸಲಾಯಿತು. ಸಂಜೆ 7ಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೇಲರ್​ ಬಿಡುಗಡೆಯಾಗಲಿದೆ.

ಚಿತ್ರದ ನಾಯಕ ನಟ ಕಮಲ್ ಹಾಸನ್, ನಿರ್ದೇಶಕ ಶಂಕರ್, ಗಾಯಕ ಅನಿರುದ್ಧ್ ರವಿಚಂದರ್, ಬಾಬಿ ಸಿಂಹ, ಸಿದ್ಧಾರ್ಥ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಟ ಸಿದ್ಧಾರ್ಥ್ ಮಾತನಾಡಿ, ''ಕಮಲ್ ಹಾಸನ್ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ಕೊಟ್ಟ ನಿರ್ದೇಶಕ ಶಂಕರ್ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ನಾನು ಬಾಲ್ಯದಿಂದಲೂ ಕಮಲ್ ಹಾಸನ್ ಅವರ ಕಟ್ಟಾ ಅಭಿಮಾನಿ. ಅವರಿಲ್ಲದೇ ಇದ್ದರೆ ನಾನು ನಟನಾಗುತ್ತಿರಲಿಲ್ಲ. ಅದೇ ರೀತಿ ಶಂಕರ್ ಅವರಿಗೆ ಕಮಲ್ ಹಾಸನ್ ಮತ್ತು ಇಂಡಿಯನ್ 2 ಸಿನಿಮಾ ಅಂದ್ರೆ ಅಚ್ಚುಮೆಚ್ಚು. ನಾನೂ ಕೂಡಾ ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದೇನೆ'' ಎಂದು ತಿಳಿಸಿದರು.

"ಟ್ರೇಲರ್ ವಿಶೇಷವಾಗಿದೆ. ಚಿತ್ರತಂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಈವರೆಗೆ ಇಂತಹ ತಂಡವನ್ನು ನೋಡಿಲ್ಲ. ದೊಡ್ಡ ಪರದೆ ಮೇಲೆ ಟ್ರೇಲರ್ ವೀಕ್ಷಿಸುವುದು ನಿಜವಾಗಿಯೂ ಒಂದೊಳ್ಳೆ ಅನುಭವ" ಎಂದು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೇಳಿದರು.

"ಎಡಿಟಿಂಗ್ ಕೆಲಸ ನಡೆಯುತ್ತಿರುವುದರಿಂದ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದೆ" ಎಂದು ಕ್ಷಮೆಯಾಚಿಸಿದರು. ನಂತರ, "ಇಂಡಿಯನ್ ಸಿನಿಮಾ ತಮಿಳುನಾಡಿನಲ್ಲಿ ಸೆಟ್ಟೇರಿತ್ತು. ಆದರೆ ಇಂಡಿಯನ್ 2 ಸಿನಿಮಾ ಹಲವು ರಾಜ್ಯಗಳಿಗೆ ಹಬ್ಬಿದೆ. 'ಇಂಡಿಯನ್ 2' ಥಿಯೇಟರ್‌ಗಳಲ್ಲಿ ವೀಕ್ಷಿಸುವ ಪ್ರತಿಯೊಬ್ಬರೂ ಅದರ ಬಗ್ಗೆ ಯೋಚಿಸುತ್ತಾರೆ" ಎಂಬುದು ನಿರ್ದೇಶಕ ಶಂಕರ್ ಮಾತು.

"ಕಮಲ್ ಹಾಸನ್ ಶೂಟಿಂಗ್ ಶುರುವಾಗುವ ಮುನ್ನ ಆಗಮಿಸುತ್ತಿದ್ದರು, ಚಿತ್ರೀಕರಣ ಮುಗಿಸಿ ಎಲ್ಲರೂ ಹೋದ ನಂತರವೇ ಹೊರಡುತ್ತಿದ್ದರು. ಸಾಕಷ್ಟು ಶ್ರಮಿಸಿದ್ದಾರೆ. ಅವರ ಮೇಕಪ್ ತೆಗೆಯಲು 1 ಗಂಟೆ ಸಮಯ ಹಿಡಿಯುತ್ತಿತ್ತು. ಇಂಡಿಯನ್ 2ನಲ್ಲಿ ಕಮಲ್ ಅಭಿನಯ ಮೊದಲ ಭಾಗಕ್ಕಿಂತ ಹೆಚ್ಚು ಉತ್ತಮವಾಗಿದೆ. ಅವರು ಪ್ಲಾಸ್ಟಿಕ್ ಮೇಕಪ್‌ನೊಂದಿಗೆ 40 ದಿನಗಳ ಕಾಲ 'ಇಂಡಿಯನ್' ಚಿತ್ರದಲ್ಲಿ ನಟಿಸಿದ್ದರು. ಇಂಡಿಯನ್ 2ನಲ್ಲಿ 70 ದಿನಗಳ ಕಾಲ ಅಭಿನಯಿಸಿದ್ದಾರೆ. ನಾಲ್ಕು ದಿನಗಳ ಕಾಲ ಹಗ್ಗದಲ್ಲಿ ನೇತು ಅತ್ಯುತ್ತಮ ಸಾಹನ ಪ್ರದರ್ಶನ ನೀಡಿದ್ದಾರೆ" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಟ್ರೇಲರ್​​: ಪ್ರೇಕ್ಷಕರ ರಿಯಾಕ್ಷನ್​​​ ಹೀಗಿತ್ತು - Indian 2 Trailer

ಕಮಲ್ ಹಾಸನ್ ಮಾತನಾಡಿ, "ವಿವೇಕ್, ಮನೋಬಾಲಾ ಅವರಂಥವರು ಇಂದು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗಿಲ್ಲ. ಅವರೆಲ್ಲರೂ ಇಲ್ಲಿರಬೇಕಿತ್ತು. ನಾನು ನಿರೀಕ್ಷಿಸಿದ್ದಕ್ಕಿಂತ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಅನಿರುದ್ಧ್ ಅವರಿಗೆ ಧನ್ಯವಾದ. ವಿವೇಕ್ ಅವರನ್ನು ನೋಡಿ ಬಹಳ ವರ್ಷಗಳೇ ಕಳೆಯಿತು. ಚಿತ್ರದಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಇಂಡಿಯನ್​ ಸಿನಿಮಾಗೆ ಎಲ್ಲರೂ ಬೆಂಬಲಿಸಿದ್ದರು. ಸೀಕ್ವೆಲ್​​ಗೂ ಅದೇ ಬೆಂಬಲ ಬೇಕು" ಎಂದು ತಿಳಿಸಿದರು.

ಇದನ್ನೂ ಓದಿ: 'ಭಾರತದ ಕರಾಳ ಅಧ್ಯಾಯ': 'ಎಮರ್ಜೆನ್ಸಿ'ಗಿಲ್ಲ ಶೀಘ್ರ ಬಿಡುಗಡೆ ಭಾಗ್ಯ, ಮತ್ತೆ ಸಿನಿಮಾ ಮುಂದೂಡಿದ ಕಂಗನಾ ​​ - Emergency New Release Date

'ಇಂಡಿಯನ್ 3' ಮತ್ತು 'ಇಂಡಿಯನ್' 4 ಯಾವಾಗ ಬರಲಿದೆ ಎಂಬ ಪ್ರಶ್ನೆಗೆ, "ಇಷ್ಟು ವರ್ಷಗಳ ನಂತರ ನಾವು ಬರಲು ಪ್ರಕೃತಿಯೇ ಕಾರಣ. ಇಷ್ಟು ವರ್ಷ ಕಳೆದರೂ ಭ್ರಷ್ಟಾಚಾರ ತೊಲಗಿಲ್ಲ" ಎಂದರು. ಇದಕ್ಕೆ ರಾಜಕಾರಣಿಗಳು ಹೊಣೆಯೇ ಎಂದು ಪ್ರಶ್ನಿಸಿದಾಗ, "ನೀವು ನಮ್ಮನ್ನು ಮರೆತಿದ್ದೀರಿ, ನಾವೂ ಜವಾಬ್ದಾರರು" ಎಂದರು. ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಮಲ್ ಹಾಸನ್​ ಅಭಿನಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.