ETV Bharat / entertainment

ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾಗಳು ಮಿಂಚಲು ತೆಲುಗು ಸಿನಿಮಾಗಳ ಪಾತ್ರ ಹೆಚ್ಚಿದೆ; ಕಮಲ್​ ಹಾಸನ್​ - Kamal Haasan Hails Telugu Cinema

ಕಳೆದು ಐದು ದಶಕಗಳಿಂದ ತೆಲುಗು ಜನತೆ ನಿರಂತರವಾಗಿ ತಮಗೆ ಅಭಿಮಾನ ತೋರುತ್ತಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು

indian-2-kamal-haasan-hails-telugu-cinema-as-a-driving-force-behind-indian-films-global-rise
ಕಮಲ್​ ಹಾಸನ್​ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 8, 2024, 5:40 PM IST

ಹೈದರಾಬಾದ್: ಬಹುನಿರೀಕ್ಷೆಯ ಚಿತ್ರ 'ಇಂಡಿಯನ್​ 2'ನ ಪ್ರಿ ರಿಲೀಸ್​​ ಕಾರ್ಯಕ್ರಮ ಹೈದರಾಬಾದ್​ನಲ್ಲಿ ಭಾನುವಾರ ಸಂಜೆ ಜರುಗಿದ್ದು, ಪ್ಯಾನ್​ ಇಂಡಿಯಾ ನಟ ಕಮಲ್​ ಹಾಸನ್​ ಭಾಗಿಯಾಗಿದ್ದಾರೆ. ನಿರ್ದೇಶಕರ ಶಂಕರ್​ ಷಣ್ಮುಖನ್​, ಸಿದ್ಧಾರ್ಥ್​​, ಎಸ್​ಜೆ ಸುರ್ಯಾ, ರಕುಲ್​ ಪ್ರೀತ್​ ಸಿಂಗ್​, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಈ ಅದ್ಬುತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತೆಲಗಿನಲ್ಲಿ ಮಾತು ಆರಂಭಿಸಿದ ಚಿತ್ರದ ನಟ ಕಮಲ್​ ಹಾಸನ್​ ಇದೇ ವೇಳೆ, ತೆಲಗು ಚಿತ್ರೋದ್ಯಮ ಭಾರತದ ಸಿನಿಮಾವನ್ನು ಜಾಗತಿಕ ಎತ್ತರಕ್ಕೆ ಕೊಂಡೊಯ್ಯಿತು ಎಂದು ಅವರು ಹೊಗಳಿದರು.

ಕಳೆದು ಐದು ದಶಕಗಳಿಂದ ತೆಲುಗು ಜನತೆ ನಿರಂತರವಾಗಿ ತಮಗೆ ಅಭಿಮಾನ ತೋರುತ್ತಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. 52 ವರ್ಷದ ಹಿಂದೆ ತಂತ್ರಜ್ಞನಾಗಿ ನಾನು ಹೈದರಾಬಾದ್​ಗೆ ಮೊದಲು ಬಂದೆ. ತೆಲಗು ಜನರು ಅಂದು ನನ್ನ ಕೈ ಹಿಡಿದು ಇಲ್ಲಿಯವರೆಗೆ ಮಾರ್ಗದರ್ಶನ ತೋರಿದ್ದಾರೆ ಎಂದು ಭಾವುಕರಾದರು.

ನಿಮ್ಮ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಭಾರತದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಇದರಲ್ಲಿ ತೆಲುಗು ಸಿನಿಮಾದ ಅತಿ ದೊಡ್ಡ ಭಾಗವನ್ನು ಹೊಂದಿದೆ. ತೆಲುಗು ಜನರು ನಮ್ಮ ಜೀವನದಲ್ಲಿ ಅತಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ ಎಂದು ಮರೊ ಚರಿತ್ರ, ಸಾಗರ ಸಂಗಂ ಮತ್ತು ಸ್ವಾತಿ ಮುತ್ಯಂ ಮುಂತಾದ ಚಿತ್ರಗಳ ಮೆಲಕು ಹಾಕಿದರು.

'ಇಂಡಿಯನ್​ 2' ಚಿತ್ರದ ಕುರಿತು ಕೇಳಿದಾಗ ನಾನು ತುಂಬಾ ಖುಷಿ ಪಟ್ಟೆ. ಭಾರತೀಯನಾಗಿ 28 ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ಇಷ್ಟು ವರ್ಷಗಳ ಬಳಿಕ ಚಿತ್ರದ ಭಾಗವಾಗಿರುವುದಕ್ಕೆ ನಾನು ತುಂಬ ಸಂತೋಷ ಹೊಂದಿದ್ದೇನೆ. ಇದು ಶಂಕರ್​ ಅವರ ದೂರದೃಷ್ಟಿಯ ಸಿನಿಮಾ ಆಗಿದೆ. ಈ ಚಿತ್ರದ ಅಭಿಮಾನಿಯೂ ನಾನು ಆಗಿದ್ದೇನೆ ಎಂದ ಅವರು. ನಾನು ಮತ್ತೊಮ್ಮೆ ಬಂದಿದ್ದೇನೆ ಎಂದು ಮಾತು ಮುಗಿಸಿದರು.

'ಇಂಡಿಯನ್​ 2' ಸಿನಿಮಾವನ್ನು ತೆಲುಗಿನಲ್ಲಿ ಏಷ್ಯಾನ್​ ಸುನೀಲ್​ ಮತ್ತು ಶ್ರೀದೇವಿ ಮೂವೀಸ್​ ಬ್ಯಾನರ್​ ಅಡಿ ವಿತರಣೆ ಮಾಡಲಾಗಿದೆ. ಚಿತ್ರಕ್ಕೆ ಲೈಕಾ ಪ್ರೊಡಕ್ಷನ್​ ಬಂಡವಾಳ ಹೂಡಿದ್ದು, ಶಂಕರ್​ ನಿರ್ದೇಶನವಿದೆ. ಚಿತ್ರ ತೆಲುಗು, ತಮಿಳು ಮತ್ತು ಹೊಂದಿಯಲ್ಲಿ ಬಿಡುಗಡೆಯಾಗುತ್ತಿದ್ದು, ಭಾರತದ ಅನೇಕ ಭಾಷೆಗೆ ಡಬ್ಬಿಂಗ್​ ಆಗಲಿದೆ. ಜುಲೈ 12ಕ್ಕೆ ಚಿತ್ರ ಬೆಳ್ಳೆತೆರೆಗೆ ಬರಲು ಸಜ್ಜಾಗಿದೆ.

ಇದನ್ನೂ ಓದಿ: 28 ವರ್ಷಗಳ ನಂತರ ಬರ್ತಿದೆ ಕಮಲ್‌ ಹಾಸನ್‌ ನಟನೆಯ 'ಇಂಡಿಯನ್ 2'​​; ಸಂಜೆ 7ಕ್ಕೆ ಟ್ರೇಲರ್ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.