ETV Bharat / entertainment

'ಹುಯ್ಯೋ ಹುಯ್ಯೋ ಮಳೆರಾಯ'ವೆಂದು ಹಾಡುತ್ತಾ ಬಂದ ಕಿರಣ್ ರಾಜ್ - Bharjari Gandu - BHARJARI GANDU

Bharjari Gandu: ಕಿರಣ್ ರಾಜ್ ಮುಖ್ಯಭೂಮಿಕೆಯ 'ಭರ್ಜರಿ ಗಂಡು' ಚಿತ್ರದಿಂದ ''ಹುಯ್ಯೋ ಹುಯ್ಯೋ ಮಳೆರಾಯ" ಎಂಬ ಹಾಡು ಅನಾವರಣಗೊಂಡಿದೆ.

Huyyo Huyyo Maleraaya
ಹುಯ್ಯೋ ಹುಯ್ಯೋ ಮಳೆರಾಯ ಹಾಡು ಅನಾವರಣ
author img

By ETV Bharat Karnataka Team

Published : Mar 27, 2024, 1:19 PM IST

ಕನ್ನಡ ಚಿತ್ರರಂಗದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿರುವ ನಟ ಕಿರಣ್ ರಾಜ್. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಭರ್ಜರಿ ಗಂಡು' ಚಿತ್ರದ ಜಪ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ 'ಭರ್ಜರಿ ಗಂಡು' ಚಿತ್ರದಿಂದ ಇತ್ತೀಚೆಗೆ ವಿಶೇಷ ಹಾಡೊಂದು ಅನಾವರಣಗೊಂಡಿದೆ.

Huyyo Huyyo Maleraaya
ಹುಯ್ಯೋ ಹುಯ್ಯೋ ಮಳೆರಾಯ ಹಾಡು ಅನಾವರಣ

ಡಾ.ವಿ ನಾಗೇಂದ್ರ ಪ್ರಸಾದ್ ಬರೆದಿರುವ ''ಹುಯ್ಯೋ ಹುಯ್ಯೋ ಮಳೆರಾಯ" ಎಂಬ ಹಾಡು ಇತ್ತೀಚಿಗೆ ಬಿಡುಗಡೆ ಆಗಿದೆ. ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿಗೆ ದನಿಯಾಗಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ನೀಡಿರುವ ಈ ಹಾಡಿಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Huyyo Huyyo Maleraaya
ಹುಯ್ಯೋ ಹುಯ್ಯೋ ಮಳೆರಾಯ ಹಾಡು ಅನಾವರಣ

ಎಲ್ಲಾ ಕಡೆ ಬಿಸಿಲು ಹೆಚ್ಚಾಗಿದ್ದು‌, ನೀರಿನ ಬವಣೆ ಹೇಳತೀರದಾಗಿದೆ. ಈ ಸಂದರ್ಭದಲ್ಲಿ ಉತ್ತಮ ಮಳೆಯಾಗಿ ನೀರಿನ ಬವಣೆ ದೂರವಾಗಲಿ ಎಂದು ಚಿತ್ರದ ನಟ ಕಿರಣ್ ರಾಜ್ ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವರ ಬಳಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ.

Huyyo Huyyo Maleraaya
ಹುಯ್ಯೋ ಹುಯ್ಯೋ ಮಳೆರಾಯ ಹಾಡು ಅನಾವರಣ

ಪ್ರಸಿದ್ಧ್​ ನಿರ್ದೇಶನದ ಈ ಚಿತ್ರದಲ್ಲಿ ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶ ಶಿವಕುಮಾರ್ ನಟಿಸಿದ್ದಾರೆ. ರಮೇಶ್ ಭಟ್, ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್ ನಾಗೇಶ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • " class="align-text-top noRightClick twitterSection" data="">

ಪ್ರಸಿದ್ಧ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಗುಮ್ಮಿನೇನಿ‌ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವೆಂಕಿ ಯುಡಿವಿ ಸಂಕಲನವಿರುವ ಈ‌ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಸದ್ಯ ಟೀಸರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಭರ್ಜರಿ ಗಂಡು ಏಪ್ರಿಲ್ 5ಕ್ಕೆ ಚಿತ್ರಮಂದಿರಗಳಿಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಹೊಸಬರ 'ಖಾಲಿ ಡಬ್ಬ'ಕ್ಕೆ ವಿ.ನಾಗೇಂದ್ರ ಪ್ರಸಾದ್ ಸಾಥ್ - Khali Dabba

'ಕನ್ನಡತಿ' ಧಾರಾವಾಹಿ​ ಮೂಲಕ ಕಿರಣ್​ ಈಗಾಗಲೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನ ಗೆದ್ದಿರುವ ಕಿರಣ್ ​ರಾಜ್​ ಗ್ರಾಮೀಣ ಸೊಗಡಿನ ಚಿತ್ರಕಥೆಯೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಒಂದು ವಾರದ ಹಿಂದಷ್ಟೇ ಟ್ರೇಲರ್ ಕೂಡ ಅನಾವರಣಗೊಂಡಿದೆ. ಅಂದು ಮಾತನಾಡಿದ್ದ ನಾಯಕ ನಟ, "ನಾಯಕನಾಗಿ ನಾನು ನಟಿಸಿರುವ ಚೊಚ್ಚಲ ಚಿತ್ರವಿದು. ಪ್ರಸಿದ್ಧ್ ಅವರು ಬರೆದಿರುವ ಕಥೆ ಬಹಳ ಚೆನ್ನಾಗಿದೆ. ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದೇನೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ನಟ ರಾಮ್​ ಚರಣ್​​ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.