ETV Bharat / entertainment

ಕ್ರೇಜ್​ ಹೆಚ್ಚಿಸಿದ ನಟ ರಜನೀಕಾಂತ್​ ಅಭಿನಯದ 'ತಲೈವರ್​ 171' ಟೈಟಲ್​ ಟೀಸರ್​ ಬಿಡುಗಡೆ ಪೋಸ್ಟರ್​​​ - Thalaivar 171 Title Teaser - THALAIVAR 171 TITLE TEASER

ಲೋಕೇಶ್​​ ಕನಗರಾಜ್ ನಿರ್ದೇಶನದ​, ಸನ್​ ಪಿಕ್ಚರ್ಸ್​ ಬ್ಯಾನರ್​​ ಅಡಿ ಮೂಡಿ ಬರುತ್ತಿರುವ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿದೆ. ಚಿತ್ರದ ಟೀಸರ್ ಬಿಡುಗಡೆ ಪೋಸ್ಟರ್​ ಸದ್ದು ಮಾಡುತ್ತಿದೆ.

heres-when-thalaivar-171-title-teaser-will-drop-rajinikanths-intriguing-poster-out

author img

By ETV Bharat Karnataka Team

Published : Apr 22, 2024, 12:50 PM IST

ಹೈದರಾಬಾದ್​: ಸೂಪರ್​ ಸ್ಟಾರ್​ ರಜನೀಕಾಂತ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ತಲೈವಾರ್​ 171' ಟೀಸರ್​ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಚಿತ್ರ ತಂಡ ಇಂದು ಸಂಜೆ ಇದರ ಟೀಸರ್​​ ಬಿಡುಗಡೆಗೆ ಸಜ್ಜಾಗಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಟೈಟಲ್​ ಟೀಸರ್​ನ ಈ ಭರವಸೆ ಪ್ರೇಕ್ಷಕರಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ತಮಿಳು ಸಿನಿ ಉದ್ಯಮದಲ್ಲಿ ನಟ ರಜನೀಕಾಂತ್​ ಜೊತೆ ಸೇರಿ ಒಂದರ ಹಿಂದೆ ಒಂದು ಹಿಟ್​ ಸಿನಿಮಾಗಳನ್ನು ನಿರ್ದೇಶಕ ಲೋಕೇಶ್​​​ ಕನಗರಾಜ್​ ನೀಡುತ್ತಿದ್ದಾರೆ. ಈ ಇಬ್ಬರು ಮತ್ತೊಮ್ಮೆ 'ತಲೈವರ್​​​ 171'ನಲ್ಲಿ ಜೊತೆಯಾಗಿರುವುದು ಅಭಿಮಾನಿಗಳಲ್ಲಿ ಹೆಚ್ಚಿಸಿದೆ.

'ತಲೈವರ್ 171' ಟೀಸರ್​​​ ಬಿಡುಗಡೆಗೆ ಮುಂಚಿತವಾಗಿ, ತಯಾರಕರು ಚಿತ್ರದ ಸೂಪರ್‌ಸ್ಟಾರ್‌ನ ಕುತೂಹಲಕಾರಿ ಪೋಸ್ಟರ್‌ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ಪೋಸ್ಟರ್​ನಲ್ಲಿ 73 ವರ್ಷದ ರಜನೀಕಾಂತ್​​ ಅವರ ತಮ್ಮ ಎಂದಿನ ಖದರ್​ನಲ್ಲಿ ಕಾಣಿಸಲಿದ್ದಾರೆ ಎಂಬ ಸುಳಿವು ತೊರೆದಿದೆ.

ಎಲ್ಲ ರೀತಿಯ ಸಂಭ್ರಮಾಚರಣೆ ಮಾಡಲು ಪ್ರತಿ ಬಾರಿ ರಜನೀಕಾಂತ್​ ಸಿನಿಮಾ ಕಾರಣವಾಗುತ್ತದೆ. ಟೈಟಲ್​ ಬಿಡುಗಡೆ ಟ್ರೈಲರ್​ ಲಾಂಚ್​​ ಸಿನಿಮಾ ಬಿಡುಗಡೆಯಾಗುವ ಮಟ್ಟದಲ್ಲಿ ಉತ್ಸಾಹವನ್ನ ಸೃಷ್ಟಿಸಿದೆ. ಟಿಜೆ ಜ್ಞಾನವೇಲ್​ ಜೊತೆಗೆ 'ತಲೈವರ್​ 170'ರ ಸಿನಿಮಾ ವೆಟ್ಟಿಯನ್​ ಚಿತ್ರದ ಯಶಸ್ಸಿನ ನಂತರ, ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ರಜನೀಕಾಂತ್ ಮತ್ತು ಲೋಕೇಶ್ ಕನಕರಾಜ್ ಒಟ್ಟಾಗಿ ಕೆಲಸ ಮಾಡುವ ಚಿತ್ರಗಳು ಸಾಕಷ್ಟು ಕ್ರೇಜ್​ ಹೆಚ್ಚಿಸಿವೆ.

ಸದ್ಯ ಚಿತ್ರದ ಟೈಟಲ್​ ರಿಲೀಸ್​​ ಪೋಸ್ಟರ್​ನಲ್ಲಿ ಕಪ್ಪು ಬಣ್ಣದ ಬ್ಯಾಂಗ್​ಗ್ರೌಂಡ್​ ​ಕಾಣಬಹುದಾಗಿದ್ದು, ರಜನೀಕಾಂತ್​ ಈ ಸಿನಿಮಾವೂ ಸಮಯದ ಮಹತ್ವ ಕುರಿತು ಒತ್ತಿ ಹೇಳುವ ಸಾಧ್ಯತೆ ಇರಬಹುದಾಗಿದೆ. ಕಾರಣ ಚಿತ್ರದ ಟೈಟಲ್​ ಟೀಸರ್ ಪೋಸ್ಟ್​​ಗಳಲ್ಲಿ ವಾಚ್​, ಗಡಿಯಾರಗಳನ್ನು ಕಾಣಬಹುದಾಗಿದೆ.

'ತಲೈವರ್​ 171' ಚಿತ್ರವನ್ನೂ ಲೊಕೇಶ್​​ ನಿರ್ದೇಶನ ಮಾಡುತ್ತಿದ್ದು, ಸನ್​ ಪಿಕ್ಚರ್ಸ್​​​ ನಿರ್ಮಾಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದರ ಕುರಿತು ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ. ಇನ್ನು ಈ ಚಿತ್ರಕ್ಕೆ ಪ್ರಖ್ಯಾತ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನಿರುದ್​​ ಸಂಗೀತ ಸಂಯೋಜನೆ ಇದೆ. ಇನ್ನು ಸಾಹಸವನ್ನು ಅನ್ಬು - ಅರಿವು ಜೋಡಿ ನಡೆಸಿದರೆ, ಗಿರೀಶ್​​​​ ಗಂಗಾಧರನ್​ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ.

ಇನ್ನು ಚಿತ್ರದಲ್ಲಿ ಉಳಿದ ಪಾತ್ರಗಳಲ್ಲಿ ಯಾರು ಕಾಣಿಸಲಿದ್ದಾರೆ ಎಂಬ ವಿಚಾರ ಇನ್ನು ಬಹಿರಂಗಗೊಂಡಿಲ್ಲ. ಸದ್ಯ ರೂಪುಗೊಂಡಿರುವ ತಂಡ ಚಿತ್ರವೂ ಹೊಸ ಥ್ರಿಲ್ಲಿಂಗ್​ ಅನುಭವವನ್ನು ಪ್ರೇಕ್ಷಕರಿಗೆ ನೀಡುವ ಭರವಸೆ ನೀಡಿದೆ.

ಇದನ್ನೂ ಓದಿ: ಕಲ್ಕಿ 2898 AD ಟೀಸರ್ ಅನಾವರಣ: ಬಿಗ್ ಬಿ ಅಮಿತಾಬ್ ಬಚ್ಚನ್ ಅಶ್ವತ್ಥಾಮ ಲುಕ್​ಗೆ ಸಿನಿ ರಸಿಕರು ಫಿದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.