ETV Bharat / entertainment

ಶಿವಣ್ಣನಿಗೆ ಆ್ಯಕ್ಷನ್​ ಕಟ್​ ಹೇಳ್ತಾರಾ ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್? - ಶಿವರಾಜ್​ಕುಮಾರ್

ಹೇಮಂತ್ ಎಂ ರಾವ್ ಅವರು ನಟ ಶಿವ ರಾಜ್​​ಕುಮಾರ್​ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Shiva rajkumar Hemanth Movie
ಶಿವಣ್ಣ ಹೇಮಂತ್ ಸಿನಿಮಾ
author img

By ETV Bharat Karnataka Team

Published : Jan 31, 2024, 1:50 PM IST

ಕನ್ನಡ ಚಿತ್ರರಂಗದಲ್ಲಿ ವಿನೂತನ ಹಾಗೂ ವಿಭಿನ್ನ ಚಿತ್ರಗಳ‌ ಮೂಲಕ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಿರ್ದೇಶಕ ಹೇಮಂತ್ ಎಂ ರಾವ್. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ‌ಕವಲುದಾರಿ, ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಒನ್‌ ಮತ್ತು ಸೈಡ್ ಬಿ ಸಿನಿಮಾಗಳ ಮೂಲಕ‌ ಬೇಡಿಕೆ ಹೆಚ್ಚಿಸಿಕೊಂಡಿರುವ ಹೇಮಂತ್ ರಾವ್ ಅವರು ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಸ್ಯಾಂಡಲ್​​​ವುಡ್​ನ ಸೂಪರ್ ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ. ಅದಾಗ್ಯೂ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗಿದೆ.

ಹೌದು, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಹೇಮಂತ್ ರಾವ್, ಸದ್ಯಕ್ಕೆ ಲವ್ ಸ್ಟೋರಿ ಸಿನಿಮಾ ಮಾಡಲಾರೆ ಎಂದಿದ್ದಾರೆ. ಜೊತೆಗೆ ಸೈನ್ಸ್ ಫಿಕ್ಷನ್​​ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ.

Shiva rajkumar Hemanth Movie
ಶಿವಣ್ಣನಿಗೆ ಆ್ಯಕ್ಷನ್​ ಕಟ್​ ಹೇಳ್ತಾರಾ ಹೇಮಂತ್ ಎಂ ರಾವ್?

ಸೈನ್ಸ್ ಫಿಕ್ಷನ್​​ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ ಬೆನ್ನಲ್ಲೇ, ಡಾ. ಶಿವರಾಜ್​ಕುಮಾರ್ ಈ ಚಿತ್ರದ ನಾಯಕನಾಗಲಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಗುಸುಗುಸು ನಿಜವಾದ್ರೆ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​ಕುಮಾರ್ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಸದ್ಯ ಈ ಸುದ್ದಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ.

ಸದ್ಯ ಈ ಸುದ್ದಿ ಒಂದು ಊಹೆ ಅಷ್ಟೇ. ಈ ಮಾತು ನಿಜವಾದ್ರೆ ಶಿವರಾಜ್​ಕುಮಾರ್ ಸಿನಿಮಾ ನಿರ್ದೇಶಿಸುವ ಅದೃಷ್ಟ ಹೇಮಂತ್ ರಾವ್ ಪಾಲಾಗಲಿದೆ. ‌ಆದರೆ ಈ ಸಿನಿಮಾವನ್ನು ತೆರೆ ಮೇಲೆ‌ ನೋಡಲು ಎರಡು ಅಥವಾ ಮೂರು ವರ್ಷ ಆಗಬಹುದು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಸದ್ಯ ಅತ್ಯಂತ ಬ್ಯುಸಿ ಇರುವ ನಟ ಅಂದ್ರೆ ಶಿವರಾಜ್​ಕುಮಾರ್. ಹ್ಯಾಟ್ರಿಕ್ ಹೀರೋ ಆಪ್ತರು ಹೇಳುವ ಹಾಗೇ, ಕನ್ನಡ ಸೇರಿದಂತೆ ಬರೋಬ್ಬರಿ 12ಕ್ಕೂ ಹೆಚ್ಚು ಚಿತ್ರಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ. ಆ ಪೈಕಿ ಕರಟಕ ದಮನಕ ಬಿಡುಗಡೆಗೆ ಸಜ್ಜಾಗಿದೆ.

ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಸಿನಿಮಾದಲ್ಲಿ ಶಿವಣ್ಣ ಇಂಡಿಯನ್​ ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ, ತೆಲುಗು ನಿರ್ದೇಶಕ ರಾಮ್ ಧುಲಿಪುಲಿ ನಿರ್ದೇಶನದ‌ ನೀ ಸಿಗೋವರೆಗೂ, ನರ್ತನ್ ನಿರ್ದೇಶನದ‌ ಭೈರತಿ ರಣಗಲ್, ಸಚಿನ್ ರವಿ ನಿರ್ದೇಶನದ ಅಶ್ವತ್ಥಾಮ, ರವಿ ಅರಸು ನಿರ್ದೇಶನದ‌ ಆರ್​ಡಿಎಕ್ಸ್, ಅರ್ಜುನ್‌ ಜನ್ಯ ಆ್ಯಕ್ಷನ್ ಕಟ್ ಹೇಳಿರುವ 45, ಲಕ್ಕಿ ಗೋಪಾಲ್ ‌ನಿರ್ದೇಶನದ ಸಿನಿಮಾ ಸೇರಿದಂತೆ ಬರೋಬ್ಬರಿ 12ಕ್ಕೂ ಹೆಚ್ಚು ಸಿನಿಮಾಗಳನ್ನು ಶಿವರಾಜ್​ಕುಮಾರ್ ಮಾಡಬೇಕಿದೆ. ಈ‌‌‌ ಎಲ್ಲಾ ಚಿತ್ರಗಳ ಶೂಟಿಂಗ್ ಬಹುಶಃ ಎರಡರಿಂದ ಮೂರು ವರ್ಷ ಸಮಯ ತೆಗೆದುಕೊಳ್ಳಲಿದೆ. ‌

ಇದನ್ನೂ ಓದಿ: ''ಕಾರ್ತಿಕ್​​-ಸಂಗೀತಾ ನಟ ನಟಿ, ವಿನಯ್ ವಿಲನ್, ವರ್ತೂರ್​ ನ್ಯಾಯ ಕೊಡಿಸುವವ'': ತುಕಾಲಿ ಸಂತೋಷ್​​

ಈ ಮಧ್ಯೆ ಏನಾದರೂ ಬದಲಾವಣೆ ಆಗಿ ಹೇಮಂತ್ ರಾವ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಶುರುವಾದರೂ ಅಚ್ಚರಿ ಇಲ್ಲ. ಹಾಗೇನಾದರೂ ಮಿರಾಕಲ್ ನಡೆದರೆ ನಿರ್ದೇಶಕ ಹೇಮಂತ್ ರಾವ್ ಯಾವ ಲುಕ್​ನಲ್ಲಿ ಶಿವಣ್ಣನನ್ನು ತೋರಿಸಲಿದ್ದಾರೆ ಅನ್ನೋದು ಅಭಿಮಾನಿಗಳ ಕುತೂಹಲ.

ಇದನ್ನೂ ಓದಿ: 'ಬಿಗ್​ ಬಾಸ್​ ಬದುಕಿನ ಪಾಠ ಕಲಿಸಿದೆ': ಸಂಗೀತಾ ಶೃಂಗೇರಿ ಅನುಭವದ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.