ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಸೀರಿಸ್ ''ಹೀರಾಮಂಡಿ: ದಿ ಡೈಮಂಡ್ ಬಜಾರ್''ನ ಫಸ್ಟ್ ಲುಕ್ (ಗ್ಲಿಂಪ್ಸ್) ಅನಾವರಣಗೊಂಡಿದೆ. ಇದು ಪ್ರೊಜೆಕ್ಟ್ ಮೇಲಿನ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರ ಕಾಣಲಿರುವ ಈ ಸೀರಿಸ್ನಲ್ಲಿ ಖ್ಯಾತ ನಟಿಮಣಿಯರಾದ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೆಹಗಲ್ ಮತ್ತು ಸಂಜೀದಾ ಶೇಖ್ ಸೇರಿದಂತೆ ಹಲವರು ವೇಶ್ಯೆಯರಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಅಂದ್ರೆ ನಿರೀಕ್ಷೆ ಕೊಂಚ ಹೆಚ್ಚೇ. ಭವ್ಯ, ಕುತೂಹಲ, ಪ್ರಲೋಭನೆ, ನಾಟಕೀಯದಂತಹ ಹಲವು ಅಂಶಗಳನ್ನು ಅದು ಒಳಗೊಂಡಿರುತ್ತದೆ. ಇದು ವೇಶ್ಯೆಯರ ಸುತ್ತಲಿನ ಕಥೆ ಆದರಿಂದ ಪ್ರೇಕ್ಷಕರ ಕುತೂಹಲ ಸಾಕಷ್ಟಿದೆ. ಒಟಿಟಿ ಸರಣಿಯ ಮೊದಲ ನೋಟ ಇಂದು ಅನಾವರಣಗೊಂಡಿದೆ. ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸೀರಿಸ್ನ ಅಫೀಶಿಯಲ್ ಸ್ಟ್ರೀಮಿಂಗ್ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಅಲ್ಲದೇ ಬನ್ಸಾಲಿ ಅವರ ಮೊದಲ ಒಟಿಟಿ ಸೀರಿಸ್ ಇದು.
ಸಂಜಯ್ ಲೀಲಾ ಬನ್ಸಾಲಿ ಅವರ 'ಹೀರಾಮಂಡಿ', ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ನಡೆಯುವ ಪ್ರೀತಿ ಮತ್ತು ಮೋಸದ ಕಥೆಗಳನ್ನು ಒಳಗೊಂಡಿರಲಿದೆ. ಈ ಸರಣಿಯು 1940ರ ದಶಕದಲ್ಲಿನ 'ಹೀರಾಮಂಡಿ'ಯ ಸಾಂಸ್ಕೃತಿಕ ನೈಜತೆಯನ್ನು ತನಿಖೆ ಮಾಡಲಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಕ್ಷುಬ್ಧ ಹಿನ್ನೆಲೆಯಲ್ಲಿ, ವೇಶ್ಯೆಯರು ಮತ್ತು ಅವರ ಪೋಷಕರ ಕಥೆಯನ್ನು 'ಹೀರಾಮಂಡಿ' ಒಳಗೊಂಡಿರಲಿದೆ. ಬನ್ಸಾಲಿ, ಈ ಹಿಂದಿನ ದೇವ್ದಾಸ್, ಬಾಜಿರಾವ್ ಮಸ್ತಾನಿ, ಗಂಗೂಬಾಯಿ ಕಥಿಯಾವಾಡಿಗಳಂತಹ ಕಥೆಗಳಿಗೆ ಹೆಸರುವಾಸಿಯಾಗಿದ್ದು, 'ಹೀರಾಮಂಡಿ' ಮೇಲೂ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಇದನ್ನೂ ಓದಿ: 'ರಣ್ಬೀರ್ ಕಂಡು ಸಮಾಧಾನವಾಗಿತ್ತು': ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?
ಸಂದರ್ಶನವೊಂದರಲ್ಲಿ ತಮ್ಮ ಸೀರಿಸ್ ಬಗ್ಗೆ ಮಾತನಾಡಿದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಓರ್ವ ನಿರ್ದೇಶಕನಾಗಿ ನನ್ನ ಪ್ರಯಾಣದಲ್ಲಿ ಹೀರಾಮಂಡಿ ಒಂದು ಪ್ರಮುಖ ಮೈಲಿಗಲ್ಲು ಎಂದು ಹೇಳಿದ್ದಾರೆ. ಇದು ಲಾಹೋರ್‌ನ ವೇಶ್ಯೆಯರ ಕುರಿತಾದ ಒಂದು ಅದ್ಭುತ, ಎಪಿಕ್ ಸೀರಿಸ್. ಮಹತ್ವಾಕಾಂಕ್ಷೆಯ, ವಿಶಾಲವಾದ ಮತ್ತು ಎಲ್ಲವನ್ನೂ ಒಳಗೊಂಡ ಸರಣಿಯಾಗಿದೆ. ಹಾಗಾಗಿ ಇದನ್ನು ರಚಿಸುವ ಸಂದರ್ಭ ನಾನು ಉದ್ವೇಗಕ್ಕೊಳಗಾಗಿದ್ದೆ, ಜೊತೆಗೆ ಸಾಕಷ್ಟು ಉತ್ಸಾಹದಲ್ಲಿದ್ದೆ. ನೆಟ್‌ಫ್ಲಿಕ್ಸ್ ಜೊತೆ ಕೆಲಸ ಮಾಡುತ್ತಿರುವ ಬಗ್ಗೆ ಮತ್ತು ಹೀರಾಮಂಡಿಯನ್ನು ಪ್ರಪಂಚದ ವೀಕ್ಷಕರಿಗೆ ತಲುಪಿಸೋ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಮನವಿ: ಏನದು?
ಹೇಳಿಕೆಯೊಂದರ ಪ್ರಕಾರ, 'ಹೀರಾಮಂಡಿ'ಯು ಕೋಥಾಗಳಲ್ಲಿ (ವೇಶ್ಯೆಯರ ಮನೆ)ನ ಪ್ರೀತಿ, ದ್ರೋಹ, ಉತ್ತರಾಧಿಕಾರ ಮತ್ತು ರಾಜಕೀಯದ ಮಿಶ್ರಣವಾಗಿದೆ. ಹೀರಾಮಂಡಿ, ಬನ್ಸಾಲಿಯ ಹಿಂದಿನ ಚಿತ್ರಗಳಂತೆ ಹಾಡುಗಳು, ಡೈಲಾಗ್ಗಳು, ವಿಭಿನ್ನ ದೃಶ್ಯಗಳನ್ನು ಒಳಗೊಂಡಿರಲಿದೆ. ಇದಲ್ಲದೇ ಬನ್ಸಾಲಿ ಮುಂದೆ ಲವ್ ಆ್ಯಂಡ್ ವಾರ್ ಸಿನಿಮಾವನ್ನು ಸಹ ಇದೆ. ಈ ಚಿತ್ರದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ.