ಹೈದರಾಬಾದ್: ಮಲಯಾಳಂ ಚಿತ್ರರಂಗದೊಳಗಿನ ಕರಾಳ ಮುಖವನ್ನು ಬಹಿರಂಗಪಡಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಶೇರ್ ಮಾಡಿರೋ ಎಕ್ಸ್ ಪೋಸ್ಟ್‌ನಲ್ಲಿ, ವರದಿ ಬಹಿರಂಗಪಡಿಸಿರುವ ಅಂಶಗಳನ್ನು 'ಹೃದಯವಿದ್ರಾವಕ, ಏಕೆಂದರೆ ಇದು ಪರಿಚಿತ ವಿಷಯ' ಎಂದು ತಿಳಿಸಿದ್ದಾರೆ. ಇದು ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಪಿತೃಪ್ರಭುತ್ವದ ಶಕ್ತಿ ಮತ್ತು ಶೋಷಣೆಯ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ಕೂಡಾ ಹೊರಹಾಕಿದ್ದಾರೆ.
ನಟಿ ಸ್ವರಾ ಭಾಸ್ಕರ್ ಅವರು ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುವ ಮಹಿಳೆಯರು ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉದ್ಯಮದೊಳಗಿನ ಪರಿಸ್ಥಿತಿಗಳ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ತಾವು ಎದುರಿಸಿದ ಕಠಿಣ ಪರಿಸ್ಥಿತಿಗಳನ್ನು ಹಂಚಿಕೊಂಡ ಮತ್ತು ಬದಲಾವಣೆಗಾಗಿ ಪ್ರತಿಪಾದಿಸಿದ ನಟಿಮಣಿಯರಿಗೆ ಸಾಥ್ ನೀಡಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಟಿಮಣಿಯರ ನಿರ್ಣಾಯಕ ಪಾತ್ರವನ್ನು (ಹೋರಾಟ) ಒತ್ತಿ ಹೇಳಿದರು.
ತಮ್ಮ ಪೋಸ್ಟ್‌ನಲ್ಲಿ, ಮನರಂಜನಾ ಉದ್ಯಮದ ಪಿತೃಪ್ರಭುತ್ವ ವ್ಯವಸ್ಥೆಯನ್ನು ಟೀಕಿಸಿದರು. ಚಿತ್ರೋದ್ಯಮದ ರಚನೆ ಹೇಗಿದೆ ಎಂದರೆ, ನೈತಿಕತೆಗಿಂತ ಹೆಚ್ಚಾಗಿ ಆರ್ಥಿಕ ಮತ್ತು ಕಾರ್ಯಾಚರಣೆಯ ಅನುಕೂಲದ ವಿಚಾರಗಳಿಗೆ ಆದ್ಯತೆಯಿದೆ. ಇದು ಮೌನಕ್ಕೆ ಕಾರಣವಾಗುತ್ತದೆ ಎಂದ ನಟಿ, ಉದ್ಯಮದಲ್ಲಿನ ಯಶಸ್ವಿ ಜನರು ಹೇಗೆ ರಕ್ಷಿಸಲ್ಪಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಅಂಥ ವಿಚಾರಗಳಿಗೆ ಸವಾಲು ಹಾಕುವವರನ್ನು ಸಮಸ್ಯೆ ಸೃಷ್ಟಿಸುವವರೆಂದು ಕರೆಯಲಾಗುತ್ತದೆ ಎಂದು ಸಹ ತಿಳಿಸಿದ್ದಾರೆ.
💔 This moment of #MeToo prevailing in our industry breaks you. Kudos to the women who have stood their ground and emerged victorious. ✊ The #HemaCommittee was much needed to break the abuse. But will it?
— KhushbuSundar (@khushsundar) August 28, 2024
Abuse, asking for sexual favors, and expecting women to compromise to…
ಭಾರತದ ಇತರ ಚಲನಚಿತ್ರೋದ್ಯಮಗಳು ಕೂಡಾ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಧಿಕಾರದ ದುರುಪಯೋಗದಂತಹ ಸಮಸ್ಯೆಗಳನ್ನು ಪರಿಹರಿಸಲು ಅಹಿತಕರ ಸತ್ಯಗಳನ್ನು ಎದುರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ನಟಿಯ ಪೋಸ್ಟ್ ಉದ್ಯಮದಲ್ಲಿನ ಬದಲಾವಣೆಗೆ ಕರೆ ನೀಡಿದೆ.
ಇದನ್ನೂ ಓದಿ: ಮಲಯಾಳಂ ನಟ ಸಿದ್ದಿಕ್ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು! - Rape Case against Actor Siddique
ಇತ್ತೀಚೆಗಷ್ಟೇ ಬಹಿರಂಗಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿದೆ. ನಟಿಮಣಿಯರು ಹೇಳಿಕೆ ಕೊಡಲು ಶುರು ಮಾಡಿದ್ದಾರೆ. ತನುಶ್ರೀ ದತ್ತಾ ಮತ್ತು ಪಾರ್ವತಿ ತಿರುವೋತು ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾರ್ವಜನಿಕ ಚರ್ಚೆ ಮತ್ತು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ವರದಿ ಹೆಚ್ಚಿನ ತನಿಖೆಗೆ ದಾರಿಮಾಡಿಕೊಟ್ಟಿದೆ. ಮಲಯಾಳಂ ಚಿತ್ರರಂಗದಲ್ಲಿನ ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಗಳು ಕೇಳಿ ಬಂದಿವೆ.
ಇದನ್ನೂ ಓದಿ: 'ಅಮ್ಮ' ಅಧ್ಯಕ್ಷ ಸ್ಥಾನಕ್ಕೆ ಸೂಪರ್ಸ್ಟಾರ್ ಮೋಹನ್ ಲಾಲ್ ರಾಜೀನಾಮೆ - Actor Mohanlal Resigns
ಹಲವು ಆರೋಪಗಳು ಕೇಳಿಬಂದ ಬೆನ್ನಲ್ಲೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಿದ್ದಿಕ್ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಇಬ್ಬರ ಮೇಲೀಗ ಪ್ರಕರಣ ದಾಖಲಾಗಿದೆ. ಕಳೆದ ದಿನಮಲಯಾಳಂ ಚಲನಚಿತ್ರ ನಟರ ಸಂಘದ (ಅಮ್ಮ) ಅಧ್ಯಕ್ಷ ಮೋಹನ್ ಲಾಲ್ ಸೇರಿದಂತೆ ಆಡಳಿತ ಮಂಡಳಿಯ 17 ಜನರು ರಾಜೀನಾಮೆ ನೀಡಿದ್ದಾರೆ.