ETV Bharat / entertainment

ದೇವೇಗೌಡರಿಂದ ಮಾಜಿ ಶಾಸಕನ ಪುತ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಅನಾವರಣ - Harshini Cinemas Launched - HARSHINI CINEMAS LAUNCHED

ಮಾಜಿ ಶಾಸಕ ಡಾ.ದೇವಾನಂದ್ ಪೂ ಚವ್ಹಾಣ ಅವರ ಪುತ್ರಿ ಲತಾಶ್ರೀ ಡಿ.ಸಿ. ಅವರು 'ಹರ್ಷಿಣಿ ಸಿನಿಮಾಸ್' ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರು ಉದ್ಘಾಟಿಸಿ ಹರಸಿದ್ದಾರೆ.

ದೇವೇಗೌಡರಿಂದ ಮಾಜಿ ಶಾಸಕನ ಪುತ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಅನಾವರಣ
ದೇವೇಗೌಡರಿಂದ ಮಾಜಿ ಶಾಸಕನ ಪುತ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಅನಾವರಣ (ETV Bharat)
author img

By ETV Bharat Karnataka Team

Published : Sep 27, 2024, 11:06 AM IST

ಕನ್ನಡ ಚಿತ್ರರಂಗಕ್ಕೆ ದಿನೇ ದಿನೇ ಪ್ರತಿಭಾನ್ವಿತ​ ನಟ-ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರ ಆಗಮನವಾಗುತ್ತಿದೆ. ಇದೀಗ ವಿಜಯಪುರದ ಮಾಜಿ ಶಾಸಕ ಡಾ.ದೇವಾನಂದ್ ಪೂ ಚವ್ಹಾಣ ಹಾಗೂ ಶ್ರೀಮತಿ ಸುನೀತಾ ದೇವಾನಂದ ಚವ್ಹಾಣ ದಂಪತಿಯ ಪುತ್ರಿ ಲತಾಶ್ರೀ ಡಿ.ಸಿ. ಅವರು 'ಹರ್ಷಿಣಿ ಸಿನಿಮಾಸ್' ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.

ಇತ್ತೀಚೆಗೆ ಚಿತ್ರ ನೂತನ ನಿರ್ಮಾಣ ಸಂಸ್ಥೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಉದ್ಘಾಟಿಸಿ, ಲತಾಶ್ರೀ ಡಿ.ಸಿ ಅವರ ಹೊಸ ಪ್ರಯತ್ನಕ್ಕೆ ಆಶೀರ್ವದಿಸಿದ್ದಾರೆ‌.

ದೇವೇಗೌಡರಿಂದ ಮಾಜಿ ಶಾಸಕನ ಪುತ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಅನಾವರಣ (ETV Bharat)

ಈ ಕುರಿತು ಮಾತನಾಡಿರುವ ನಿರ್ಮಾಪಕಿ ಲತಾಶ್ರೀ, "ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಆಶಯ ಹೊಂದಿರುವ ಹರ್ಷಿಣಿ ಸಿನಿಮಾಸ್ ಸಂಸ್ಥೆಯಿಂದ ಮೊದಲ ಪ್ರಯತ್ನವಾಗಿ 'ಕಿರುನಗೆ' ಚಿತ್ರ ನಿರ್ಮಿಸುತ್ತಿದ್ದೇವೆ. ಸತ್ಯಂ ಸೇರಿದಂತೆ ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ ಅಶೋಕ್ ಕಡಬ 'ಕಿರುನಗೆ'ಯನ್ನು ನಿರ್ದೇಶಿಸುತ್ತಿದ್ದಾರೆ" ಎಂದರು.

'ಹರ್ಷಿಣಿ ಸಿನಿಮಾಸ್' ನೂತನ ಚಿತ್ರ ನಿರ್ಮಾಣ ಸಂಸ್ಥೆ
'ಹರ್ಷಿಣಿ ಸಿನಿಮಾಸ್' ನೂತನ ಚಿತ್ರ ನಿರ್ಮಾಣ ಸಂಸ್ಥೆ (ETV Bharat)

ಮಹಿಳಾ ಪ್ರಧಾನ ಚಿತ್ರವಾಗಿರುವ 'ಕಿರುನಗೆ'ಗೆ ಲತಾಶ್ರೀ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಅಶೋಕ್ ಕಡಬ ಅವರದು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಂಡದ ಸುಕೃತ್ ಸಂಗೀತ ನೀಡಲಿದ್ದಾರೆ‌. ಕನ್ನಡದ ಖ್ಯಾತ ನಟಿ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕರು ತಿಳಿಸಿದರು.

ಒಂದು ಹೆಣ್ಣು ತನ್ನ ಪ್ರೀತಿ, ಇಷ್ಟ, ಸಂತೋಷವೆಲ್ಲವನ್ನೂ ತ್ಯಜಿಸಿ ಹೆತ್ತವರ ಸಂತೋಷಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು, ಎಲ್ಲರಂತೆ ನಗುನಗುತಾ ಬಚ್ಚಿಟ್ಟ ಹಲವು ನಿಗೂಢ ವಿಷಯಗಳನ್ನು ಬೆನ್ನಟ್ಟಿ ಹೊರಟ ಗರ್ಭಿಣಿ ಹೆಣ್ಣು ಮಗಳ ಭಾವನಾತ್ಮಕ ಕಥೆಯೇ ಕಿರುನಗೆ. 'A Smile Can Hide So much' ಎಂಬ ಅಡಿ ಬರಹವನ್ನು ಚಿತ್ರ ಹೊಂದಿದೆ.

ಇದನ್ನೂ ಓದಿ: ದೊಡ್ಮನೆ ಕುಡಿ ವಿನಯ್ ರಾಜ್​​ಕುಮಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಭೀಮ' ದುನಿಯಾ ವಿಜಯ್ - Duniya Vijay Vinay Rajkumar movie

ETV Bharat Logo

Copyright © 2025 Ushodaya Enterprises Pvt. Ltd., All Rights Reserved.