ETV Bharat / entertainment

ಹಿಂದಿನ ಸಿನಿಮಾಗಳಂತೆ 'ಒನ್ ಅಂಡ್ ಅ ಹಾಫ್' ಗೆಲ್ಲಿಸಿ: ಮಾನ್ವಿತಾ ಹರೀಶ್ ಕಾಮತ್ - One and A Half movie - ONE AND A HALF MOVIE

ಟೈಟಲ್ ಹಾಗೂ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ''ಒನ್ ಅಂಡ್ ಅ ಹಾಫ್'' ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅನಾವರಣಗೊಂಡಿದೆ.

One and A Half movie
'ಒನ್ ಅಂಡ್ ಅ ಹಾಫ್' ಈವೆಂಟ್ (ETV Bharat)
author img

By ETV Bharat Karnataka Team

Published : Sep 26, 2024, 7:30 PM IST

ಒಂದು ಸಿನಿಮಾ ಯಾವೆಲ್ಲಾ ಆ್ಯಂಗಲ್​​ಗಳಿಂದ ಸದ್ದು - ಸುದ್ದಿ ಅಗಬೇಕೋ ಅವೆಲ್ಲಾ ಆ್ಯಂಗಲ್​​ಗಳಿಂದ ''ಒನ್ ಅಂಡ್ ಅ ಹಾಫ್'' ಸಿನಿಮಾ ಸುದ್ದಿಯಾಗುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅನಾವರಣಗೊಂಡಿದೆ. 'ಹೇ ನಿಧಿ' ಎಂಬ ಮೊದಲ ಗೀತೆ ಹಿಟ್ ಲಿಸ್ಟ್ ಸೇರಿರುವ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹಾಡಿನ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿದೆ.

ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಒನ್ ಅಂಡ್ ಅ ಹಾಫ್ ಚಿತ್ರದ ಹ್ಯಾಂಡಲ್ ವಿತ್ ಕೇರ್ ಎಂಬ ಸಾಂಗ್ ರಿಲೀಸ್ ಮಾಡಲಾಗಿದೆ. ಚಿತ್ರದ ನಾಯಕ ಹಾಗೂ ನಿರ್ದೇಶಕ ಶ್ರೇಯಶ್ ಸೂರಿ ಹುಟ್ಟುಹಬ್ಬದ ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಮಾಲ್​​ನಲ್ಲಿ ನಡೆದ ಈವೆಂಟ್​ನಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

One and A Half movie
'ಒನ್ ಅಂಡ್ ಅ ಹಾಫ್' ಕಲಾವಿದರು (ETV Bharat)

ಇದೇ ವೇಳೆ ನಟಿ ಮಾನ್ವಿತಾ ಹರೀಶ್ ಮಾತನಾಡಿ, ಸಿನಿಮಾ ಇಂಡಸ್ಟ್ರಿಗೆ ಆಕಸ್ಮಿಕವಾಗಿ ಎಂಟ್ರಿ ಕೊಟ್ಟೆ. ಈವರೆಗೆ ಪ್ರತೀ ಸಿನಿಮಾದಲ್ಲೂ ತುಂಬಾನೇ ಪ್ರೀತಿ ಕೊಟ್ಟಿದ್ದೀರ. ಮೊದಲ 3 ಸಿನಿಮಾಗಳಲ್ಲಿ 125 ದಿನದ ಬೋರ್ಡ್ ನಿಮ್ಮ ಕಡೆಯಿಂದ ಬಂದಿದೆ. ಅದೇ ರೀತಿ ಒನ್ ಅಂಡ್ ಅ ಹಾಫ್ ಸಿನಿಮಾಗೆ 125 ದಿನ ಅಲ್ಲ, 150 ದಿನದ ಬೋರ್ಡ್ ಬರಲಿ. ನಿಮ್ಮ ಸಹಕಾರವಿಲ್ಲದೇ ಏನೂ ಆಗಲ್ಲ. ಈ ಚಿತ್ರ ನನಗೆ ಬಹಳ ಸ್ಪೆಷಲ್. ಶ್ರೇಯಸ್ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿದೆ. ಅವರು ಚಿತ್ರವನ್ನು ನಿರ್ದೇಶನ ಮಾಡುವುದಲ್ಲದೇ, ನಟಿಸುತ್ತಿದ್ದಾರೆ. ಅವರ ತಂದೆ ಹೆಸರು ಸೂರಿ. ನನ್ನ ಗಾಢ್ ಫಾದರ್ ಹೆಸರು ಸೂರಿ. ಆ ಲಕ್ ಫ್ಯಾಕ್ಟರ್ ಕೂಡಾ ಈ ಚಿತ್ರದಲ್ಲಿ ವರ್ಕ್ ಆಗಲಿ ಎಂದು ತಿಳಿಸಿದರು.

ನಟ ಕಂ ನಿರ್ದೇಶಕ ಶ್ರೇಯಶ್ ಸೂರಿ ಮಾತನಾಡಿ, ಈ ಸಿನಿಮಾ ನನ್ನಿಂದ ಅಲ್ಲ. ಇಡೀ ತಂಡದ ಕೆಲಸ. ಈ ಚಿತ್ರದ ನನ್ನದಲ್ಲ. ನಮ್ಮೆಲ್ಲರದ್ದು, ರಿಲೀಸ್ ಆದ ಮೇಲೆ ನಿಮ್ಮೆಲ್ಲರದ್ದು. ಎಲ್ಲಿ ತನಕ ಕರೆದುಕೊಂಡು ಹೋಗುತ್ತೀರಾ? ಎಷ್ಟು ಮುಂದೆ ಹೋಗುತ್ತೀರಾ? ಅಷ್ಟೇ ಚೆನ್ನಾಗಿ ಬೆಳೆಯುತ್ತಾ ಬೆಳೆಯುತ್ತಾ ಒಳ್ಳೆ ಸಿನಿಮಾ ಮಾಡುತ್ತೇವೆ ಎಂದರು.

ಚಿತ್ರದಲ್ಲಿ ಮಾನ್ವಿತಾ ಹರೀಶ್ ಕಾಮತ್ ನಾಯಕಿಯಾಗಿ ನಟಿಸಿದ್ದು, ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ರೀ ರಿಲೀಸ್​ನಲ್ಲೂ ಒಳ್ಳೆ ಗಳಿಕೆ ಮಾಡಿದ ಉಪೇಂದ್ರ, ಜಾಕಿ, ರಾಬರ್ಟ್, ಕರಿಯ, ಎ ಸಿನಿಮಾಗಳು - Re Released Movies collection

ಹ್ಯಾಂಡಲ್ ವಿತ್ ಕೇರ್ ಎಂಬ ಹಾಡಿಗೆ ಎಂ.ಸಿ. ಬಿಜ್ಜು ಹಾಗೂ ಯಶಸ್ ನಾಗ್ ಸಾಹಿತ್ಯ ಬರೆದಿದ್ದು, ನಾಯಕ ಶ್ರೇಯಸ್ ಸೂರಿ, ಅನಂತ್ ಹಾಗೂ ಎಂ.ಸಿ. ಬಿಜ್ಜು ಧ್ವನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಟ್ಯೂನ್ ಹಾಕಿರುವ ಹಾಡಿಗೆ ಶ್ರೇಯಸ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಒನ್ ಅಂಡ್ ಅ ಹಾಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ಅಡಿ ಆರ್. ಚರಣ್, ಬಿ. ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಕೊರಗಜ್ಜ' ನಿರ್ದೇಶಕ ಸುಧೀರ್ ಅತ್ತಾವರ್​​ಗೆ ನಿರ್ಮಾಪಕರಿಂದ 20 ಲಕ್ಷದ ಕಾರ್ ಗಿಫ್ಟ್ - Koragajja

ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ, ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಅ ಹಾಫ್ ಸಿನಿಮಾ ಶೀಘ್ರದಲ್ಲೇ ಥಿಯೇಟರ್​ಗೆ ಹಾಜರಿ ಹಾಕಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.