ETV Bharat / entertainment

'ಭಾವನೆಗಳನ್ನು ಗೌರವಿಸಿ': ಟ್ರೋಲಿಗರಿಗೆ ಗಾಯಕ ಪ್ರಕಾಶ್ ಕುಮಾರ್ ಮನವಿ - Prakash Saindhavi Divorce

author img

By ETV Bharat Karnataka Team

Published : May 15, 2024, 2:07 PM IST

ಜಿ.ವಿ.ಪ್ರಕಾಶ್ ಕುಮಾರ್ ಹಾಗೂ ಸೈಂಧವಿ ಬೇರೆಯಾಗುತ್ತಿರುವ ಬಗ್ಗೆ ಟೀಕೆಗಳು ಕೇಳಿಬರುತ್ತಿದೆ. ಈ ಬಗ್ಗೆ ಗಾಯಕ ಪ್ರತಿಕ್ರಿಯಿಸಿದ್ದಾರೆ.

GV Prakash Kumar
ಜಿ.ವಿ.ಪ್ರಕಾಶ್ ಕುಮಾರ್ (Instagram)

ಗಾಯಕ, ನಟ ಜಿ.ವಿ.ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಸೋಮವಾರ ತಡರಾತ್ರಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ವೈಯಕ್ತಿಕ ಕಾರಣಗಳಿಂದ 11 ವರ್ಷಗಳ ವೈವಾಹಿಕ ಜೀವನಕ್ಕೆ ಫುಲ್​ ಸ್ಟಾಪ್​​​ ಇಡುತ್ತಿದ್ದೇವೆ ಎಂದು ಸೋಷಿಯಲ್​​ ಮೀಡಿಯಾ ಮೂಲಕ ಮಾಹಿತಿ ಒದಗಿಸಿದ್ದರು.

ಮೇ 13ರಂದು ಇನ್​​ಸ್ಟಾಗ್ರಾಮ್​​​ ಮೂಲಕ ದಂಪತಿ ತಮ್ಮ ಪ್ರತ್ಯೇಕತೆಯ ಸುದ್ದಿಯನ್ನು ಪ್ರಕಟಿಸಿದ್ದರು. ಸೋಷಿಯಲ್​ ಮೀಡಿಯಾ ಪೋಸ್ಟ್​​ನಲ್ಲಿ, ಇದು ಪರಸ್ಪರ ನಿರ್ಧಾರ ಎಂಬುದನ್ನು ಸ್ಪಷ್ಟಪಡಿಸಿದರೂ ಕೂಡ, ವೈಯಕ್ತಿಕ ಜೀವನ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗಾಯಕ, ಭಾವನೆಗಳನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಕಠಿಣ ಸಮಯವನ್ನು ಅರ್ಥಮಾಡಿಕೊಳ್ಳುವಂತೆಯೂ ನೆಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ. ಟ್ರೋಲ್‌ಗಳನ್ನು ಉದ್ದೇಶಿಸಿ ಇನ್​ಸ್ಟಾ ಸ್ಟೋರಿ, ಪೋಸ್ಟ್ ಶೇರ್ ಮಾಡಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ತಾವು ಬೇರೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಇನ್​​​ಸ್ಟಾಗ್ರಾಮ್​​​ ಪೋಸ್ಟ್​​​ನಲ್ಲೇನಿದೆ?: ಜಿ.ವಿ.ಪ್ರಕಾಶ್​​ ಕುಮಾರ್​​ ತಮಿಳಿನಲ್ಲಿ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತಮ್ಮ ಪ್ರತ್ಯೇಕತೆಯು ಪರಸ್ಪರ ನಿರ್ಧಾರ ಎಂಬುದನ್ನು ಸ್ಪಷ್ಟಪಡಿಸಿದ ಗಾಯಕ, ಅನಗತ್ಯ ಹೇಳಿಕೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನೂ ತಿಳಿಸಿದ್ದಾರೆ. ನೋವುಂಟುಮಾಡುವ ಟೀಕೆಗಳು ಮತ್ತು ಟ್ರೋಲಿಂಗ್‌ಗಳನ್ನು ನಿಲ್ಲಿಸುವ ಸಲುವಾಗಿ ಪೋಸ್ಟ್ ಶೇರ್ ಮಾಡಿರುವ ನಟ, "ಜನರು ಸರಿಯಾದ ಮಾಹಿತಿ ಅಥವಾ ತಿಳುವಳಿಕೆಯಿಲ್ಲದೇ ಇಬ್ಬರು ವ್ಯಕ್ತಿಗಳ ಸೇರುವಿಕೆ ಅಥವಾ ಪ್ರತ್ಯೇಕತೆಯ ಬಗ್ಗೆ ಚರ್ಚಿಸುವುದು ಅಸಮಾಧಾನಕರ ವಿಚಾರ. ಸೆಲೆಬ್ರಿಟಿ ಎಂಬ ಕಾರಣಕ್ಕಾಗಿ, ಖಾಸಗಿ ಜೀವನದ ಬಗ್ಗೆ ಟೀಕೆ ಮಾಡುವುದು ಸೂಕ್ತವಲ್ಲ. ತಮ್ಮ ಹೇಳಿಕೆಗಳು ಇತರರಿಗೆ ನೋವುಂಟುಮಾಡಬಹುದು ಎಂಬುದನ್ನು ಮರೆತುಬಿಡುವಷ್ಟು ತಮಿಳು ಜನರು ಘನತೆ ಕಳೆದುಕೊಂಡಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ರೋಹಿತ್​ ಶೆಟ್ಟಿ ಭೇಟಿ: ಖ್ಯಾತ ನಿರ್ದೇಶಕ ಹೇಳಿದ್ದಿಷ್ಟು - Rohit Shetty Visits Parliament

ಮುಂದುವರಿಸಿ, "ತಮ್ಮ ಪ್ರತ್ಯೇಕತೆಯ ಮೂಲ ಕಾರಣವನ್ನು ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ತಿಳಿಸಲಾಗಿದೆ. ನಾವು ಈ ನಿರ್ಧಾರ ಕೈಗೊಳ್ಳುವ ಮೊದಲು ಸಾಕಷ್ಟು ಯೋಚಿಸಿದ್ದೇವೆ. ನಿಮ್ಮ ಟೀಕೆಗಳು ನೋವುಂಟುಮಾಡುತ್ತವೆ ಎಂಬುದನ್ನು ನಿಮಗೆ ತಿಳಿಸಲು ನಾನು ಈ ಬರಹವನ್ನು ಬರೆಯುತ್ತಿದ್ದೇನೆ. ದಯವಿಟ್ಟು ಎಲ್ಲರ ಭಾವನೆಗಳ ಬಗ್ಗೆ ಗಮನವಿರಲಿ. ಸಹಾಯಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 11 ವರ್ಷದ ದಾಂಪತ್ಯಕ್ಕೆ ಗುಡ್‌ಬೈ ಹೇಳಿದ ಗಾಯಕ ದಂಪತಿ ಜಿ.ವಿ.ಪ್ರಕಾಶ್ ಕುಮಾರ್-ಸೈಂಧವಿ! - G V Prakash Saindhavi Divorce

ಜಿ.ವಿ.ಪ್ರಕಾಶ್ ಮತ್ತು ಸೈಂಧವಿ ಶಾಲಾ ದಿನಗಳಿಂದಲೂ ಪ್ರೀತಿಯಲ್ಲಿದ್ದರು. 2013ರಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ಇಬ್ಬರೂ ಹಸೆಮಣೆ ಏರಿದ್ದರು. ಅನ್ವಿ ಎಂಬ ಹೆಣ್ಣು ಮಗಳಿದ್ದಾಳೆ. 2024ರ ಮೇ 13ರಂದು ತಮ್ಮ ಪತ್ಯೇಕತೆಯನ್ನು ಘೋಷಿಸಿದರು. ಸೈಂಧವಿ ಕರ್ನಾಟಿಕ್ ಗಾಯಕಿ, ಮ್ಯೂಸಿಶಿಯನ್​​. ಜಿ.ವಿ.ಪ್ರಕಾಶ್ ಕುಮಾರ್ ಗಾಯಕ, ಮ್ಯೂಸಿಕ್​​ ಕಂಪೋಸರ್ ಮತ್ತು ನಟನಾಗಿ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.