ETV Bharat / entertainment

ಊರ್ವಶಿ ರೌಟೇಲಾರ 'ಘುಸ್ಪೈಥಿಯಾ' ಮೂಲಕ ಬಾಲಿವುಡ್​​ಗೆ ಎಂಟ್ರಿ ಕೊಟ್ಟ ಕನ್ನಡ ನಿರ್ಮಾಪಕ ರಮೇಶ್ ರೆಡ್ಡಿ - Ghuspaithiya

ಕನ್ನಡ ನಿರ್ಮಾಪಕ ಎಂ. ರಮೇಶ್ ರೆಡ್ಡಿ ನಿರ್ಮಾಣದ 'ಘುಸ್ಪೈಥಿಯಾ' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ. ಮುಂಬೈನಲ್ಲಿ ನಿರ್ಮಾಪಕರು ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ನಮ್ಮ ಸಿನಿಮಾವನ್ನು ಬೆಂಬಲಿಸಿ, ಮತ್ತಷ್ಟು ಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ.

GHUSPAITHIYA Trailer release Event
'ಘುಸ್ಪೈಥಿಯಾ' ಟ್ರೇಲರ್ ರಿಲೀಸ್​ ಈವೆಂಟ್​ (ETV Bharat)
author img

By ETV Bharat Karnataka Team

Published : Jul 27, 2024, 6:49 PM IST

'ಘುಸ್ಪೈಥಿಯಾ' ಟ್ರೇಲರ್ ರಿಲೀಸ್​ ಈವೆಂಟ್​ (ETV Bharat)

ಕನ್ನಡ ಚಿತ್ರರಂಗದ ನಟ, ನಟಿಯರು ಜೊತೆಗೆ ನಿರ್ದೇಶಕ - ನಿರ್ಮಾಪಕರು ಬಹುಭಾಷೆಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಕೀರ್ತಿ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹರಡಿದೆ. ಇದೀಗ ಈ ಸಾಲಿಗೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಹೊಸ ಸೇರ್ಪಡೆ.

ಘುಸ್ಪೈಥಿಯಾ ಟ್ರೇಲರ್​ ರಿಲೀಸ್​​: ಕನ್ನಡದಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100, ಗಾಳಿಪಟ 2 - ಹೀಗೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಿರ್ಮಾಪಕ ಎಂದರೆ ಅದು ಎಂ. ರಮೇಶ್ ರೆಡ್ಡಿ. ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಇದೀಗ ಬಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ಸೇರಿ ನಿರ್ಮಿಸಿರುವ ಘುಸ್ಪೈಥಿಯಾ (GHUSPAITHIYA) ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ಸುಸಿ ಗಣೇಶನ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈವೆಂಟ್​ನಲ್ಲಿ ಎಂ. ರಮೇಶ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

'ಘುಸ್ಪೈಥಿಯಾ', ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ಚಿತ್ರ. ತಾವು ಬಂಡವಾಳ ಹೂಡಿರುವ ಸಿನಿಮಾದ ಬಗ್ಗೆ ನಿರ್ಮಾಪಕ ಎಂ ರಮೇಶ್ ರೆಡ್ಡಿ ಅವರು ಮುಂಬೈನ ಈವೆಂಟ್​ನಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದರು. ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಈ ಚಿತ್ರವನ್ನು ಬೆಂಬಲಿಸಿದರೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಬಹುದು. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲಾ, ಅಕ್ಷಯ್ ಒಬೆರಾಯ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಒಲಿಂಪಿಕ್ಸ್ 2024: ದೀಪಿಕಾ, ರಾಮ್​ಚರಣ್​​ ಸೇರಿದಂತೆ ಸೆಲೆಬ್ರಿಟಿಗಳಿಂದ ಬೆಂಬಲ - Celebrities Cheer on Athletes

'ಐರಾವತ' ಸಿನಿಮಾ ಮೂಲಕ ಕನ್ನಡಕ್ಕೂ ಪರಿಚಿತರಾಗಿರುವ ಊರ್ವಶಿ ರೌಟೇಲಾ ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ‌. ತಮ್ಮ ಸೌಂದರ್ಯದಿಂದಲೇ ಸದಾ ಸದ್ದು ಮಾಡುವ ಚೆಲುವೆ ಈ ಚಿತ್ರದ ಗೆಲುವಿನ ಮೇಲೆ ಸಾಕಷ್ಟು ನಿರಿಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಮೂರು ಪ್ರಮುಖ ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ. ಊರ್ವಶಿ ರೌಟೇಲಾ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು, ವಿನೀತ್ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್​ಲೈನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವವನಾಗಿ ಕಾಣಿಸಿಕೊಂಡಿದ್ದಾರೆ. ಸುಸಿ ಗಣೇಶನ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ. ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ. ಎಎ ಫಿಲ್ಮ್ಸ್ ಮೂಲಕ ಆಗಸ್ಟ್ 9ರಂದು 'ಘುಸ್ಪೈಥಿಯಾ' ತೆರೆಕಾಣಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

ಇದನ್ನೂ ಓದಿ: ನಾಯಕ ನಟನಾದ ಗಾಯಕ ನವೀನ್‌ ಸಜ್ಜು: 'ಲೋ ನವೀನ' ಅನೌನ್ಸ್​ಮೆಂಟ್​ ವಿಡಿಯೋ ರಿವೀಲ್​​​ - Lo Naveena

ETV Bharat Logo

Copyright © 2024 Ushodaya Enterprises Pvt. Ltd., All Rights Reserved.