ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಕುಟುಂಬದ ಕೊಡುಗೆ ಅಪಾರ. ವರನಟ ಡಾ.ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಾಮಾಜಿಕ ಮತ್ತು ಚಿತ್ರರಂಗದ ಕೊಡುಗೆ ದೊಡ್ಡದಿದೆ. ಇದೇ ಹಾದಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಪತ್ನಿ ಗೀತಾ ಹೆಜ್ಜೆ ಹಾಕುತ್ತಿದ್ದಾರೆ. ಗೀತಾ ಶಿವರಾಜ್ಕುಮಾರ್ ನಿರ್ಮಾಪಕಿಯಾಗಿ ಚಂದನವನದ ಭಾಗವಾಗಿದ್ದಾರೆ.
ಗೀತಾ ಪಿಕ್ಚರ್ಸ್ ಬ್ಯಾನರ್ ಹುಟ್ಟು ಹಾಕಿ ಮೊದಲನೆಯದಾಗಿ ವೇದ ಎಂಬ ಸಿನಿಮಾ ನಿರ್ಮಿಸಿದ ಅವರೀಗ ಕಂಟೆಂಟ್ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ಬಂದ ಭೈರತಿ ರಣಗಲ್ ಸೂಪರ್ ಹಿಟ್ ಆಗಿದೆ. ಅಲ್ಲದೇ ಕಳೆದ ತಿಂಗಳಷ್ಟೇ ಎ ಫಾರ್ ಆನಂದ್ ಸಿನಿಮಾವನ್ನು ಘೋಷಿಸಲಾಗಿದೆ. ಸದ್ಯ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟು ಹಬ್ಬದ ಸಲುವಾಗಿ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ.
PRODUCTION #4 | The Search Begins!!
— Geetha Pictures (@GeethaPictures) December 6, 2024
The extremely passionate @dheerenrajkumar and the man behind Shakhahaari, @sandeepsunkad13 unite to embark on a journey that promises to captivate and leave you craving more. #GeethaPictures #NewKannadaMovie #MovieAnnouncement pic.twitter.com/h3lFQkt3VE
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸಿನಿಮಾದಲ್ಲಿ ಹೀರೋ ಯಾರು ಎಂಬ ಕುತೂಹಲ ಸಹಜ. ಶಿವರಾಜ್ಕುಮಾರ್ ಸಹೋದರಿ ಪೂರ್ಣಿಮಾ ಅವರ ಪುತ್ರ ಧೀರೇನ್ ರಾಮ್ಕುಮಾರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ 'ಪ್ರೊಡಕ್ಷನ್ ನಂಬರ್ #4 The Search Begins' ಎಂಬ ಬರಹದೊಂದಿಗೆ ಹೊಸ ಪೋಸ್ಟರ್ ಅನಾವರಣಗೊಂಡಿದೆ. ಶಾಖಾಹಾರಿ ಎಂಬ ಸಿನಿಮಾ ಮಾಡಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರೋ ನಿರ್ದೇಶಕ ಸಂದೀಪ್ ಸುಂಕದ್ ಅವರು ಧೀರೇನ್ ನಟನೆಯ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಣ್ಣ, ಉಪ್ಪಿ, ರಾಜ್ ಶೆಟ್ರ '45' ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು
'ಶಿವ 123' ಚಿತ್ರದ ಮೂಲಕ ಧೀರೇನ್ ರಾಮ್ಕುಮಾರ್ ಮಾಸ್ ಲುಕ್ನಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ಆದ್ರೆ, ಈ ಸಿನಿಮಾ ಧೀರೇನ್ ರಾಮ್ ಕುಮಾರ್ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಹೆಸರು ತಂದುಕೊಡಲಿಲ್ಲ. ಹೀಗಾಗಿ ಕೆ.ಆರ್.ಜಿ.ಸ್ಟುಡಿಯೋಸ್ ನಿರ್ಮಾಪಕರು ಧೀರೇನ್ ರಾಮ್ ಕುಮಾರ್ ಹೆಸರಿನ ಬದಲಾಗಿ ಧೀರೇನ್ ಆರ್ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿದರು.
ಇದನ್ನೂ ಓದಿ: ವದಂತಿ.. ಅದು ವದಂತಿಯಷ್ಟೇ! ಡಿವೋರ್ಸ್ ರೂಮರ್ಸ್ ನಡುವೆ ಜೊತೆಯಾಗಿ ಕಾಣಿಸಿಕೊಂಡ ಐಶ್ವರ್ಯಾ ಅಭಿಷೇಕ್
ಈ ಬಣ್ಣದ ಲೋಕದಲ್ಲಿ ಸಕ್ಸಸ್ಗಾಗಿ ನಟ ನಟಿಯರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುವುದು ಹೊಸತೇನಲ್ಲ. ಅದೇ ರೀತಿ ನಟ ಧೀರೇನ್ ರಾಮ್ ಕುಮಾರ್ ಅವರೀಗ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಅವರಿಗಾಗಿ ಶಿವರಾಜ್ಕುಮಾರ್ ಸಿನಿಮಾ ಮಾಡ್ತಾ ಇರೋದು ಗಮನಾರ್ಹ ವಿಚಾರ. ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನದ ಅಂಗವಾಗಿ ಧೀರೇನ್ ಅವರ ಹೆಸರಿಡದ ಸಿನಿಮಾ ಅನೌನ್ಸ್ ಆಗಿದ್ದು, ಈ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ಇರ್ತಾರೆ? ತಂತ್ರಜ್ಞರು ಯಾರು? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.