ETV Bharat / entertainment

'ಫಾರ್ ರಿಜಿಸ್ಟ್ರೇಷನ್' ಟ್ರೇಲರ್​​: ಪೃಥ್ವಿ - ಮಿಲನ ಸಿನಿಮಾ ಮೇಲೆ ಹೆಚ್ಚಿದ ಕುತೂಹಲ

author img

By ETV Bharat Karnataka Team

Published : Feb 13, 2024, 1:32 PM IST

ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಫಾರ್ ರಿಜಿಸ್ಟ್ರೇಷನ್' ಟ್ರೇಲರ್​​ ಅನಾವರಣಗೊಂಡಿದೆ.

For registration
'ಫಾರ್ ರಿಜಿಸ್ಟ್ರೇಷನ್'

''ಫಾರ್ ರಿಜಿಸ್ಟ್ರೇಷನ್'' - ಕನ್ನಡ ಚಿತ್ರರಂಗದಲ್ಲಿ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಾಲಗದ ಮೂಲಕ ಇಡೀ ಚಿತ್ರತಂಡ ಸುದ್ದಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದು, ವಿಶೇಷವಾಗಿತ್ತು. ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

  • " class="align-text-top noRightClick twitterSection" data="">

ಟ್ರೇಲರ್ ಬಿಡುಗಡೆ ಬಳಿಕ ನಟ ಪೃಥ್ವಿ ಅಂಬಾರ್ ಮಾತನಾಡಿ, ಫಾರ್ ರಿಜಿಸ್ಟ್ರೇಷನ್ ಇಬ್ಬರು ಸಹಪಾಠಿಗಳ ಪ್ರಯತ್ನ. ಇಬ್ಬರು ನವೀನ್ ಅವರ ಕನಸಿನ ಕೂಸು. ಹಾರ್ಡ್ ವರ್ಕ್ ಮಾಡಿ ಸಿನಿಮಾ ನಿರ್ಮಿಸಲಾಗಿದೆ. ರಿಜಿಸ್ಟ್ರೇಷನ್ ಬಗ್ಗೆ ಗೊತ್ತಿರಬಹುದು. ಜಾಗ, ಗಾಡಿ ಅದು ಇದು ಅಂತಾ ರಿಜಿಸ್ಟ್ರೇಶನ್​​ ಮಾಡಿಸುತ್ತೇವೆ. ಹಾಗೆಯೇ ಮನಸ್ಸಿನಲ್ಲಿ ಸಂಬಂಧಗಳು ಸಹ ರಿಜಿಸ್ಟ್ರೇಷನ್ ಆಗಬೇಕು ಅನ್ನೋದು ನಮ್ಮ ಆಸೆ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾ ಎಲ್ಲರಿಗೂ ಹತ್ತಿರವಾಗಲಿದೆ. ಎಲ್ಲ ಪಾತ್ರವರ್ಗವದವರು ಅದ್ಭುತವಾಗಿ ನಟಿಸಿದ್ದಾರೆ ಎಂದು ತಿಳಿಸಿದರು.

For registration
'ಫಾರ್ ರಿಜಿಸ್ಟ್ರೇಷನ್'

ನಟಿ ಮಿಲನ ನಾಗರಾಜ್ ಮಾತನಾಡಿ, ನವೀನ್ ಸರ್ ಮನೆಗೆ ಬಂದು ಕಥೆ ವಿವರಿಸಿದರು. ಬಹಳ ತಯಾರಿಯಿಂದ ಬಂದಿದ್ದರು. ಫಸ್ಟ್ ಆಫ್ ಕಥೆ ಹೇಳಿ ನಿಲ್ಲಿಸಿಬಿಟ್ಟರು. ಕಂಟಿನ್ಯೂ ಮಾಡಿ ಎಂದಾಗ ನೀವು ಸಿನಿಮಾ ಒಪ್ಪಿಕೊಂಡರೇ ಕಥೆ ಹೇಳುವುದು ಎಂದರು. ಸರಿ ಸರ್ ಯೋಚನೆ ಮಾಡಿ ಹೇಳುತ್ತೇನೆ ಎಂದೆ. ಆಮೇಲೆ, ಸಿನಿಮಾ ಮಾಡುತ್ತೇನೆ ಬಂದು ಕಥೆ ಹೇಳಿ ಅಂದಾಗ ಕಥೆ ಹೇಳಿದರು. ಒಂದು ರೀತಿ ಬ್ಲ್ಯಾಕ್​​​ ಮೇಲೆ ಮಾಡಿ ಹೋಗಿದ್ದರು. ನಿರ್ಮಾಪಕರಾದ ನವೀನ್ ಸರ್ ಕೂಡ ಬಹಳ ಫ್ಯಾಷನೆಟೆಡ್ ನಿರ್ಮಾಪಕರು. ಬಹಳಷ್ಟು ಇಂಟರ್​ವ್ಯೂಗಳಲ್ಲಿಯೂ ಹೇಳಿದ್ದೇನೆ. ಟೈಟಲ್ ಕೊಡುವುದರಿಂದ ಹಿಡಿದು ಕಥೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಗೆಲ್ಲಬೇಕು. ಇಂತಹ ನಿರ್ದೇಶಕರು, ನಿರ್ಮಾಪಕರು ಗೆಲ್ಲಬೇಕು ಎಂದು ಮನದಾಳ ಹಂಚಿಕೊಂಡರು.

For registration
'ಫಾರ್ ರಿಜಿಸ್ಟ್ರೇಷನ್'

ನಿರ್ಮಾಪಕರಾದ ನವೀನ್ ರಾವ್ ಮಾತನಾಡಿ, ಬಹಳ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು. ಎರಡು ತಿಂಗಳ ಚರ್ಚೆ ಬಳಿಕ ಕಥೆ ರೆಡಿ ಮಾಡಿಕೊಂಡೆವು. ಕಥೆ ಡಿಮ್ಯಾಂಡ್ ಮಾಡಿದಾಗ ನಾವು ಮೊದಲ ಭೇಟಿಯಾಗಿದ್ದು, ಮಿಲನಾ ಮೇಡಂ ಅವರನ್ನು. ಅವರಿಗೆ ಕಥೆ ಹೇಳಿದೆವು. ಆ ನಂತರ ಪೃಥ್ವಿ ಸರ್ ಭೇಟಿ ಮಾಡಿ ಕಥೆ ಹೇಳಿದೆವು. ಎಲ್ಲ ಕಲಾವಿದರ ಸಹಕಾರದಿಂದ ಈ ಚಿತ್ರವಾಗಿದೆ. ಎಲ್ಲರೂ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ನನ್ನ ಕುಟುಂಬಸ್ಥರು ಸಪೋರ್ಟ್ ಆಗಿ ನಿಂತಿದ್ದಾರೆ. ಕೃಷ್ಣ ಸರ್ ಕೂಡ ಮೇಡಂ ಸಿನಿಮಾಗೆ ಸ್ಟ್ರೆಂಥ್ ಆಗಿದ್ದರು. ಇದೇ 23ಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ. ನಿಮ್ಮ ಸಹಕಾರ ಅಗತ್ಯವಿದೆ. ಈ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ರೆಡಿಯಾಗುತ್ತಿದ್ದೇವೆ ಎಂದು ಕೂಡ ತಿಳಿಸಿದರು.

For registration
'ಫಾರ್ ರಿಜಿಸ್ಟ್ರೇಷನ್'

ಇದನ್ನೂ ಓದಿ: 'ಗೌರಿ'ಯ ಪ್ರೇಮಭರಿತ ಫೋಟೋಶೂಟ್​: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾವಿದು

ನಿರ್ದೇಶಕ ನವೀನ್ ದ್ವಾರಕಾನಾಥ್ ಮಾತನಾಡಿ, ಹೊಸ ಪ್ರಯತ್ನ ಮಾಡಿದ್ದೇವೆ. ಬೆನ್ನು ತಟ್ಟಿ ಹಾರೈಸಿ. ತಪ್ಪಾಗಿದ್ದರೆ, ಇನ್ನೊಮ್ಮೆ ಬೆನ್ನು ತಟ್ಟಿ ಚೆನ್ನಾಗಿ ಮಾಡಿ ಅಂತಾ ಸಲಹೆ ಕೊಡಿ. ನಾನು ಈ ಚಿತ್ರವನ್ನು ನನ್ನ ಗುರುಗಳಾದ ಸಿ ಆರ್ ಸಿಂಹ ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿರುವ ದೀಪಿಕಾ ಪಡುಕೋಣೆ

ಸಂಬಂಧದ ಮಹತ್ವ ಸಾರುವ 'ಫಾರ್ ರಿಜಿಸ್ಟ್ರೇಷನ್'ನ ಟ್ರೇಲರ್ ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕಥೆ, ನಿರ್ದೇಶನವನ್ನು ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಅವರ ಸಂಕಲನ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್​ ಅಡಿ ನವೀನ್ ರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ 'ಫಾರ್ ರಿಜಿಸ್ಟ್ರೇಷನ್' ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.