ETV Bharat / entertainment

ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್: 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​ ಡೇಟ್ ಅನೌನ್ಸ್ - ಮಿಲನ ನಾಗರಾಜ್‌

ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ಅವರ ಬಹುನಿರೀಕ್ಷಿತ ಚಿತ್ರ 'ಫಾರ್​ ರಿಜಿಸ್ಟ್ರೇಷನ್' ಫೆಬ್ರವರಿ ಕೊನೆಗೆ ತೆರೆಕಾಣಲಿದೆ.

'For Registration' movie
'ಫಾರ್​ ರಿಜಿಸ್ಟ್ರೇಷನ್'
author img

By ETV Bharat Karnataka Team

Published : Jan 28, 2024, 11:18 AM IST

''ಫಾರ್​ ರಿಜಿಸ್ಟ್ರೇಷನ್''​ ಸ್ಯಾಂಡಲ್​ವುಡ್​ನಲ್ಲಿ ಕೆಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರತಂಡ ಶೂಟಿಂಗ್ ಅನುಭವ ಹಂಚಿಕೊಂಡಿದೆ.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ''ನಮಗಿದು ಚಾಲೆಂಜಿಂಗ್ ಟೈಮ್. ತಡವಾಗಿದೆ, ಒಪ್ಪಿಕೊಳ್ಳುತ್ತೇನೆ. ನಾನೇ ಅದರ ಹೊಣೆ ತೆಗೆದುಕೊಳ್ಳುತ್ತೇನೆ. ವಿವಿಧ ಕಾರಣಗಳಿಂದ ಬಿಡುಗಡೆ ತಡವಾಯ್ತು. ಒಂದೊಳ್ಳೆ ಔಟ್‌ಪುಟ್ ಕೊಡಲು ಸಮಯ ಹಿಡಿಯಿತು. ಕ್ವಾಲಿಟಿ ಹಾಗೂ ಟೆಕ್ನಿಕಲ್ ದೃಷ್ಟಿಯಿಂದ ಸಮಯ ಬೇಕಾಯಿತು. ಮಿಲನಾ ಹಾಗೂ ಪೃಥ್ವಿ ಪಾತ್ರಕ್ಕೆ ಬಹಳ ಸಪೋರ್ಟ್ ಮಾಡಿದ್ದಾರೆ. ಫಾರ್​ ರಿಜಿಸ್ಟ್ರೇಷನ್ ಒಂದು ಕಂಪ್ಲೀಟ್ ಕಾಮಿಡಿ ಎಂಟರ್​ಟೈನರ್. ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾ ಚಿತ್ರದಲ್ಲಿದೆ" ಎಂದು ತಿಳಿಸಿದರು.

'For Registration' movie
ಫೆಬ್ರವರಿ 23ಕ್ಕೆ 'ಫಾರ್​ ರಿಜಿಸ್ಟ್ರೇಷನ್' ರಿಲೀಸ್​

ನಟ ಪೃಥ್ವಿ ಅಂಬಾರ್ ಮಾತನಾಡಿ, "ದಿಯಾ ಸಿನಿಮಾಗೂ ಮೊದಲು ಸಹಿ ಹಾಕಿದ ಚಿತ್ರವಿದು. ನನ್ನ ತುಳು ಸಿನಿಮಾ ರಿಲೀಸ್ ಆದಾಗ ನವೀನ್ ಸರ್ ಮಂಗಳೂರಿನಲ್ಲಿದ್ದರು. ಅಲ್ಲಿ ಸಿನಿಮಾ ನೋಡಿ‌ ಮೆಚ್ಚಿದ ಅವರು ನನಗೆ ಕಾಲ್ ಮಾಡಿದರು. ಹಾಗೇ ನನ್ನ ಜರ್ನಿ 'ಫಾರ್ ರಿಜಿಸ್ಟರ್' ಜೊತೆ ಮುಂದುವರೆಯಿತು. ರಿಜಿಸ್ಟ್ರೇಷನ್ ಅನ್ನೋದು ಎಲ್ಲಾ ವಿಷಯಕ್ಕೂ ಬೇಕು. ಕಾರು, ಜಾಗಕ್ಕೆ ಮಾತ್ರವಲ್ಲ. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂಬ ವಿಚಾರವನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಸಂಬಂಧಗಳ ಬಗ್ಗೆ, ಸಂಬಂಧಗಳು ರಿಜಿಸ್ಟರ್ ಆಗುವ ಬಗ್ಗೆ ತಿಳಿಹೇಳುವ ಹಾಸ್ಯ ಸಿನಿಮಾ" ಎಂದರು.

ನಟಿ ಮಿಲನಾ ನಾಗರಾಜ್ ಮಾತನಾಡಿ, "ನಾನು ನೋಡಿರುವ ಫ್ಯಾಷನೇಟೆಡ್ ನಿರ್ಮಾಪಕರಲ್ಲಿ ನವೀನ್ ಕೂಡ ಒಬ್ಬರು. ಇಂತಹ ನಿರ್ಮಾಪಕರು ಗೆಲ್ಲಬೇಕು. ಹೆಚ್ಚು ಸಿನಿಮಾ ಬರಬೇಕು. ನವೀನ್ ಅವರು ಪ್ರಿಪರೇಷನ್ ಮಾಡಿಕೊಂಡು ಬಂದಿದ್ದರು. ಚಿತ್ರದಲ್ಲಿ ಒಳ್ಳೆಯ ತಾರಾಬಳಗವಿದೆ. ನಾನು ಮತ್ತು ಪೃಥ್ವಿ ಇದೇ ಮೊದಲ ಬಾರಿಗೆ ಸ್ರ್ಕೀನ್​ ಶೇರ್ ಮಾಡಿದ್ದೇವೆ. ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ. ಬಹಳ ಜನರಿಗೆ ಹಿಡಿಸುವ ಸಿನಿಮಾ. ಹೊಡಿಬಡಿ ಇಲ್ಲ, ಫೈಟ್ ಇಲ್ಲ. ಮ್ಯೂಸಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆ" ಎಂದು ಮಾಹಿತಿ ಹಂಚಿಕೊಂಡರು.

'For Registration' movie
ಪೃಥ್ವಿ ಅಂಬಾರ್-ಮಿಲನ ನಾಗರಾಜ್‌ ಸ್ಕ್ರೀನ್​ ಶೇರ್

ನಿರ್ಮಾಪಕ ನವೀನ್ ರಾವ್ ಮಾತನಾಡಿ, "ನಾನು ಡೈರೆಕ್ಟರ್ ಸೇರಿ ಸಿನಿಮಾ ಶುರು ಮಾಡೋಣ ಎಂದು ಹೊರಟೆವು. ಕಥೆ ಮಾತನಾಡಲು ಶುರು ಮಾಡ್ತು. ಕಥೆಗೆ ಯಾರ ಪಾತ್ರ ಇರಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಸದ್ಯ ಇಲ್ಲಿ ಬಂದು ನಿಂತಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ನಿಮ್ಮ ಸಹಕಾರ ಇರಲಿ" ಎಂದು ತಿಳಿಸಿದರು.

"ಮಿಲನ ನಾಗರಾಜ್​​​ ನಟಿಸಿದ್ದ ಲವ್​ ಮಾಕ್ಟೇಲ್​ 2020ರ ಫೆಬ್ರವರಿ ಸನಿಹ ಅಂದರೆ ಜನವರಿ 31ರಂದು ತೆರೆಕಂಡಿತ್ತು. ಲವ್​ ಮಾಕ್ಟೇಲ್​ 2 ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಅದೇ ರೀತಿ ಪೃಥ್ವಿ ಅಂಬಾರ್​ ನಟಿಸಿದ್ದ ದಿಯಾ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಇದೀಗ ಮಿಲನ ಮತ್ತು ಪೃಥ್ವಿ ಜೊತೆಯಾಗಿ ನಟಿಸಿರುವ ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್​ ಆಗುತ್ತಿರುವುದು ವಿಶೇಷ‌" ಎಂದು ತಿಳಿಸಿದರು.

ಇದನ್ನೂ ಓದಿ: ಮಾತಿನ ಮಲ್ಲ ತುಕಾಲಿ ಸಂತೋಷ್ ಬಿಗ್​ ಬಾಸ್​ ಪಯಣ

ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಸೇರಿ ದೊಡ್ಡ ತಾರಾಬಳಗವೇ ಇದೆ. ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿಶ್ಚಲ್‌ ಫಿಲ್ಮಸ್ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ. ಆರ್‌.ಕೆ.ಹರೀಶ್‌ ಸಂಗೀತವಿದ್ದು, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣವಿದೆ. ಮನು ಶೇಡ್ಗರ್‌ ಸಂಕಲನ ಈ ಚಿತ್ರಕ್ಕಿದೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ‌ ಇಳಿದಿರುವ ದೀಪಕ್ ಗಂಗಾಧರ್ ಫಿಲ್ಮ್ಸ್ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ವಿತರಿಸಲಿದೆ. ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ಕುವೆಂಪು ಕವಿಮನೆ, ಕವಿಶೈಲಕ್ಕೆ ನಟ ಸಾಯಿಕುಮಾರ್​ ಭೇಟಿ: ಫೋಟೋಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.