ETV Bharat / entertainment

ಭಾರತದ ಖ್ಯಾತ ವಿನ್ಯಾಸಕಾರ ರೋಹಿತ್ ಬಾಲ್​​​ ​​ ಹೃದಯ ಸ್ತಂಭನದಿಂದ ನಿಧನ: ಕಂಬನಿ ಮಿಡಿದ ಫ್ಯಾಷನ್ ಲೋಕ! - ROHIT BAL PASSED AWAY

ಪ್ರಸಿದ್ಧ ಫ್ಯಾಷನ್ ವಿನ್ಯಾಸಕಾರ ರೋಹಿತ್ ಬಾಲ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖ್ಯಾತ ವಿನ್ಯಾಸಕಾರ ರೋಹಿತ್ ಬಾಲ್ ನಿಧನ
ಖ್ಯಾತ ವಿನ್ಯಾಸಕಾರ ರೋಹಿತ್ ಬಾಲ್ ನಿಧನ (ANI)
author img

By PTI

Published : Nov 2, 2024, 7:02 AM IST

ನವದೆಹಲಿ: ಭಾರತದ ಅತ್ಯಂತ ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾದ ರೋಹಿತ್ ಬಾಲ್ ಅವರು ಹೃದಯಾಘಾತದಿಂದ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಭಾರತೀಯ ಫ್ಯಾಷನ್ ವಿನ್ಯಾಸ ಮಂಡಳಿ (ಎಫ್‌ಡಿಸಿಐ) ಅಧ್ಯಕ್ಷ ಸುನಿಲ್ ಸೇಥಿ ತಿಳಿಸಿದ್ದಾರೆ.

63 ವರ್ಷದ ರೋಹಿತ್​ ಬಾಲ್​ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ವರ್ಷ ಅಕ್ಟೋಬರ್‌ನಲ್ಲಿ ರೋಹಿತ್​ ಲ್ಯಾಕ್ಮೆ ಫ್ಯಾಷನ್ ವೀಕ್ X FDCI 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ವಿನ್ಯಾಸಗಳನ್ನು ಪ್ರಸ್ತುತಪಡಿಸಿದ್ದರು.

"ಅವರು ನಿಧನರಾಗಿರುವುದು ನಿಜ. ಅವರಿಗೆ ಹೃದಯ ಸ್ತಂಭನವಾಗಿದೆ.. ಹೃದಯ ವೈಫಲ್ಯಗೊಂಡಿದೆ. ರೋಹಿತ್ ಒಬ್ಬ ದಂತಕಥೆ. ನಾವು ಅಸಹಾಯಕರಾಗಿದ್ದೇವೆ, ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ. ನಾಳೆ ನಡೆಸುವ ಅಂತ್ಯಕ್ರಿಯೆಯ ಪೂರ್ವಸಿದ್ಧತೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಸುನಿಲ್​ ಸೇಥಿ ಮಾಧ್ಯಮಕ್ಕೆ ಹೇಳಿದ್ದಾರೆ.

ವಿನ್ಯಾಸಕಾರ ರೋಹಿತ್​ ಬಾಲ್​ರನ್ನು​ ಸಫ್ದರ್‌ಜಂಗ್​ ಎನ್‌ಕ್ಲೇವ್‌ನಲ್ಲಿರುವ ಆಶ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಅಲೋಕ್ ಚೋಪ್ರಾ ಅವರು ಚಿಕಿತ್ಸೆ ನೀಡಿದ್ದರು. ಅವರನ್ನು ಉಳಿಸಲು ವೈದ್ಯರು ಎರಡು ಗಂಟೆಗಳ ಕಾಲ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ" ಎಂದೂ ಸೇಥಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ದರ್ಶನ್​: 2 ದಿನ ಹಾಸ್ಪಿಟಲ್​ನಲ್ಲೇ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.