ETV Bharat / entertainment

ಫ್ಯಾಕ್ಟ್​​ ಚೆಕ್​: ಐಶ್ವರ್ಯಾ ರೈ ಮೊಬೈಲ್​​ ವಾಲ್​ಪೇಪರ್​ನಲ್ಲಿರೋದು ಅಮಿತಾಭ್​​ ಬಚ್ಚನ್​ ಅಲ್ಲ; ಹಾಗಾದ್ರೆ ಯಾರು? ವಿಡಿಯೋ ಇಲ್ಲಿದೆ - AISHWARYA RAI MOBILE WALLPAPER

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಏರ್​ಪೋರ್ಟ್​ ವಿಡಿಯೋ ವ್ಯಾಪಕವಾಗಿ ವೈರಲ್​ ಆಗಿದ್ದು, ಮೊಬೈಲ್​​ ವಾಲ್​ಪೇಪರ್​ನಲ್ಲಿರೋದು ಯಾರೆಂಬುದರ ಬಗ್ಗೆ ಜೋರಾಗೇ ಚರ್ಚೆ ನಡೆದಿದೆ.

Aishwarya Rai
ಐಶ್ವರ್ಯಾ ರೈ ಬಚ್ಚನ್ (Photo: ANI)
author img

By ETV Bharat Entertainment Team

Published : Nov 29, 2024, 4:05 PM IST

ಬಾಲಿವುಡ್ ಐಕಾನ್​​ ಐಶ್ವರ್ಯಾ ರೈ ಬಚ್ಚನ್ ಸಿನಿಮಾಗಳಿಂದ ದೂರವುಳಿದಿದ್ದರೂ, ಜನಮಾನಸದಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಹೆಜ್ಜೆ ಹಾಕುವ ಮೂಲಕ ತಮ್ಮ ಉನ್ನತ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಇಂಟರ್​ನ್ಯಾಷನಲ್​ ಈವೆಂಟ್ಸ್, ಅಪರೂಪಕ್ಕೆ ಸೋಷಿಯಲ್​ ಮೀಡಿಯಾ ಪೋಸ್ಟ್​, ಏರ್​ಪೋರ್ಟ್​ ವಿಡಿಯೋ ಎಂದು ಸದಾ ಸುದ್ದಿಯಲ್ಲಿರುವ ನಟಿ ವಿಚ್ಛೇದನ ವದಂತಿಗಳಿಂದಲೂ ಚರ್ಚೆಯ ವಿಷಯವಾಗಿದ್ದಾರೆ.

ಇತ್ತೀಚೆಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಮ್‌ನಲ್ಲಿ ಭಾಗವಹಿಸಿದ್ದ ಐಶ್ವರ್ಯಾ ರೈ ಬಚ್ಚನ್​​, ಪ್ರಭಾವಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈವೆಂಟ್​ನ ಕೆಲ ವಿಡಿಯೋಗಳು ಶೇರ್​ ಅಗಿವೆ. ಜೊತೆಗೆ, ದುಬೈನಿಂದ ಮುಂಬೈಗೆ ಆಗಮಿಸಿದ ನಂತರ ಏರ್​​ಪೋರ್ಟ್​ ವಿಡಿಯೋಗಳೂ ಕೂಡಾ ವೈರಲ್​​ ಆಗಿವೆ. ಎಂದಿನಂತೆ ಮುಂಬೈ ಏರ್​ಪೋರ್ಟ್​​ನಲ್ಲಿದ್ದ ಪಾಪರಾಜಿಗಳು ಮಾಜಿ ವಿಶ್ವಸುಂದರಿಯ ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕವಾಗಿ ವೈರಲ್​ ಆಗಿವೆ. ಇದರ ಬೆನ್ನಲ್ಲೇ ಐಶ್​​ ಮೊಬೈಲ್​​​​ ವಾಲ್​ಪೇಪರ್​ನಲ್ಲಿದು ಏನು ಎಂಬುದನ್ನು ನೆಟ್ಟಿಗರು ತಿಳಿಯಲು ಯತ್ನಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ (Video source: PTI)

ಮೊಬೈಲ್​​ ವಾಲ್​ಪೇಪರ್​ನಲ್ಲಿರೋದೇನು? ಬ್ಲ್ಯಾಕ್​​ ಔಟ್​ಫಿಟ್​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡ ಬಾಲಿವುಡ್​ ನಟಿ ಕೈಯಲ್ಲಿ ಒಂದು ಬ್ಯಾಗ್​ ಮತ್ತು ಮೊಬೈಲ್​​ ಹಿಡಿದಿದ್ದರು. ಮೊಬೈಲ್​​ ಸ್ಕ್ರೀನ್​ ಆನ್​ ಆಗಿತ್ತು. ವಾಲ್​​ಪೇಪರ್​ನಲ್ಲಿರೋದೇನು ಎಂಬುದನ್ನು ತಿಳಿಯಲು ನೆಟ್ಟಿಗರು ವಿಡಿಯೋ ಝೂಮ್​ ಮಾಡಿದ್ದಾರೆ. ಕೆಲವರು ಇದು ಮಾವ, ಬಾಲಿವುಡ್​ ದಂತಕಥೆ ಅಮಿತಾಭ್​ ಬಚ್ಚನ್​​ ಎಂದೇ ಭಾವಿಸಿದ್ದಾರೆ. ಅಭಿಷೇಕ್​ ಬಚ್ಚನ್​​ ಅವರಿಂದ ಐಶ್ವರ್ಯಾ ವಿಚ್ಛೇದನ ಪಡೆಯಲಿದ್ದಾರಾ ಎಂಬ ವದಂತಿ ಜೋರಾಗೇ ಹಬ್ಬಿರುವ ಈ ಹೊತ್ತಲ್ಲಿ, ವಾಲ್​​ಪೇಪರ್​ನಲ್ಲಿರೋದು ಅಮಿತಾಭ್​ ಬಚ್ಚನ್ ಎಂದೇ ಭಾವಿಸಿದ ಹಲವರು ಕುಟುಂಬದಲ್ಲಿ ಏನೂ ತೊಂದರೆ ಇಲ್ಲ ಎಂದು ನಿರಾಳರಾದರು. ಆದರೆ ವಾಲ್​ಪೇಪರ್​​​ನಲ್ಲಿರೋದು ಅಮಿತಾಭ್​ ಬಚ್ಚನ್ ಅಲ್ಲ. ಬದಲಾಗಿ, ಮುದ್ದಿನ ಮಗಳು ಆರಾಧ್ಯ.

ಇದನ್ನೂ ಓದಿ: 'ಬಚ್ಚನ್'​​ ಸರ್​ನೇಮ್​ ಕೈಬಿಟ್ಟ ಐಶ್ವರ್ಯಾ ರೈ! ಐಶ್​-ಅಭಿ ಡಿವೋರ್ಸ್​ ರೂಮರ್ಸ್​​ ಉಲ್ಭಣ

ಆರಾಧ್ಯ ಸದಾ ತಾಯಿ ಐಶ್ವರ್ಯಾ ಅವರೊಂದಿಗೆ ಕಾಣಿಸಿಕೊಳ್ಳೋದು ನಿಮಗೆ ತಿಳಿದಿರುವ ವಿಚಾರವೇ. ನ್ಯಾಷನಲ್​​, ಇಂಟರ್​ನ್ಯಾಷನಲ್​ ಈವೆಂಟ್​ಗಳಿಗೆ ಹೋಗುವಾಗ ಐಶ್ ಹೆಚ್ಚಾಗಿ ತಮ್ಮ ಮುದ್ದಿನ ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಗಳೊಂದಿಗೆ ಕಾಣಿಸಿಕೊಳ್ಳುವ ಐಶ್ವರ್ಯಾ ಅವರು ಕುಟುಂಬದಿಂದ ದೂರವುಳಿದಿದ್ದಾರಾ? ಎಂಬ ಪ್ರಶ್ನೆಗೆ ನೆಟಿಜನ್​ಗಳದ್ದು.​​ ಸದ್ಯ ಮೊಬೈಲ್​​ ವಾಲ್​ಪೇಪರ್​ನಲ್ಲೂ ಮಗಳೇ ಕಾಣಿಸಿಕೊಂಡಿದ್ದಾಳೆ. ಪುಟ್ಟ ಆರಾಧ್ಯರನ್ನು ಐಶ್ವರ್ಯಾ ಹಿಡಿದಿರುವ ಫೋಟೋ ಇದಾಗಿದೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ದುಬೈ ಈವೆಂಟ್‌ನ ಕೆಲ ದೃಶ್ಯಗಳನ್ನು ದುಬೈ ವುಮೆನ್ ಎಸ್ಟಾಬ್ಲಿಷ್‌ಮೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ನಟಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಜೊತೆಗೆ, ತಮ್ಮ ಅರ್ಥಗರ್ಭಿತ ಮಾತುಗಳಿಂದ ಸಭೆಯನ್ನು ಆಕರ್ಷಿಸಿದ್ದಾರೆ. ಆದ್ರೆ ಈವೆಂಟ್​ನಲ್ಲಿ ಅವರ ಹೆಸರನ್ನು ಕೇವಲ 'ಐಶ್ವರ್ಯಾ ರೈ - ಅಂತಾರಾಷ್ಟ್ರೀಯ ತಾರೆ' ಎಂದು ತೋರಿಸಲಾಗಿದ್ದು, ಇದೀಗ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಈವರೆಗೆ ಐಶ್ವರ್ಯಾ ರೈ ಬಚ್ಚನ್​ ಎಂದು ಉಲ್ಲೇಖಿಸಲಾಗುತ್ತಿತ್ತು. ಆದ್ರೀಗ ಕೇವಲ ಐಶ್ವರ್ಯಾ ರೈ ಎಂದು ಬಂದಿದ್ದು, ವಿಚ್ಛೇದನ ವದಂತಿಗಳು ಉಲ್ಭಣಗೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.