ETV Bharat / entertainment

ಕನ್ನಡ ಬಿಗ್​ ಬಾಸ್​ ಮನೆ ಧ್ವಂಸ: ಸ್ಪರ್ಧಿಗಳ ತಪ್ಪೇನು? ಈ ನಿರ್ಧಾರಕ್ಕೆ ಕಾರಣವಾದ್ರೂ ಏನು? - BIGG BOSS KANNADA 11

''ಬಿಗ್‍‍ ಬಾಸ್ ಮನೆಯಲ್ಲಿ ಎಮರ್ಜೆನ್ಸಿ!'' ಕ್ಯಾಪ್ಷನ್​ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸ್ಪರ್ಧಿಗಳ ಜೊತೆಗೆ ವೀಕ್ಷಕರೂ ಗೊಂದಲಕ್ಕೊಳಗಾಗಿದ್ದಾರೆ.

Bigg Boss kannada 11
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Poster)
author img

By ETV Bharat Entertainment Team

Published : Oct 11, 2024, 1:49 PM IST

'ಬಿಗ್​ ಬಾಸ್', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಅಂದ್ರೆ ಉತ್ಪ್ರೇಕ್ಷೆಯಲ್ಲ. ಹೌದು, ತನ್ನದೇ ಆದ ದೊಡ್ಡ ಪ್ರೇಕ್ಷಕ ಬಳಗವನ್ನು ಸಂಪಾದಿಸಿರುವ ಜನಪ್ರಿಯ ಕಾರ್ಯಕ್ರಮ. ಕಾರ್ಯಕ್ರಮ ಶುಭಾರಂಭ ಮಾಡಿ ವಾರ ಕಳೆದಿದೆ. ನಾಳೆ, ಎರಡನೇ ವಾರಾಂತ್ಯ ಕಾರ್ಯಕ್ರಮ ನಡೆಯಬೇಕಿದೆ. ಆದರೆ ಇಂದು ಬಿಗ್​ ಬಾಸ್​ನ ಅರ್ಧ ಮನೆ ಧ್ವಂಸಗೊಂಡಿದ್ದು, ಸ್ಪರ್ಧಿಗಳ ಜೊತೆಗೆ ವೀಕ್ಷಕರೂ ಗೊಂದಲಕ್ಕೊಳಗಾಗಿದ್ದಾರೆ.

''ಬಿಗ್‍‍ ಬಾಸ್ ಮನೆಯಲ್ಲಿ ಎಮರ್ಜೆನ್ಸಿ!'' ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​​ನೊಂದಿಗೆ ಕಲರ್ಸ್ ಕನ್ನಡ ತನ್ನ ವಿವಿಧ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.

ಎಮರ್ಜೆನ್ಸಿ ಸೈರನ್​​ ಜೋರಾಗಿ ಹೊಡೆದುಕೊಂಡಿದ್ದು, ಮನೆ ಮಂದಿಯೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಕ್ರೇನ್​ನಿಂದ ಮನೆಯೊಳಗೆ ಒಂದಿಷ್ಟು ಮಂದಿ ಎಂಟ್ರಿಯಾಗಿದ್ದಾರೆ. ಬಿಗ್​ ಬಾಸ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಪೂರ್ಣ ಕಪ್ಪುಡುಗೆ, ಮುಖಗವಸು ಧರಿಸಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ನರಕನಿವಾಸ ಗೆಡವಲು ಕೆಲ ವಸ್ತುಗಳನ್ನೂ ತಮ್ಮೊಂದಿಗೆ ತಂದಿದ್ದಾರೆ. ಏನಿದು? ಎಂದು ಮನೆಯ ಸ್ಪರ್ಧಿಗಳು ಆಶ್ಚರ್ಯಕ್ಕೊಳಗಾಗಿ ನೋಡಿದ್ದಾರೆ.

ಮನೆಯೊಳಗೆ ಎಂಟ್ರಿ ಕೊಟ್ಟವರು ನರಕನಿವಾಸವನ್ನು ಧ್ವಂಸಗೊಳಿಸಿದ್ದಾರೆ. ಬೆಡ್​ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತು ಕೊಂಡೊಯ್ದಿದ್ದಾರೆ. ''ಬಿಗ್​ ಬಾಸ್​ನ 11ನೇ ಅಧ್ಯಾಯದಲ್ಲಿ ನೀವೆಲ್ಲರೂ ಎರಡು ವಾರಗಳನ್ನು ಕಳೆದಿದ್ದೀರಿ. ಇಲ್ಲಿನ ಪ್ರತೀ ಕ್ಷಣವನ್ನೂ ಅನುಭವಿಸಿದ್ದೀರಿ'' ಎಂದು ಹಿನ್ನೆಲೆಯಲ್ಲಿ ಬಿಗ್​ ಬಾಸ್​​​ ಧ್ವನಿ ಕೇಳಿಬಂದಿದೆ. ಸ್ವಗರ್ಕ್ಕೂ ನರಕಕ್ಕೂ ಇದ್ದ ಕಬ್ಬಿಣದ ಅಡ್ಡ ಗೋಡೆಯನ್ನು ಅವರುಗಳು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: 13 ಭಾಷೆಗಳಲ್ಲಿ, 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್'​​

ಪ್ರೋಮೋ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಇನ್ಮುಂದೆ ಸ್ವರ್ಗ - ನರಕ ಕಾನ್ಸೆಪ್ಟ್​ ಇರಲ್ಲ ಅನ್ನೋದು ಹಲವರ ಅಭಿಪ್ರಾಯವಾದರೆ, ಸ್ಪರ್ಧಿಗಳ ತಪ್ಪಿಗೆ ಶಿಕ್ಷೆ ಇರಬಹುದು ಎಂಬುದು ಕೆಲವರ ಅಭಿಪ್ರಾಯ, ಆದ್ರೆ ಬಿಗ್​ ಬಾಸ್​ನ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ಇನ್ನೂ ಸಿಕ್ಕಿಲ್ಲ. ಕಳೆದ ಕೆಲವೇ ದಿನಗಳಲ್ಲಿ ವಾದ ವಿವಾದ, ಕಿರುಚಾಟ, ಜಗಳ ದೊಡ್ಡ ಮಟ್ಟದಲ್ಲೇ ನಡೆದಿದೆ. ಸ್ಪರ್ಧಿಗಳ ಬಾಯಿಂದ ಬಂದಿರೋ ಮಾತುಗಳು ಕೂಡಾ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆ ಆಗುತ್ತಿದೆ. ಅಲ್ಲದೇ ಇತ್ತೀಚೆಗಷ್ಟೇ, ಬ್ಲೈಂಡ್ಸ್ (ಸ್ಕ್ರೀನ್​​) ನಿಂದ ಆಚೆ ಹೋಗಿ ಬಿಗ್​ ಬಾಸ್​ನ ಪ್ರಮುಖ ನಿಯಮವನ್ನೇ ಕೆಲವರು ಉಲ್ಲಂಘಿಸಿ, ಇಡೀ ಮನೆಮಂದಿ ನಾಮಿನೇಟ್​ ಆಗಿದ್ದರು. ಹಾಗಾಗಿ ಏನಾಗಬಹುದು ಎಂಬ ಕುತೂಹಲ ಪ್ರೇಕ್ಷಕ ಪ್ರಭುಗಳಲ್ಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಬಿಟ್ಟು ಹೋಗಲ್ಲವೆಂದ ಜಗದೀಶ್​: ನಾಮಿನೇಷನ್‍‍ನಿಂದ ಸೇಫ್ ಆಗೋರು ಯಾರು?

ಮೊದಲ ವಾರ ಯಮುನಾ ಶ್ರೀನಿಧಿ ಅವರು ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಹಂಸ, ಗೌತಮಿ ಜಾದವ್​, ಭವ್ಯಾ, ಚೈತ್ರಾ ಕುಂದಾಪುರ, ಮಾನಸಾ, ಶಿಶಿರ್​​​ ಮತ್ತು ಮೋಕ್ಷಿತಾ ಎಲಿಮಿನೇಶನ್​ಗೆ ನಾಮಿನೇಟ್​​​ ಅಗಿದ್ದರು. ನಾಳೆ ಕಿಚ್ಚನ ಪಂಚಾಯಿತಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಎರಡನೇ ವಾರದ ವೀಕೆಂಡ್​ ಪ್ರೋಗ್ರಾಮ್​ಗೂ ಮುನ್ನ ಮನೆಯಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ನೋಡುಗರು ಬಹಳ ಕುತೂಹಲರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.