ETV Bharat / entertainment

'ಭೀಮ' ಸಕ್ಸಸ್ ಬೆನ್ನಲ್ಲೇ ದುನಿಯಾ ವಿಜಯ್ ಹೊಸ ಸಿನಿಮಾ ಘೋಷಣೆ - Duniya Vijay VK30

author img

By ETV Bharat Karnataka Team

Published : Aug 26, 2024, 4:28 PM IST

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಇದೇ ಆಗಸ್ಟ್​​ 9ರಂದು ತೆರೆಕಂಡು ಸೂಪರ್​ ಹಿಟ್​ ಆಗಿದೆ. ಈ ಸಕ್ಸಸ್ ಬೆನ್ನಲ್ಲೇ ವಿಜಯ್ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'ವಿಕೆ 30' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾದ ಒಂದು ನೋಟವೂ ರಿವೀಲ್​ ಆಗಿದೆ.

Duniya Vijay team
ದುನಿಯಾ ವಿಜಯ್​​ ತಂಡ (ETV Bharat)

ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿಯಾಗಿದೆ. ಮಾಸ್​ ಎಂಟರ್​ಟೈನ್ಮೆಂಟ್​​ ಜೊತೆ ಸಾಮಾಜಿಕ ಸಂದೇಶವುಳ್ಳ ಕಥೆ ಆಧರಿಸಿ ಬಂದ 'ಭೀಮ' ಚಿತ್ರ ಬಾಕ್ಸ್ ಆಫೀಸ್​​ನಲ್ಲೂ ಕಮಾಲ್​ ಮಾಡಿದೆ. ಇದರ ಬೆನ್ನಲ್ಲೇ ವಿಜಯ್ ಮುಖ್ಯಭೂಮಿಕೆಯ ಹೊಸ ಸಿನಿಮಾ ಅನೌನ್ಸ್​​​ ಆಗಿದೆ.

ಇತ್ತೀಚೆಗಷ್ಟೇ ಭೀಮ ಚಿತ್ರದ ಸಕ್ಸಸ್ ಮೀಟ್​​​​ನಲ್ಲಿ ನಾಯಕ ನಟ ವಿಜಯ್​ಗೆ ಮುಂದಿನ ಸಿನಿಮಾ ಯಾವುದೆಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ್ದ ನಟ, ಭೀಮ ಚಿತ್ರದ ಕೊನೆಯಲ್ಲಿ ಸಲಗ 2 ಚಿತ್ರಕ್ಕೆ ಲೀಡ್‍ ಕೊಡಲಾಗಿದೆ. ಭೀಮ ಚಿತ್ರದ ಸಿಕ್ವೇಲ್ ಮಾಡುವ ಯೋಚನೆಯೂ ಇದೆ. ಯಾವುದೆಂದು ಇನ್ನೂ ಡಿಸೈಡ್ ಮಾಡಿಲ್ಲ‌. ಸಲಗ ಸಿನಿಮಾ ಹಿಟ್ ಆದಾಗ ಸಿಕ್ವೇಲ್ ಮಾಡೋಣವೆಂದು ಒಂದು ಮಟ್ಟದ ಸ್ಕ್ರಿಪ್ಟ್ ಕೂಡಾ ಮಾಡಿದ್ದೇವೆ ಎಂದು ತಿಳಿಸಿದ್ದರು.

ಸಲಗ ಹಾಗೂ ಭೀಮ ಸಿನಿಮಾದಲ್ಲಿ ಸಹಾಯ ನಿರ್ದೇಶಕನಾಗಿ ತಂಬಿ ನನ್ನ ಜೊತೆ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ವೀರ, ಮೌರ್ಯ ಕೂಡ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ‌. ಈ ಕಾರಣಕ್ಕೆ ಮೊದಲು ತಂಬಿ ನಿರ್ದೇಶನದಲ್ಲಿ ಒಂದು ಚಿತ್ರ ಮಾಡುತ್ತೇನೆ. ನಂತರ ವೀರನೊಂದಿಗೆ ಸಿನಿಮಾ ಮಾಡುತ್ತೇನೆ. ಮೌರ್ಯನಿಗೂ ಈಗಾಗಲೇ ಬರೆಯಲು ಹೇಳಿದ್ದೇನೆ ಎಂದಿದ್ದರು.

ಈ ಮಾತಿನಂತೆ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾವನ್ನು ಇಂದು ಘೋಷಿಸಿದ್ದಾರೆ. 'ವಿಕೆ 30' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾ ಸೋಮವಾರ ಘೋಷಣೆಯಾಗಿದೆ. ವೆಟ್ರಿವೇಲ್‍ ಅಂದ್ರೆ ತಂಬಿ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ತಂಬಿ ನಿರ್ದೇಶಕರು ಎಂಬುದು ಬಿಟ್ಟರೆ ಇನ್ಯಾವ ವಿಚಾರವೂ ಬಹಿರಂಗಗೊಂಡಿಲ್ಲ. ನಿರ್ಮಾಪಕರು, ಸಹ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಚಿತ್ರದ ಹೆಚ್ಚಿನ ಮಾಹಿತಿ ಇನ್ನಷ್ಟೇ ಘೋಷಣೆಯಾಗಬೇಕಿದೆ. ಸದ್ಯಕ್ಕೆ ಬರವಣಿಗೆ ಕೆಲಸ ಶುರುವಾಗಿದೆ.

ಇದನ್ನೂ ಓದಿ: ಶಿವರಾಜ್​​​​ಕುಮಾರ್​​ ಮಗಳ ನಿರ್ಮಾಣದ 'ಫೈರ್ ಫ್ಲೈ' ಶೂಟಿಂಗ್​ ಪೂರ್ಣ: ಮನದ ಮಾತು ಹಂಚಿಕೊಂಡ ನಿವೇದಿತಾ - Niveditha Shivarajkumar Fire Fly

ತಮ್ಮ ಗಂಭೀರ ನೋಟದ ಪೋಸ್ಟರ್ ಹಂಚಿಕೊಂಡ ವಿಜಯ್​​, ಮತ್ತೆ ನನ್ನ ಗ್ಯಾಂಗ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತಂಡದ ಜೊತೆಗಿನ ಪೋಸ್ಟ್ ಶೇರ್ ಮಾಡಿದ್ದ ನಟ, 2 ಹೊಸ ಯೋಜನೆಗಳು. ಹೊಸ ಆರಂಭಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಶಿವಣ್ಣನಿಂದ ಬಿಗ್​​ ಅನೌನ್ಸ್​ಮೆಂಟ್​: ಅಭಿಮಾನಿಗಳಲ್ಲಿ ಕುತೂಹಲ - Shiva Rajkumar

ದುನಿಯಾ ವಿಜಯ್ ಅಭಿನಯದ 30ನೇ ಚಿತ್ರವಿದು. ಹಾಗಾಗಿ VK30 ಎಂದು ಉಲ್ಲೇಖಿಸಲಾಗುತ್ತಿದ್ದು, ಇದು ವಿಜಯ್ ಸಿನಿ ಕೆರಿಯರ್​ನಲ್ಲಿ ವಿಶೇಷವಾಗಿದೆ‌. ಅದಕ್ಕೆ ಸಾಕ್ಷಿ ಸದ್ಯ ಅನಾವರಣಗೊಂಡಿರುವ ಚಿತ್ರದ ಮೊದಲ ನೋಟ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬರಲಿದೆ. ಮುಹೂರ್ತ ಮತ್ತು ಸಿನಿಮಾ ಶೂಟಿಂಗ್ ಯಾವಾಗ? ಎಬುದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.