ETV Bharat / entertainment

ದುನಿಯಾ ವಿಜಯ್​​​ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್​ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer

author img

By ETV Bharat Karnataka Team

Published : Jul 30, 2024, 12:26 PM IST

ಸ್ಯಾಂಡಲ್​ವುಡ್​ ಸೂಪರ್ ಸ್ಟಾರ್ ದುನಿಯಾ ವಿಜಯ್​​ ನಟಿಸಿ ನಿರ್ದೇಶಿಸಿರುವ ಚಿತ್ರ 'ಭೀಮ'. ಸಿನಿಮಾ ಆಗಸ್ಟ್ 9 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟ್ರೇಲರ್​ ಇದೇ ವಾರದಲ್ಲಿ ಅನಾವರಣಗೊಳ್ಳಲಿದೆ. ಚಿತ್ರದ ಪ್ರಮೋಶನ್​​ ಜೋರಾಗೇ ನಡೆಯುತ್ತಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Bhimaa poster
'ಭೀಮ' ಈವೆಂಟ್​, ಪೋಸ್ಟರ್ (ETV Bharat)

'ಭೀಮ', ಬಿಡುಗಡೆಗೆ ಸಜ್ಜಾಗಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಸ್ಟಾರ್ ನಟರ ಸಿನಿಮಾಗಳ ಸಂಖ್ಯೆ ಬಹಳ ಕಡಿಮೆ ಆಗಿದೆ. ಹಾಗಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿರುವ ಈ ಹೊತ್ತಲ್ಲಿ ತೆರೆಕಾಣುತ್ತಿರುವ ಸ್ಟಾರ್ ನಟನ ಚಿತ್ರವಿದು. ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ದುನಿಯಾ ವಿಜಯ್​​​ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಥಿಯೇಟರ್​ಗೆ ಎಂಟ್ರಿ ಕೊಡಲಿದ್ದು, ಬಹುನಿರೀಕ್ಷಿತ ಟ್ರೇಲರ್​ ಅನಾವರಣಕ್ಕೆ ದಿನ ನಿಗದಿ ಆಗಿದೆ.

ಭೀಮ ಚಿತ್ರದಲ್ಲಿ ದುನಿಯಾ ವಿಜಯ್​​ ಅಭಿನಯಿಸಿರುವುದು ಮಾತ್ರವಲ್ಲದೇ, ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾ ಆಗಸ್ಟ್ 9 ರಂದು ರಿಲೀಸ್ ಆಗಲಿದ್ದು, ಟ್ರೇಲರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಿನಿಮಾದ ಒಂದು ಸಣ್ಣ ಗ್ಲಿಂಪ್ಸ್ ಶೇರ್ ಮಾಡಿರೋ ನಾಯಕ ನಟ, ಆಗಸ್ಟ್ 3ರಂದು ಟ್ರೇಲರ್​ ಅನಾವರಣಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ. ​​ಶನಿವಾರ ಹೊರಬರಲಿರುವ ಈ ಟ್ರೇಲರ್​ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದಾರೆ.

ಇದೊಂದು ಮಾಸ್​​ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಸಿನಿಮಾ. ಸಿನಿಮಾ ಈಗಾಗಲೇ ಪೋಸ್ಟರ್, ಗ್ಲಿಂಪ್ಸ್​​​, ಹಾಡುಗಳಿಂದ ಅನೇಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದೆ. 'ಬ್ಯಾಡ್ ಬಾಯ್ಸ್, 'ಐ ಲವ್ ಯೂ ಕಣೆ', 'ಡೋಂಟ್ ವರಿ ಬೇಬಿ ಚಿನ್ನಮ್ಮ' ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಉತ್ತಮ ವೀಕ್ಷಣೆಯನ್ನೂ ಪಡೆದುಕೊಂಡಿದೆ. ಭರ್ಜರಿ ಪ್ರಚಾರ ನಡೆಸುತ್ತಿರುವ ವಿಜಿ ತಂಡ ಸೋಷಿಯಲ್​ ಮೀಡಿಯಾಗಳಲ್ಲಿ ಕೆಲ ವಿಡಿಯೋಗಳನ್ನು ಹಂಚಿಕೊಂಡಿದೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಚಿತ್ರತಂಡ, ಯಾವುದೇ ರೀತಿಯ ಕಟ್ಸ್ ಇಲ್ಲದೇ ಸೆನ್ಸಾರ್​ ಪರೀಕ್ಷೆಯಲ್ಲೂ ಪಾಸ್​ ಆಗಿದೆ.

ಬೂಮ್ ಬೂಮ್ ಬೆಂಗಳೂರು ಎಂಬ ಹಾಡು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರ ಗಮನ ಸೆಳೆದಿದೆ. ಈ ಸಾಂಗ್​​ ಅನ್ನು ನಾಗರಹೊಳೆ ಸಮೀಪದ ಬುಡಕಟ್ಟು ಸಮುದಾಯದ 30 ಸದಸ್ಯರು ಹಾಡಿರೋದು ಚಿತ್ರದ ಹೈಲೆಟ್ಸ್​​​ಗಳಲ್ಲೊಂದು. ಸಿನಿಮಾ ಪ್ರಚಾರ ಜೋರಾಗೇ ನಡೆಯುತ್ತಿದ್ದು, ಇತ್ತೀಚೆಗಷ್ಟೇ, ಅವರನ್ನು ಕರೆಸಿದ್ದ ಚಿತ್ರತಂಡ ಅವರ ಪ್ರತಿಭೆಯನ್ನು ಅನಾವರಣಗೊಳಿಸಿತ್ತು. ಬುಡಕಟ್ಟು ಸಮುದಾಯದವರು ಭೀಮ ಸಿನಿಮಾ ಸಾಂಗ್​ ಮತ್ತು ತಮ್ಮ ಜನಾಂಗದ ಹಾಡನ್ನು ಹಾಡಿದ್ದು, ಅವರ ಜೊತೆ ದುನಿಯಾ ವಿಜಯ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು.

ಇದನ್ನೂ ಓದಿ: ಬುಡಕಟ್ಟು ಜನಾಂಗದವರೊಂದಿಗೆ ಕುಣಿದು ಸಂಭ್ರಮಿಸಿದ ದುನಿಯಾ ವಿಜಯ್​​: ವಿಡಿಯೋ - Bheema Promotion

'ಭೀಮ', ನೈಜ ಘಟನೆ ಆಧಾರಿತ ಸಿನಿಮಾ. ವಿಜಯ್​ ಜೊತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಿವಸೇನಾ ಅವರ ಕ್ಯಾಮರಾ ಕೈಚಳಕ, ಚರಣ್ ರಾಜ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ಸ್ ಚಿತ್ರಕ್ಕಿದೆ. ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ ನಿರ್ದೇಶನ ಮಾಡಿದ್ದರೆ, ಧನು ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾ ಮುಂದಿನ ಶುಕ್ರವಾರ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ತರುಣ್ & ಸೋನಾಲ್ ಪರಿಸರಸ್ನೇಹಿ ವಿವಾಹ ಆಮಂತ್ರಣ ಪತ್ರಿಕೆ: ಏನೇನಿದೆ ಗೊತ್ತಾ? - Tarun And Sonal Wedding Card

ETV Bharat Logo

Copyright © 2024 Ushodaya Enterprises Pvt. Ltd., All Rights Reserved.