ETV Bharat / state

ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ 1500 ಯಾತ್ರಿಗಳನ್ನು ಹೊತ್ತು ಸಾಗಿದ ವಿಶೇಷ ರೈಲು - AYODHYA KASHI SPECIAL TRAIN

ಇಂದು ಶಿವಮೊಗ್ಗದಿಂದ ಪ್ರಯಾಣ ಪ್ರಾರಂಭಿಸಿರುವ ವಿಶೇಷ ರೈಲು, ಎರಡು ದಿನಗಳಲ್ಲಿ ಆಯೋಧ್ಯೆಗೆ ತಲುಪಿ, ಅಲ್ಲಿಂದ ನಂತರ ಕಾಶಿಗೆ ಹೋಗಿ ಮತ್ತೆ ಶಿವಮೊಗ್ಗಕ್ಕೆ ಮರಳಲಿದೆ.

Flagged off to Kashi Special Train
ಕಾಶಿ ವಿಶೇಷ ರೈಲಿಗೆ ಚಾಲನೆ (ETV Bharat)
author img

By ETV Bharat Karnataka Team

Published : Nov 23, 2024, 9:49 AM IST

Updated : Nov 23, 2024, 12:56 PM IST

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ ಸುಮಾರು‌ 1,500 ಯಾತ್ರಿಗಳನ್ನು ಹೊತ್ತ ವಿಶೇಷ ರೈಲು ಇಂದು ಬೆಳಗ್ಗೆ ಪ್ರಯಾಣ ಪ್ರಾರಂಭಿಸಿದೆ. ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಯಾತ್ರಿಗಳು ಅಯೋಧ್ಯೆ ಹಾಗೂ ಕಾಶಿಗೆ ಹೊರಟಿದ್ದಾರೆ.

ಇಂದು ಪ್ರಯಾಣ ಪ್ರಾರಂಭಿಸಿದ ವಿಶೇಷ ರೈಲು ಎರಡು ದಿನ ನಿರಂತರ ಸಂಚಾರ ನಡೆಸಿ, ಅಯೋಧ್ಯೆ ತಲುಪಲಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನದ ನಂತರ ಇದೇ ರೈಲು ಕಾಶಿಗೆ ಹೊರಡಲಿದೆ. ಕಾಶಿಯ ವಿಶ್ವನಾಥನ ದರ್ಶನದ ನಂತರ ಪುನಃ ಇದೇ ವಿಶೇಷ ರೈಲು ಶಿವಮೊಗ್ಗಕ್ಕೆ ಒಂದು ವಾರದ ನಂತರ ಆಗಮಿಸಲಿದೆ.

ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ 1500 ಯಾತ್ರಿಗಳನ್ನು ಕರೆದೊಯ್ದ ವಿಶೇಷ ರೈಲು (ETV Bharat)

ಬೆಕ್ಕಿನ ಕಲ್ಮಠದ ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಮರುಳಸಿದ್ದ ಸ್ವಾಮೀಜಿ, ಶಿಕಾರಿಪುರದ ತೊಗರ್ಸಿಯ ಶ್ರೀ ಹಾಗೂ ಕೋಣಂದೂರು ಶ್ರೀಗಳು ಕೆ. ಎಸ್. ಈಶ್ವರಪ್ಪ ಜೊತೆ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದರು.

Special Train to Kashi
ಕಾಶಿಗೆ ವಿಶೇಷ ರೈಲು (ETV Bharat)

ರೈಲು ಶಿವಮೊಗ್ಗ ನಿಲ್ದಾಣದಿಂದ ಬೆಳಗ್ಗೆ 6.40ಕ್ಕೆ ಹೊರಟಿತು. ಬಿರೂರು ಜಂಕ್ಷನ್​ನಿಂದ ದಾವಣಗೆರೆ, ಹರಿಹರ ಮಾರ್ಗವಾಗಿ ರೈಲು ಚಲಿಸಲಿದೆ. ಈ ರೈಲಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಯಾತ್ರಾರ್ಥಿಗಳನ್ನು ಬೀಳ್ಕೊಡಲು ಅವರ ಸಂಬಂಧಿಕರು ಆಗಮಿಸಿದ್ದರು. ಈ ರೈಲಿನಲ್ಲಿ ಕೆ. ಎಸ್. ಈಶ್ವರಪ್ಪ ಅವರ ಕುಟುಂಬ ಸಹ ಪ್ರಯಾಣ ಬೆಳೆಸಿದೆ.

Special Train to Kashi
ಕಾಶಿಗೆ ವಿಶೇಷ ರೈಲು (ETV Bharat)

"ನಮ್ಮ ಯಾತ್ರೆ ಇಂದು ಪ್ರಾರಂಭವಾಗಿದ್ದು, ಒಂದು ವಾರ ನಡೆಯಲಿದೆ. ಇಂದಿನಿಂದ ಸತತ ಎರಡು ದಿನ ನಮ್ಮ ಪ್ರಯಾಣ ಅಯೋಧ್ಯೆಯ ತನಕ ಸಾಗಲಿದೆ. ಅಯೋಧ್ಯೆಯ ನಂತರ ಕಾಶಿಗೆ ಪ್ರಯಾಣ ಮಾಡಲಿದ್ದೇವೆ. ಕಾಶಿಯಿಂದ ಪುನಃ ಸತತ ಎರಡು ದಿನಗಳ ಪ್ರಯಾಣದ ನಂತರ ಶಿವಮೊಗ್ಗ ತಲುಪಲಿದ್ದೇವೆ. ಪ್ರಯಾಣಕ್ಕೆ ಎಲ್ಲಾ ಸಿದ್ಧತೆ ಮಾಡಿದ್ದೇವೆ. ನಮ್ಮ ಯಾತ್ರೆಗೆ ಸಹಕರಿಸಿದ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ರೈಲ್ವೆ ಸಿಬ್ಬಂದಿಗೆ ಅಭಿನಂದನೆ" ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆ

Last Updated : Nov 23, 2024, 12:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.