ಹೈದರಾಬಾದ್: 'ಕಲ್ಕಿ 2898 AD' ಚಿತ್ರ ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಮಹೀಂದ್ರಾ ಗ್ರೂಪ್‌ನ ಚೇರ್ಮನ್ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, ನಾಗ್ ಅಶ್ವಿನ್ ಅವರನ್ನು ನೋಡಿ ಹೆಮ್ಮೆ ಪಡುತ್ತೇನೆ. ಕಾರಣ ಅವರು ದೊಡ್ಡದಾಗಿ ಯೋಚಿಸಲು ಯಾವತ್ತೂ ಹಿಂದೆ ಬೀಳುವುದಿಲ್ಲ. ನನ್ನ ಪ್ರಕಾರ ಇದು ನಿಜವಾಗಿಯೂ ದೊಡ್ಡ ವಿಚಾರ ಎಂದು ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.
ಕಲ್ಕಿ ಸಿನಿಮಾದ ‘ಬುಜ್ಜಿ’ಯನ್ನು ತಮ್ಮ ತಂಡ ಮತ್ತು ಕೊಯಮತ್ತೂರು ಮೂಲದ ಜಯಮ್ ಮೋಟಾರ್ಸ್ ವಿನ್ಯಾಸಗೊಳಿಸಿದ್ದಾರೆ. ಇದು ಹಿಂದಿನ ಗೋಲಾಕಾರದ ಚಕ್ರಕ್ಕೆ ಶಕ್ತಿಯನ್ನು ನೀಡುವ ಎರಡು ಮಹೀಂದ್ರ ಇ-ಮೋಟರ್‌ಗಳಲ್ಲಿ ಚಲಿಸುತ್ತದೆ. ಈ ಬಗ್ಗೆ ನಾನು ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಶ್ಲಾಘಿಸುತ್ತೇನೆ. ದೊಡ್ಡದಾಗಿ ಯೋಚಿಸಲು ಹೆದರದ ನಿರ್ಮಾಪಕರ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ. ಜೊತೆಗೆ ಸಹಾಯ ಕೇಳಿ ನಾಗ್ ಅಶ್ವಿನ್ ಮಾಡಿರುವ ಟ್ವೀಟ್ನ ಸ್ಕ್ರೀನ್ ಶಾಟ್ ಸಹ ಶೇರ್ ಮಾಡಿದ್ದಾರೆ.
ಚೆನ್ನೈನ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿರುವ ನಮ್ಮ ತಂಡವು ಪವರ್‌ಟ್ರೇನ್ ಕಾನ್ಫಿಗರೇಶನ್, ಆರ್ಕಿಟೆಕ್ಚರ್ ಮತ್ತು ಕಾರ್ಯಕ್ಷಮತೆ ಅನುಕರಿಸುವ ಮೂಲಕ ಫ್ಯೂಚರಿಸ್ಟಿಕ್ ವಾಹನದ ದೃಷ್ಟಿಯನ್ನು ಅರಿತುಕೊಳ್ಳಲು ಕಲ್ಕಿ ತಂಡಕ್ಕೆ ಸಹಾಯ ಮಾಡಿದೆ. ವಾಸ್ತವವಾಗಿ, ವಾಹನವು ಎರಡು ಮಹೀಂದ್ರಾ ಇ-ಮೋಟಾರ್‌ಗಳಲ್ಲಿ ಹಿಂದಿನ ಗೋಲಾಕಾರದ ಚಕ್ರಕ್ಕೆ ಶಕ್ತಿಯನ್ನು ನೀಡುತ್ತದೆ. ಜಯಮ್ ಆಟೋಮೋಟಿವ್‌ಗಳು ಎಲ್ಲವನ್ನೂ ಒಟ್ಟುಗೂಡಿಸುತ್ತವೆ. ಗೇಮ್ ಆ್ಯಸ್ ಬಿಗಿನ್ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ನಾಗ್ ಅಶ್ವಿನ್ ಅವರು ಮಹೀಂದ್ರ ಅವರ ಟ್ವೀಟ್‌ಗೆ ಧನ್ಯವಾದ ತಿಳಿಸಿದ್ದಾರೆ. ನಮಗೆ ಅಸಾಧ್ಯವಾದ ಕನಸು ಕಾಣಲು ಸಹಾಯ ಮಾಡಿದ್ದಕ್ಕಾಗಿ. ನಮ್ಮ ಬುಜ್ಜಿಗೆ ರೆಕ್ಕೆಗಳನ್ನು (ಟೈರ್) ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ಟ್ವೀಟ್ ಮಾಡಿರುವ ಮಹೀಂದ್ರ ಅವರು, 'ಕನಸು ಕಾಣುವುದನ್ನು ನಿಲ್ಲಿಸಬೇಡಿ' ಎಂದು ತಿಳಿಸಿದ್ದಾರೆ.
'ಕಲ್ಕಿ 2898 ಎಡಿ' ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶಿಸುತ್ತಿದ್ದು, ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಹಿನ್ನಲೆಯುಳ್ಳ ಚಿತ್ರ ಇದಾಗಿದ್ದು ಆಕರ್ಷಕ ಹಾಗೂ ವಿಭಿನ್ನ ರೀತಿಯ ವಾಹನಗಳ ಸುತ್ತಮುತ್ತ ಇರಲಿದೆ. ಬುಜ್ಜಿ ಎಂಬ ರೋಬೋಟ್ ಚಿತ್ರದ ಪ್ರಮುಖ ಕಥಾ ವಸ್ತು ಎಂದು ಹೇಳಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಬುಜ್ಜಿ ರೋಬೋಟ್ ನಿರ್ಮಿಸಲಾಗಿದ್ದು, ಮಹೀಂದ್ರಾ ರಿಸರ್ಚ್ ವ್ಯಾಲಿಯ ಚೆನ್ನೈ ತಂಡವು ಸಹಾಯ ಮಾಡಿದೆ. ಇತ್ತೀಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕಲ್ಕಿ 2898 AD’ಯ ಹೈಟೆಕ್ ರೋಬೋಟ್ ಕಾರಾದ ‘ಬುಜ್ಜಿ’ ಅನ್ನು ಚಿತ್ರತಂಡ ಅನಾವರಣಗೊಳಿಸಿತು.
ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 27 ರಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ದೃಶ್ಯಗಳು ವೈರಲ್ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಬುಜ್ಜಿ'ಯನ್ನು ಪರಿಚಯಿಸಿದ ಪ್ರಭಾಸ್: ಯಾರಿದು? - Bujji