ETV Bharat / entertainment

ಅಪ್ಪಟ ಗ್ರಾಮೀಣ ಸೊಗಡಿನ 'ಕೆರೆಬೇಟೆ' ಸಿನಿಮಾ ಮೆಚ್ಚಿದ ಡಾಲಿ, ಧ್ರುವ, ನೆನಪಿರಲಿ ಪ್ರೇಮ್

author img

By ETV Bharat Karnataka Team

Published : Mar 18, 2024, 1:41 PM IST

ಇತ್ತೀಚೆಗೆ ತೆರೆಕಂಡು ಚಂದನವನದಲ್ಲಿ ಸದ್ದು ಮಾಡುತ್ತಿರುವ ಮಲೆನಾಡು ಸೊಗಡಿನ ಕೆರೆಬೇಟೆ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಕನ್ನಡದ ನಟರು, ಕನ್ನಡಿಗರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ.

Dolly, Dhruva, Uttiirali Prem appreciated movie 'Kerebete' of real village folk
ಅಪ್ಪಟ ಗ್ರಾಮೀಣ ಸೊಗಡಿನ 'ಕೆರೆಬೇಟೆ' ಸಿನಿಮಾ ಮೆಚ್ಚಿದ ಡಾಲಿ, ಧ್ರುವ, ನೆನಪಿರಲಿ ಪ್ರೇಮ್
ನಿರ್ದೇಶಕ ಪವನ್​ ಒಡೆಯರ್​

'ಕೆರೆಬೇಟೆ' ಸ್ಯಾಂಡಲ್​ವುಡ್​ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ 'ಕೆರೆಬೇಟೆ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ. ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ ಕೆರೆಬೇಟೆ ಸಿನಿಮಾ.

ನಟ ಡಾಲಿ ಧನಂಜಯ್​

ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದಷ್ಟೇ ಅಲ್ಲ, ಸಿನಿಮಾ ಗಣ್ಯರು ಕೂಡ ಕೆರೆಬೇಟೆ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಉತ್ತಮ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈ ಬಿಡಲ್ಲ ಎನ್ನುವುದಕ್ಕೆ ಕೆರೆಬೇಟೆ ಚಿತ್ರವೇ ಸಾಕ್ಷಿ. ಸಿನಿಮಾ ಗಣ್ಯರು ಕೂಡ ಉತ್ತಮ ಕಂಟೆಂಟ್​ ಇರುವ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವುದಕ್ಕೆ ಕೆರೆಬೇಟೆ ಸಿನಿಮಾನೇ ಉದಾಹರಣೆ.

ಸಿನಿಮಾ ಗಣ್ಯರು ಸಹ ಗೌರಿಶಂಕರ್ ಮತ್ತು ರಾಜಗುರು ಅವರ ಪರಿಶ್ರಮವನ್ನು ಕೊಂಡಾಡುತ್ತಿದ್ದಾರೆ. ಡಾಲಿ ಧನಂಜಯ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಕವಿರಾಜ ಸೇರಿದಂತೆ ಅನೇಕ ಗಣ್ಯರು ಹಾಡಿ ಹೊಗಳುತ್ತಿದ್ದಾರೆ. ಉತ್ತಮ ಸಿನಿಮಾಗಳಿಗೆ ಯಾವತ್ತೂ ಅನ್ಯಾಯವಾಗಬಾರದು ದಯವಿಟ್ಟು ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

"ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನು ಕೂಡ ಸದ್ಯದಲ್ಲೇ ಸಿನಿಮಾವನ್ನು ನೋಡುತ್ತೇನೆ, ನೀವೆಲ್ಲರೂ ಸಿನಿಮಾ ನೋಡಿ" ಎಂದು ಡಾಲಿ ಕೂಡ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ನಟ ಧ್ರುವ ಸರ್ಜಾ ಕೂಡ ಕೆರೆಬೇಟೆ ಚಿತ್ರಕ್ಕೆ ಫಿದಾ ಆಗಿದ್ದಾರೆ. "ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ತಾ ಇದೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ಎಲ್ಲರೂ ಸಿನಿಮಾ ನೋಡಿ" ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ನಿರ್ದೇಶಕ ಶಶಾಂಕ್ ಅವರಿಗೆ ಸಿನಿಮಾ ತುಂಬಾ ಇಷ್ಟವಾಗಿದೆ. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಶಶಾಂಕ್ ಪ್ರೇಕ್ಷಕರಿಗೆ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ಹಾಗೂ ನೆನಪಿರಲಿ ಪ್ರೇಮ್​

ಸಿನಿಮಾದ ಕಥೆ, ನಿರ್ದೇಶನ, ಊಹಿಸಲಾಗದ ಟ್ವಿಸ್ಟ್, ಮಲೆನಾಡಿನ ಚಿತ್ರಣ, ಅಲ್ಲಿನ ಭಾಷೆ, ಆಚಾರ ವಿಚಾರ, ಕೆರೆಬೇಟೆ ಸಂಸ್ಕೃತಿ ಎಲ್ಲವನ್ನು ಈ ಚಿತ್ರದ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜಗುರು. ಚಿತ್ರದಲ್ಲಿ ನಾಯಕಿ ಬಿಂದು ಶಿವರಾಮ್ ಪಾತ್ರ, ಗೋಪಾಲ ದೇಶಪಾಂಡೆ, ಸಂಪತ್ ಕುಮಾರ್ ಮತ್ತು ನಟಿ ಹರಣಿಯವರ ಪಾತ್ರಗಳು ಸಹ ಅದ್ಭುತವಾಗಿ ಮೂಡಿಬಂದಿವೆ.

ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ ಇದಾಗಿದ್ದು, ಮಣ್ಣಿನ ಕಥೆಯ ಸಿನಿಮಾಗಳಿಗೆ ಯಾವತ್ತೂ ಸೋಲಿಲ್ಲ ಎನ್ನುವುದಕ್ಕೆ ಈ ಸಿನಿಮಾ ಮತ್ತೊಂದು ಉದಾಹರಣೆಯಾಗಿದೆ. ಕೆರೆಬೇಟೆ ಜನಮನ ಸಿನಿಮಾಸ್ ಬ್ಯಾನರ್​ನಲ್ಲಿ ನಾಯಕ ಗೌರಿ ಶಂಕರ್ ಹಾಗೂ ಸಹೋದರ ಜೈ ಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯ ಅವರ ಸಂಗೀತವಿದೆ. ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ.

ಇದನ್ನೂ ಓದಿ: ಕಿರಣ್ ​ರಾಜ್ ಅಭಿನಯದ​ 'ಭರ್ಜರಿ ಗಂಡು' ಟ್ರೇಲರ್ ಔಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.