ETV Bharat / entertainment

ಯುಗಾದಿ ಹಬ್ಬಕ್ಕೆ ಡಾಲಿ ಸಿನಿಮಾ ಘೋಷಣೆ: ಶನಿವಾರ 'ಕೋಟಿ' ಟೀಸರ್ ರಿಲೀಸ್ - Koti Movie Teaser - KOTI MOVIE TEASER

ಯುಗಾದಿ ಹಬ್ಬದ ವಿಶೇಷವಾಗಿ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​ ಅಭಿನಯದ ಹೊಸ ಸಿನಿಮಾ ಘೋಷಣೆ ಆಗಿದೆ. ಇದೇ ಶನಿವಾರ ಟೀಸರ್‌ ಕೂಡ ಬಿಡುಗಡೆ ಆಗಲಿದೆ.

Dolly Dhananjay's new movie
ಡಾಲಿ ಧನಂಜಯ್ ಕೋಟಿ ಸಿನಿಮಾ
author img

By ETV Bharat Karnataka Team

Published : Apr 9, 2024, 12:48 PM IST

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಡಾಲಿ ಧನಂಜಯ್​​ ಅವರ ಹೊಸ ಸಿನಿಮಾ ಯಾವುದು? ಎನ್ನುವ ಬಹುದಿನಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ 'ಕೋಟಿ' ಎಂದು ಶೀರ್ಷಿಕೆ ಇಡಲಾಗಿದೆ.

'ಕೋಟಿ' ಟೈಟಲ್ ಪೋಸ್ಟರ್: ಕನ್ನಡ ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಇದೀಗ ಅಪ್ಪಟ ಕನ್ನಡ ಕಥೆಯೊಂದಿಗೆ ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ. ಇಂದು ಯುಗಾದಿ ಹಬ್ಬದ ವಿಶೇಷವಾಗಿ ಚಿತ್ರದ ಟೈಟಲ್ ಪೋಸ್ಟರ್​​ ಅನಾವರಣಗೊಳಿಸಲಾಗಿದೆ.

ಕಾಮನ್‌ ಮ್ಯಾನ್‌ ಕಥೆ?: 500 ರೂಪಾಯಿ ನೋಟುಗಳನ್ನು ಮಡಚಿ ನಾಯಕ ನಟನ ಮುಖ ಮುಚ್ಚಲಾಗಿದೆ. 'ಕೋಟಿ' ಟೈಟಲ್‌ ಪೋಸ್ಟರ್​​​ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆದಿದೆ.‌ 'ಕೋಟಿ' ಕನಸು ಕಾಣುವ ಓರ್ವ ಕಾಮನ್‌ ಮ್ಯಾನ್‌ ಕಥೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ.

ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ್​ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಚಿತ್ರವಿದು. ಅಲ್ಲಿಗೆ ಡಾಲಿ ಧನಂಜಯ್ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆಯಾಗಲಿದೆ. ನಟರಾಕ್ಷಸ ಎಂದು ಜನಪ್ರಿಯತೆ ಗಳಿಸಿರುವ ಡಾಲಿ ಅವರ ವೃತ್ತಿಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯವನ್ನು ಈ ಪೋಸ್ಟರ್ ಮೂಡಿಸಿದೆ.

ಇದನ್ನೂ ಓದಿ: 'ಎಲ್ಟು ಮುತ್ತಾ'ಗೆ ಸಾಥ್​ ನೀಡಿದ ಹೊಂಬಾಳೆಯ ಶೈಲಜಾ ವಿಜಯ್ ಕಿರಗಂದೂರು - Eltu Mutta Movie

ಈ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿರುವ ಪರಮ್‌ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಿಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ, ತಾವು ಹಿರಿತೆರೆಯಲ್ಲಿ ಕಥೆಗಳನ್ನು ಹೇಳಬೇಕು ಎಂಬ ಆಸೆ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇದನ್ನೂ ಓದಿ: ಅಲ್ಲು ಅರ್ಜುನ್ ಬರ್ತ್​ಡೇಗೆ 'ಪುಷ್ಪ 2' ಮಾಸ್ ಟೀಸರ್ ರಿಲೀಸ್ - Pushpa 2 Teaser

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್​ನ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ಈ ವರ್ಷ ಒಂದಾದ ಮೇಲೆ ಒಂದರಂತೆ ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ 'ಕೋಟಿ' ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶಿಸುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ, ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಅವರ ಛಾಯಾಗ್ರಹಣವಿದೆ. ಸಿನಿಮಾ ಶೀರ್ಷಿಕೆ ಅನಾವರಣ ಮಾಡಿದ್ದಲ್ಲದೇ, ಇದೇ ಶನಿವಾರ ಟೀಸರ್‌ ಕೂಡ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.