ETV Bharat / entertainment

ದುಬೈನಲ್ಲಿ ಈ ಜಾಕೆಟ್ ಖರೀದಿಸಿದ್ದೇಕೆ ಗಣಿ; GF ಅನ್ನೋದರಲ್ಲೇ ಇದೆ ಅದರ ಗುಟ್ಟು - Ganesh Jacket Secret

author img

By ETV Bharat Karnataka Team

Published : Sep 11, 2024, 7:18 PM IST

''ಕೃಷ್ಣಂ ಪ್ರಣಯ ಸಖಿ" ಚಿತ್ರ ಬಿಡುಗಡೆಯಾಗಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಆಚರಿಸಲು ನಿರ್ಮಾಪಕರು ಇತ್ತೀಚೆಗೆ ಪ್ರಸನ್ನ ಚಿತ್ರಮಂದಿರದಲ್ಲಿ ಸಮಾರಂಭ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್​​ ಅವರು ದುಬೈನಲ್ಲಿ ಜಾಕೆಟ್ ಖರೀದಿಸಿದ್ದರ ಬಗ್ಗೆ ಮಾತನಾಡಿದ್ದಾರೆ.

Krishnam Pranaya Sakhi  Success event
''ಕೃಷ್ಣಂ ಪ್ರಣಯ ಸಖಿ" ಯಶಸ್ಸಿನ ಸಂಭ್ರಮಾಚರಣೆ (ETV Bharat)

ಕನ್ನಡ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತನ್ನು ದೂರ ಮಾಡಿದ ''ಕೃಷ್ಣಂ ಪ್ರಣಯ ಸಖಿ" ಚಿತ್ರ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಚಿತ್ರ ಗೆಲುವಿನ ಓಟ ಮುಂದುವರಿಸಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ನಿರ್ಮಾಪಕರು ಇತ್ತೀಚೆಗೆ ಪ್ರಸನ್ನ ಚಿತ್ರಮಂದಿರದಲ್ಲಿ ಸಮಾರಂಭ ಆಯೋಜಿಸಿದ್ದರು. ಚಿತ್ರದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಸಂತೋಷವನ್ನು ಮಾತುಗಳ ಮೂಲಕ ಹಂಚಿಕೊಂಡರು.

ಗೋಲ್ಡನ್ ಸ್ಟಾರ್ ಗಣೇಶ್, ಶರಣ್ಯ ಶೆಟ್ಟಿ, ಶಶಿಕುಮಾರ್, ಸಾಧುಕೋಕಿಲ, ಶ್ರೀನಿವಾಸಮೂರ್ತಿ, ರಾಮಕೃಷ್ಣ, ಅಂಬುಜಾಕ್ಷಿ ಸೆರಿದಂತೆ ಮೊದಲಾದ ಕಲಾವಿದರು, ರೀ ರೆಕಾರ್ಡಿಂಗ್ ಮಾಡಿರುವ ಸಾಯಿಕಾರ್ತಿಕ್, ಸಂಕಲನಕಾರ ಕೆ.ಎಂ. ಪ್ರಕಾಶ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಗೀತೆರಚೆನೆಕಾರ ಡಾ. ವಿ.ನಾಗೇಂದ್ರಪ್ರಸಾದ್, ಗಾಯಕರಾದ ಜಸ್ಕರಣ್ ಸಿಂಗ್, ಇಂದು ನಾಗರಾಜ್, ಪೃಥ್ವಿ ಭಟ್, ಕಾರ್ಯಕಾರಿ ನಿರ್ಮಾಪಕ ಶರತ್ ಭೋಜರಾಜ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಹಾಜರಿದ್ದರು. ನಿರ್ಮಾಪಕ ಪ್ರಶಾಂತ್ ಅವರ ಪುತ್ರಿ ಪ್ರೇರಣ ಪ್ರಶಾಂತ್ ಸಹ ಆಗಮಿಸಿದ್ದರು.

ನನ್ನ ಸಿನಿಮಾ ಗೆಲುವಿಗೆ ಮೂರು ಮುಖ್ಯ ಪಿಲ್ಲರ್​​​ಗಳೇ ಕಾರಣ ಎಂದು ಮಾತು ಶುರು ಮಾಡಿದ ನಿರ್ದೇಶಕ ಶ್ರೀನಿವಾಸರಾಜು, ಮೊದಲನೆಯದು ಚಿತ್ರರಸಿಕರು ಹಾಗೂ ಮಾಧ್ಯಮದವರು, ಎರಡನೆಯದು ನಾಯಕ ಗಣೇಶ್ ಹಾಗೂ ಮೂರನೆಯದು ನನ್ನ ಚಿತ್ರಕ್ಕೆ ಆರು ಹಿಟ್ ಹಾಡುಗಳನ್ನು ಕೊಟ್ಟ ಅರ್ಜುನ್ ಜನ್ಯ. ಈ ಗೆಲುವನ್ನು ನನ್ನ ಇಡೀ ತಂಡಕ್ಕೆ ಅರ್ಪಿಸುತ್ತೇನೆ. ಈ ಸಮಯದಲ್ಲಿ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇ‌ನೆ ಎಂದರು.

ಇದನ್ನೂ ಓದಿ: ನಾಳೆ "ರಾನಿ" ಸಿನಿಮಾ ಬಿಡುಗಡೆ: ನಿನ್ನೆ ಅಪಘಾತಕ್ಕೊಳಗಾದ ಕಿರಣ್ ರಾಜ್, ಇಂದು ಹೇಗಿದ್ದಾರೆ? - Kiran Raj Accident

ಇನ್ನೊಂದು ವಿಷಯವೆಂದರೆ, ಈ ಕಥೆಯನ್ನು ಗಣೇಶ್ ಅವರನ್ನು ತಲೆಯಲ್ಲಿಟ್ಟುಕೊಂಡು ಮಾಡಿದ್ದೇನೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಈ ಪಾತ್ರ ಗಣೇಶ್ ಅವರಿಗಾಗಿಯೇ ಆಗರೋದು. ಟ್ರೇಲರ್, ಟೀಸರ್ ಬಿಡುಗಡೆ‌ ಮಾಡದೇ ಹಾಡುಗಳ ಮೂಲಕ ಜನರನ್ನು ತಲುಪುತ್ತೇನೆ ಎಂದು ತಿಳಿಸಿದ್ದೆವು. ಅದು ನಿಜವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ತಮ್ಮೂರಿನ ಗಣೇಶೋತ್ಸವದಲ್ಲಿ ರಕ್ಷಿತ್​​ ಶೆಟ್ಟಿ ಭಾಗಿ: ಖ್ಯಾತ ನಟನನ್ನು ನೋಡಲು ಮುಗಿಬಿದ್ದ ಜನ - Rakshit Shetty

ಗೋಲ್ಡನ್​ ಸ್ಟಾರ್​ ಗಣೇಶ್​ ಮಾತನಾಡಿ, ನಿರ್ದೇಶಕರು ನನ್ನ ಬಗ್ಗೆ ತುಂಬಾನೇ ಹೇಳಿದರು‌. ಆದರೆ ಯಶಸ್ಸಿನ ಸಿಂಹಪಾಲು ಅವರಿಗೆ ಸೇರಬೇಕು. ಅವರು ಈ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ್ದಾರೆ‌. ತಂತ್ರಜ್ಞರು ಹಾಗೂ ನನ್ನ ಸಹೋದ್ಯೋಗಿ ಕಲಾವಿದರ ಸಹಕಾರದಿಂದ ಇಂದು ಯಶಸ್ಸು ಕಾರಣವಾಗಿದೆ. ಇನ್ನು ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ದುಬೈಗೆ ಹೋಗಿದ್ದೆವು. ಪ್ರದರ್ಶನ ಮುಗಿದ ಮೇಲೆ ಶಾಪಿಂಪ್​​ಗಾಗಿ ನಾನು, ನಿರ್ದೇಶಕರು ಹಾಗೂ ರಂಗಾಯಣ ರಘು ಅವರು ಹೋದೆವು. ನಾನು ಸ್ವಲ್ಪ ಬಟ್ಟೆ ಪ್ರೇಮಿ. ಹೋದ ತಕ್ಷಣ ಒಂದು ಜಾಕೆಟ್ ಕಣ್ಣಿಗೆ ಬಿತ್ತು. ರಘು ಅವರು ಈ ಜಾಕೆಟ್ ತೆಗೆದುಕೋ ಅಂತಾ ಹೇಳಿದ್ರು. ನಾನು ಏಕೆ? ಎಂದು ಪ್ರಶ್ನಿಸಿದೆ. ಅದರ ಮೇಲೆ 'GF' ಎಂದು ಬರೆಯಲಾಗಿತ್ತು. ಜಿ ಎಫ್​ ಅಂದ್ರೆ ಗೋಲ್ಡನ್ ಫ್ಯಾನ್ಸ್. ಚಿತ್ರದ ಇಪ್ಪತ್ತೈದನೇ ದಿನದ ಸಮಾರಂಭಕ್ಕೆ ಈ ಜಾಕೆಟ್ ಹಾಕಿಕೊಂಡು ಹೋಗು. ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸು ಎಂದು ನಟ ರಂಗಾಯಣ ರಘು ಅವರು ಹೇಳಿದ್ದು ನನಗೆ ತುಂಬಾನೇ ಹೆಮ್ಮೆ ಅನಿಸಿತ್ತು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.