ETV Bharat / entertainment

ಡಿಎಂಕೆ ಸರ್ಕಾರದ ವಿರುದ್ಧ ದಳಪತಿ ವಿಜಯ್​ ವಾಗ್ದಾಳಿ.. ಯಾವ ಕಾರಣಕ್ಕೆ ಟೀಕೆ ಗೊತ್ತಾ? - Vijay Slams DMK govt

author img

By ANI

Published : Jun 28, 2024, 12:41 PM IST

ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಸಾಮಾನ್ಯವಾಗಿಬಿಟ್ಟಿದೆ. ಯುವಕರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ನಟ ವಿಜಯ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Actor Vijay
ದಳಪತಿ ವಿಜಯ್​ (IANS)

ಚೆನ್ನೈ (ತಮಿಳುನಾಡು): ನಟ - ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್, 'ತಮಿಳುನಾಡು ಸರ್ಕಾರ ಡ್ರಗ್ಸ್ ನಿಯಂತ್ರಣದಲ್ಲಿ ವಿಫಲವಾಗಿದೆ' ಎಂದು ಆರೋಪಿಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಟ, ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು. ಉತ್ತಮ ನಾಯಕರು ಮತ್ತು ನಾಯಕತ್ವದ ಗುಣಗಳ ಬಗ್ಗೆ ಒತ್ತಿ ಹೇಳಿದರು.

ಸಮಾಜ ಸೇವೆಗಳಿಗೂ ಹೆಸರುವಾಸಿಯಾಗಿರುವ ವಿಜಯ್ ಈ ಹಿಂದೆ ತಮಿಳುನಾಡಿನ 10 ಮತ್ತು 12ನೇ ತರಗತಿಯ ಟಾಪರ್ಸ್ ಅನ್ನು ಗೌರವಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಚೆನ್ನೈನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಚೆನ್ನೈನ ತಿರುವನ್ಮಿಯೂರಿನಲ್ಲಿಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮತ್ತೊಂದು ಕಾರ್ಯಕ್ರಮವನ್ನು ಜುಲೈ 3ಕ್ಕೆ ನಿಗದಿಪಡಿಸಲಾಗಿದೆ.

ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ವಿಜಯ್, "ನಮಗೆ ಉತ್ತಮ ನಾಯಕರು ಬೇಕು. ನಾನಿಲ್ಲಿ ರಾಜಕೀಯವಾಗಿ ಹೇಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರೋ, ಅದರಲ್ಲೇ ನಿಮಗೆ ನಾಯಕತ್ವದ ಗುಣ ಇರಬೇಕು, ಅದನ್ನೇ ನಾನಿಲ್ಲಿ ಹೇಳುತ್ತಿದ್ದೇನೆ" ಎಂದು ತಿಳಿಸಿದರು. ಜೊತೆಗೆ, ಭವಿಷ್ಯದಲ್ಲಿ ರಾಜಕೀಯವೂ ಕೂಡ ಕೆರಿಯರ್​ ಆಗಿ ಆಯ್ಕೆಯಾಗಬೇಕು. ಅದು ನನ್ನ ಆಶಯ. ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ನೀವು ಯೋಚಿಸುತ್ತೀರಾ? ಎಂದು ನಟ ಪ್ರಶ್ನಿಸಿದರು.

ತಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಲು ಕೇಳಿಕೊಂಡ ನಟ, "ಸೋಷಿಯಲ್​ ಮೀಡಿಯಾ ಚಾನಲ್​ಗಳು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ನಮಗೆ ಅನೇಕ ವಿಷಯಗಳನ್ನು ನೀಡುತ್ತವೆ. ಎಲ್ಲವನ್ನೂ ನೋಡಿ. ಆದರೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಶ್ಲೇಷಿಸಿ" ಎಂದು ಕೇಳಿಕೊಂಡರು.

"ಆಗ ಮಾತ್ರ ನಮ್ಮ ರಾಷ್ಟ್ರ ಮತ್ತು ಜನರ ನೈಜ ಸಮಸ್ಯೆಗಳನ್ನು ಮತ್ತು ಸಾಮಾಜಿಕ ತೊಡಕುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲ ರಾಜಕೀಯ ಪಕ್ಷಗಳು ಮತ್ತು ನಕಲಿ ಪ್ರಚಾರಗಳನ್ನು ನಂಬದೇ ಈ ವಿಷಯಗಳನ್ನು ಅರಿತುಕೊಂಡರೆ, ನೀವೆಲ್ಲರೂ ವಿಶಾಲ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಆಗ ಮಾತ್ರ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಿಂತ ದೊಡ್ಡ ರಾಜಕೀಯ ಬೇರೊಂದಿಲ್ಲ'' ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇದನ್ನೂ ಓದಿ: ಉತ್ತರಕನ್ನಡದಲ್ಲಿ ಶತಕ ತಲುಪಿದ ಡೆಂಗ್ಯೂ: ಕಳೆದ 5 ವರ್ಷದಲ್ಲೇ ಈ ಬಾರಿ ಮಹಾಮಾರಿ ಅಬ್ಬರ ಜೋರು - Uttara Kannada Dengue Cases

ಇನ್ನೂ ತಮಿಳುನಾಡಿನಲ್ಲಿ ಯುವಕರ ಡ್ರಗ್ಸ್ ಸೇವನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯ್, "ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಡ್ರಗ್ಸ್ ಯುವಕರಿಗೆ ಸಾಮಾನ್ಯವಾಗಿಬಿಟ್ಟಿದೆ. ರಾಜಕೀಯ ನಾಯಕನಾಗಿ ಮತ್ತು ಪೋಷಕರಾಗಿ ನನಗೂ ಭಯವಾಗಿದೆ. ಡ್ರಗ್ಸ್ ಅನ್ನು ನಿಯಂತ್ರಿಸುವುದು, ಯುವಕರನ್ನು ಉಳಿಸುವುದು ಸರ್ಕಾರದ ಜವಾಬ್ದಾರಿ. ಪ್ರಸ್ತುತ ಸರ್ಕಾರ ಅದರಲ್ಲಿ ವಿಫಲವಾಗಿದೆ'' ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಅಬ್ಬಬ್ಬಾ!; 'ಕಲ್ಕಿ' ಕಲೆಕ್ಷನ್​​​ ₹180 ಕೋಟಿ: ಕೆಜಿಎಫ್​ 2, ಜವಾನ್ ಸೇರಿ ಹಿಟ್ ಸಿನಿಮಾಗಳ​ ದಾಖಲೆಗಳೆಲ್ಲಾ ಉಡೀಸ್ - Kalki 2898 AD Collection

"ಅದರ ಬಗ್ಗೆ ಮಾತನಾಡಲು ನಾನು ಇಲ್ಲಿಲ್ಲ. ಅದಕ್ಕಿದು ವೇದಿಕೆ ಕೂಡ ಅಲ್ಲ. ಸರ್ಕಾರಕ್ಕಿಂತ ಹೆಚ್ಚಾಗಿ, ನಾವು ನಮ್ಮನ್ನು ನೋಡಿಕೊಳ್ಳಬೇಕು. ಡ್ರಗ್ಸ್ ಬೇಡ. ತಾತ್ಕಾಲಿಕ ಸಂತೋಷಕ್ಕೆ ನೋ ಎಂದು ಹೇಳಿ. ಇದನ್ನು ಪ್ರಮಾಣವಾಗಿ ತೆಗೆದುಕೊಳ್ಳಿ'' ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.