ಹೈದರಾಬಾದ್: ದಕ್ಷಿಣ ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ತೆಲುಗು ಚಿತ್ರ 'ದೇವರ' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಮತ್ತು ಬೆಡಗಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 'ದೇವರ' ಸಿನಿಮಾ ಸುತ್ತಲಿನ ಸಂಭ್ರಮ ಮುಗಿಲು ಮುಟ್ಟಿದ್ದು, ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.
ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕೊನೆಯದಾಗಿ 'ಆರ್ಆರ್ಅರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2022ರ ಮಾರ್ಚ್ನಲ್ಲಿ ತೆರೆಕಂಡಿದ್ದ ಈ ಸಿನಿಮಾ ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡಿ, ಚಿತ್ರತಂಡ ಆಸ್ಕರ್ ವೇದಿಕೆ ಪ್ರವೇಶಿಸಿತ್ತು. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನಿಯರ್ ಎನ್‌ಟಿಆರ್ ನಟನೆಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅದರಂತೆ, 'ದೇವರ' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದು, ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ.
ಈ ಹಿಂದೆ ಜೂನಿಯರ್ ಎನ್‌ಟಿಆರ್ ಜೊತೆ ಹಲವು ಚಿತ್ರಗಳಲ್ಲಿ ಸಹಕರಿಸಿರುವ ಖ್ಯಾತ ನಿರ್ದೇಶಕ ರಾಜಮೌಳಿ ಅವರಿಂದು ಹೈದರಾಬಾದ್‌ನ ಚಿತ್ರಮಂದಿರದಲ್ಲಿ 'ದೇವರ' ಮೊದಲ ದಿನದ ಮೊದಲ ಪ್ರದರ್ಶನ ಕಣ್ತುಂಬಿಕೊಳ್ಳಲು ಹಾಜರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಯೋರ್ವರು ಶೇರ್ ಮಾಡಿರುವ ವಿಡಿಯೋದಲ್ಲಿ ರಾಜಮೌಳಿ ಅವರನ್ನು ಕಾಣಬಹುದು. ಸುದೀಪ್ ನಟನೆಯ ಬ್ಲಾಕ್ಬಸ್ಟರ್ ಚಿತ್ರ 'ಈಗ' ನಿರ್ದೇಶಿಸಿರುವ ನಿರ್ದೇಶಕರು, ಬ್ಲ್ಯಾಕ್ ಪ್ಯಾಂಟ್, ಬೀಜ್ ಶರ್ಟ್ ಧರಿಸಿ ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಲು ಚಿತ್ರಮಂದಿರ ಪ್ರವೇಶಿಸಿದರು. ನಿರ್ದೇಶಕರು ಪ್ರೇಕ್ಷಕರನ್ನು ಬಹಳ ಆತ್ಮೀಯವಾಗಿ ಸ್ವಾಗತಿಸಿದರು.
The haunted SS Rajamouli curse is broken. #Devara is going to create sensation at box office! Congrats to all the NTR fans!
— Charlie Harper 🇮🇳 (@suryatej_borra) September 26, 2024
Remember the curse started with NTR and it ends with NTR!
Devara is overdose of action adrenaline filled entertainment! 🧨🔥🐦🔥🦈🦈⚓️🛳️🗡️💣⚔️🔪
'ದೇವರ' ಬಿಡುಗಡೆ ಅದ್ಧೂರಿಯಾಗಿ ನಡೆದಿದೆ. ಕಾಸ್ಟ್ ವಿಷಯ ಮಾತ್ರವಲ್ಲದೇ, ಆರ್ಆರ್ಆರ್ ಯಶಸ್ಸಿನ ಬಳಿಕ ಬರುತ್ತಿರುವ ಜೂನಿಯರ್ ಎನ್‌ಟಿಆರ್ ನಟನೆಯ ಚೊಚ್ಚಲ ಚಿತ್ರವಾದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್ಆರ್ಆರ್ ಜಾಗತಿಕವಾಗಿ 1,230 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಗೋಲ್ಡನ್ ಗ್ಲೋಬ್ ಮತ್ತು ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಚಿತ್ರ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: ರೀ ರಿಲೀಸ್ನಲ್ಲೂ ಒಳ್ಳೆ ಗಳಿಕೆ ಮಾಡಿದ ಉಪೇಂದ್ರ, ಜಾಕಿ, ರಾಬರ್ಟ್, ಕರಿಯ, ಎ ಸಿನಿಮಾಗಳು - Re Released Movies collection
23 years of MYTH...
— S S Karthikeya (@ssk1122) September 27, 2024
Finally it was broken where it all began by the MAN HIMSELF on the SAME DAY again. Growing up watching him closely and now witnessing his wonders is what makes him so special to Telugu cinema. 🙏🏻🙏🏻
Absolutely Speechless...
I’ve been screaming to say this…… pic.twitter.com/ZGr4AakzSF
ರಾಜಮೌಳಿ ಅವರ ಪುತ್ರ, ನಿರ್ಮಾಪಕ ಎಸ್.ಎಸ್.ಕಾರ್ತಿಕೇಯ ಕೂಡಾ 'ದೇವರ' ಬಿಡುಗಡೆ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದರು. ಜೂನಿಯರ್ ಎನ್‌ಟಿಆರ್ ಜೊತೆಗಿನ ಪೋಟೋ ಶೇರ್ ಮಾಡಿದ ಅವರು, '23 ವರ್ಷಗಳ ಮಿಥ್. ಅಂತಿಮವಾಗಿ ಅದು ಬ್ರೇಕ್ ಆಯಿತು. ಇದೆಲ್ಲವೂ ಮತ್ತೆ ಅದೇ ದಿನ ಅವನೇ ಪ್ರಾರಂಭಿಸಿದನು. ಅವನನ್ನು ಹತ್ತಿರದಿಂದ ನೋಡುತ್ತಾ ಬೆಳೆದು ಈಗ ಅವನ ಅದ್ಭುತಗಳಿಗೆ ಸಾಕ್ಷಿಯಾಗುತ್ತಿದ್ದು, ತೆಲುಗು ಚಿತ್ರರಂಗಕ್ಕೆ ಅವನು ತುಂಬಾನೇ ವಿಶೇಷ. ಮೂಕವಿಸ್ಮಿತ. ಇದನ್ನು ಹೇಳಲು ನಾನು ಕಿರುಚುತ್ತಿದ್ದೆ. ಎಲ್ಲ ಅಭಿಮಾನಿಗಳಿಗೆ, ಇದು ಅವರು ನಮಗೆ ಸಂಭ್ರಮಿಸಲು ನೀಡಿದ ಉಡುಗೊರೆ. ದೇವರ - ಸಿನಿಮಾ ಲೋಕದಲ್ಲಿ ಬಿಗ್ಗೆಸ್ಟ್ ಮಾಸ್ ಸೆಲೆಬ್ರೇಷನ್. ಇದೀಗ ಹುಚ್ಚುತನವೇ ಮಾತನಾಡುತ್ತದೆ' ಎಂದು ಬರೆದುಕೊಂಡಿದ್ದಾರೆ.