ETV Bharat / entertainment

ಬಾಹುಬಲಿ, ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿ ಡ್ಯಾನ್ಸ್​ ವಿಡಿಯೋ ವೈರಲ್ - Rajamouli Dance - RAJAMOULI DANCE

ಹೆಸರಾಂತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಡ್ಯಾನ್ಸ್ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

SS Rajamouli dance
ನಿರ್ದೇಶಕ ರಾಜಮೌಳಿ ಡ್ಯಾನ್ಸ್​
author img

By ETV Bharat Karnataka Team

Published : Apr 11, 2024, 11:54 AM IST

Updated : Apr 11, 2024, 1:50 PM IST

ಎಸ್​ಎಸ್​ ರಾಜಮೌಳಿ, ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ. ಜಕ್ಕಣ್ಣ ಎಂದೇ ಖ್ಯಾತರಾಗಿರುವ ಇವರು ಅದ್ಭುತ ಸಿನಿಮಾ ಮಾಡುವುದರಿಂದ ಹಿಡಿದು ಎಲ್ಲ ಕೆಲಸಗಳಲ್ಲಿ ತಮ್ಮ ಪರಿಪೂರ್ಣತೆ ಪ್ರದರ್ಶಿಸುತ್ತಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿರಿಸಿ, ಯಶಸ್ಸಿನ ಪಯಣ ಮುಂದುವರಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಬಹಳ ಕಟ್ಟುನಿಟ್ಟಿನ ನಿರ್ದೇಶಕರು. ಆಫ್ - ಸ್ಕ್ರೀನ್‌ನಲ್ಲಿ ಬಹಳ ತಮಾಷೆಯ ವ್ಯಕ್ತಿ. ಸಾಧ್ಯವಾದಾಗಲೆಲ್ಲ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುತ್ತಾರೆ.

ಇತ್ತೀಚೆಗೆ, ತಮ್ಮ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಪತ್ನಿ ರಮಾ ಅವರೊಂದಿಗೆ ರಾಜಮೌಳಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ನಿರ್ದೇಶಕರು ತಮ್ಮ 51ರ ಹರೆಯದಲ್ಲೂ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ವಿಡಿಯೋ ನೋಡಿದ ಅಭಿಮಾನಿಗಳು 'ಇಷ್ಟು ವರ್ಷ ಈ ಪ್ರತಿಭೆಯನ್ನು ಎಲ್ಲಿ ಬಚ್ಚಿಟ್ಟಿದ್ದಿರಿ' ಎಂದು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದರು. ವಿಡಿಯೋ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಇದೀಗ ಇದಕ್ಕೆ ಸಂಬಂಧಿಸಿದ ರಿಹರ್ಸಲ್ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವೈರಲ್​ ವಿಡಿಯೋದಲ್ಲಿ ರಾಜಮೌಳಿ-ರಮಾ ದಂಪತಿ ಡ್ಯಾನ್ಸ್ ಪ್ರ್ಯಾಕ್ಟೀಸ್​ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಅವರು ಪರ್ಫೆಕ್ಟ್ ಆಗಿ ಹೆಜ್ಜೆ ಹಾಕಿರುವ ರೀತಿ ನೋಡಿದರೆ ರಾಜಮೌಳಿ ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಮಾಡುತ್ತಾರೆ ಎಂಬರ್ಥದ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಲ್ಲದೇ ಜಕ್ಕಣ್ಣನ ಈ ಆ್ಯಂಗಲ್ ಸೋ ಕ್ಯೂಟ್ ಎಂಬ ಕಾಮೆಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದುಬಂದಿದೆ.

ಇದನ್ನೂ ಓದಿ: ಆಸ್ಕರ್ 2025 ವೇಳಾಪಟ್ಟಿ ಪ್ರಕಟ: ಪ್ರತಿಷ್ಠಿತ ಕಾರ್ಯಕ್ರಮದ ಸಂಪೂರ್ಣ ಮಾಹಿತಿ - Oscars 2025

2022ರ ಮಾರ್ಚ್ 24ರಂದು ಚಿತ್ರಮಂದಿರ ಪ್ರವೇಶಿಸಿದ ಆರ್​ಆರ್​ಆರ್ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್​ ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​​ ಅಮೋಘವಾಗಿ ಅಭಿನಯಿಸಿದ್ದರು. ಚಿತ್ರದ ನಿರ್ದೇಶನಾ ಶೈಲಿ ಹಾಗೂ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಳೆದ ವರ್ಷ ಈ ಚಿತ್ರ ಎರಡು ಗೋಲ್ಡನ್ ಗ್ಲೋಬ್‌ ಮತ್ತು ಆಸ್ಕರ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಎಂ.ಎಂ ಕೀರವಾಣಿ ಅವರ ನಾಟು ನಾಟು ಹಾಡಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿ ಜಾಗತಿಕವಾಗಿ ಸದ್ದು ಮಾಡಿದ ಹಿನ್ನೆಲೆ, ಇದೀಗ ಈ ಮೂವರ ಸಿನಿಮಾಗಳ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಮಹೇಶ್​ ಬಾಬು ಜೊತೆ ಕೈ ಜೋಡಿಸಿದ್ದಾರೆ.

Last Updated : Apr 11, 2024, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.