ETV Bharat / entertainment

ಇಂದು ಮುಂಬೈನಲ್ಲಿ 'ಮಾರ್ಟಿನ್'​ ಟ್ರೇಲರ್​​ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ - Dhruva Sarja Martin - DHRUVA SARJA MARTIN

ಎ.ಪಿ.ಅರ್ಜುನ್ ಆ್ಯಕ್ಷನ್​ ಕಟ್​​ ಹೇಳಿರುವ ಹಾಗೂ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಮಾರ್ಟಿನ್'​ ಚಿತ್ರದ ಟ್ರೇಲರ್​ ಇಂದು ಅನಾವರಣಗೊಳ್ಳಲಿದೆ. ಮುಂಬೈನಲ್ಲಿ ಸಂಜೆ 5:50ಕ್ಕೆ ಟ್ರೇಲರ್​​​ ರಿಲೀಸ್​ ಆಗಲಿದ್ದು, ಅಭಿಮಾನಿಗಳ ಕುತೂಹಲ ಗರಿಗೆದರಿದೆ.

Martin poster
'ಮಾರ್ಟಿನ್'​ ಪೋಸ್ಟರ್ (ETV Bharat)
author img

By ETV Bharat Karnataka Team

Published : Aug 5, 2024, 12:53 PM IST

ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಸೂಪರ್ ಸ್ಟಾರ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್'​ ತೆರೆಕಾಣಲು ಸಜ್ಜಾಗಿದೆ. ಆಕ್ಷನ್ ಪ್ರಿನ್ಸ್ ಮುಖ್ಯಭೂಮಿಕೆಯ 'ಮಾರ್ಟಿನ್'​ ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ 'ಮಾರ್ಟಿನ್'​ ಚಿತ್ರದ ಟ್ರೇಲರ್​​ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಮುಂಬೈನಲ್ಲಿ ಗ್ರ್ಯಾಂಡ್​ ಈವೆಂಟ್​: ಎ.ಪಿ.ಅರ್ಜುನ್ ಆ್ಯಕ್ಷನ್​ ಕಟ್​​ ಹೇಳಿರುವ 'ಮಾರ್ಟಿನ್' ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರರಂಗದಲ್ಲಿ ದೊಡ್ಡ ಮಟ್ಟಿನ ಸದ್ದು ಮಾಡುತ್ತಿದೆ. ಬಹುಬೇಡಿಕೆ ನಟರು ಬಣ್ಣ ಹಚ್ಚಿರೋದೇ ಚಿತ್ರದ ಹೈಲೆಟ್ಸ್​​. ಆ್ಯಕ್ಷನ್​ ಕಟ್​ ಹೇಳಿರೋದು ಕೂಡಾ ಸ್ಟಾರ್​​ ಡೈರೆಕ್ಟರ್​​​​. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತ್ರ ಪ್ರಮೋಶನ್​ ಕೂಡ ಅದ್ಧೂರಿಯಾಗಿಯೇ ನಡೆಯಲಿದೆ. ಇಂದಿನ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ಅದಕ್ಕೆ ಮುನ್ನುಡಿ. ಚಿತ್ರತಂಡ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾದ ಪ್ರಚಾರ ಮಾಡಲು ಭರ್ಜರಿ ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ಇಂದು ಬಹುನಿರೀಕ್ಷಿತ ಟ್ರೇಲರ್​ ಅನಾವರಣಗೊಳ್ಳಲಿದೆ. ಮುಂಬೈನಲ್ಲಿ ಸಂಜೆ 5:50ಕ್ಕೆ ಟ್ರೇಲರ್​​​ ರಿಲೀಸ್​ ಆಗಲಿದೆ.

Dhruva Sarja IG Story
ಧ್ರುವ ಸರ್ಜಾ ಇನ್​ಸ್ಟಾಗ್ರಾಮ್​ ಸ್ಟೋರಿ (Dhruva Sarja Instagram)

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎ.ಪಿ ಅರ್ಜುನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಮಾರ್ಟಿನ್' ಚಿತ್ರದಲ್ಲಿ ​ಧ್ರುವ ಸರ್ಜಾಗೆ ಜೊತೆಗೆ ನಟಿ ವೈಭವಿ ಶಾಂಡಿಲ್ಯ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ಅನ್ವೇಶಿ ಜೈನ್‌, ನಿಕಿತನ್‌ ಧೀರ್‌ ಸೇರಿದಂತೆ ದೊಡ್ಡ ತಾರಾ ಬಳಗ ಚಿತ್ರದಲ್ಲಿದೆ. ನಿರ್ಮಾಪಕ ಉದಯ್ ಮೆಹ್ತಾ ಅವರು ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಈ ನಿರ್ಮಾಪಕರ ಚೊಚ್ಚಲ ಪ್ಯಾನ್​ ಇಂಡಿಯಾ ಚಿತ್ರ.

ಅಕ್ಟೋಬರ್​ಗೆ ಸಿನಿಮಾ ಬಿಡುಗಡೆ: ಟಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಮಣಿಶರ್ಮಾ ಅವರ ಸಂಗೀತ ಈ ಚಿತ್ರಕ್ಕಿದೆ. ಸತ್ಯ ಹೆಗಡೆ ಅವರ ಕ್ಯಾಮರಾ ಕೈಚಳಕವಿದ್ದು, ಮಹೇಶ್‌ರೆಡ್ಡಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಮತ್ತು ರಾಮ್‌ ಲಕ್ಷ್ಮಣ್‌ ಆ್ಯಕ್ಷನ್​​ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದ ಮಾರ್ಟಿನ್​​​ ಅಕ್ಟೋಬರ್ 11ಕ್ಕೆ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಧ್ರುವ ಸರ್ಜಾ ಭೇಟಿ: ನಟನ ನೋಡಲು ಮುಗಿಬಿದ್ದ ಫ್ಯಾನ್ಸ್- ವಿಡಿಯೋ - Dhruva Sarja

ಬೆಂಗಳೂರು ಮತ್ತು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾಶ್ಮೀರದ ಐಸ್‌ವಾರ್ ಆ್ಯಕ್ಷನ್​​ ಸೀನ್ಸ್​​ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ದೃಶ್ಯಗಳು ಈ ಚಿತ್ರದ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ. ಈ ಔಟ್ ಅಂಡ್ ಔಟ್ ಆ್ಯಕ್ಷನ್​ ಸಿನಿಮಾದಲ್ಲಿ ದೇಶ ಪ್ರೇಮ, ಜೊತೆಗೊಂದು ಮುದ್ದಾದ ಪ್ರೇಮ್​ಕಹಾನಿ ಹಾಗೂ ಕೌಟುಂಬಿಕ ಕಥೆಯೂ ಇದರಲ್ಲಿದ್ದು, ಸಂಪೂರ್ಣ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಆ.5ರಂದು 'ಮಾರ್ಟಿನ್' ಸಿನಿಮಾದ ಟ್ರೈಲರ್‌ ರಿಲೀಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದೇನು? - Martin Movie update

ಟ್ರೇಲರ್​ ಲಾಂಚ್​ ಈವೆಂಟ್​ ಹಿನ್ನೆಲೆ, ಶುಕ್ರವಾರವೇ ಧ್ರುವ ಸರ್ಜಾ ಮುಂಬೈ ಪ್ರಯಾಣ ಕೈಗೊಂಡರು. ಪ್ರಯಾಣದ ಸಂದರ್ಭ ಮಾರ್ಗಮಧ್ಯೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದರು. ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಆ್ಯಕ್ಷನ್​ ಪ್ರಿನ್ಸ್, ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನವನ್ನೂ ಪಡೆದರು. ಬಳಿಕ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮತ್ತು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.