ETV Bharat / entertainment

'ಧೂಳ್​​ ಎಬ್ಸಾವಾ': ಜವಾರಿ ಶೈಲಿಯ ಮಾಸ್ ಸಾಂಗ್​​ನಲ್ಲಿ ಧೂಳೆಬ್ಬಿಸಿದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ - Gowri Movie Song - GOWRI MOVIE SONG

ಇಂದ್ರಜಿತ್ ಲಂಕೇಶ್ ನಿರ್ದೇಶನದ ಬಹುನಿರೀಕ್ಷಿತ ಗೌರಿ ಚಿತ್ರದ 'ಧೂಳ್​​ ಎಬ್ಸಾವಾ' ಹಾಡು ಅನಾವರಣಗೊಂಡಿದೆ.

Dhool Yebsava Song release event
'ಧೂಳ್​​ ಎಬ್ಸಾವಾ' ಸಾಂಗ್​ ರಿಲೀಸ್​ ಈವೆಂಟ್ (ETV Bharat)
author img

By ETV Bharat Karnataka Team

Published : Jun 15, 2024, 9:54 AM IST

'ಗೌರಿ', ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ. ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್​ ನಟನೆಯ ಚೊಚ್ಚಲ ಚಿತ್ರವಿದು. ಗ್ರ್ಯಾಂಡ್ ಮೇಕಿಂಗ್ ಹಾಗೂ ಕಂಟೆಂಟ್​ನಿಂದ ಗಮನ ಸೆಳೆಯುತ್ತಿರುವ 'ಗೌರಿ' ಚಿತ್ರದ ಮತ್ತೊಂದು ಹುಬ್ಬಳಿ ಶೈಲಿಯ ಹಾಡನ್ನು ಚಿತ್ರತಂಡ ಇತ್ತೀಚೆಗೆ ಅನಾವರಣಗೊಳಿಸಿದೆ.

'ಧೂಳ್​​ ಎಬ್ಸಾವಾ' ಬಿಡುಗಡೆ: ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ನಟಿ ಸಂಜನಾ ಆನಂದ್ ಜಬರ್ದಸ್ತ್ ಸ್ಟೆಪ್​​ ಹಾಕಿದ್ದಾರೆ. ಅನಿರುದ್ಧ್ ಶಾಸ್ತ್ರೀ, ಅನನ್ಯ ಭಟ್ ಹಾಡಿರುವ ಈ ಹಾಡಿಗೆ ಶಿವು ಬೆರ್ಗಿಯವರು ಸಾಹಿತ್ಯ ಒದಗಿಸಿ, ಸಂಗೀತ ಸಂಯೋಜಿಸಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ಧೂಳ್ ಎಬ್ಸಾವಾ ಸಾಂಗ್ ಸಖತ್ ವೈರಲ್ ಆಗುವ ಮೂಲಕ ಜನಮನ ಸೂರೆಗೊಂಡಿದೆ.

Gowri movie event
'ಗೌರಿ' ಈವೆಂಟ್​​ (ETV Bharat)

ನೈಜ ಘಟನೆ ಆಧರಿಸಿ ಬಿಗ್​​ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಇಂದ್ರಜಿತ್ ಲಂಕೇಶ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ. ಅಕ್ಕ ಗೌರಿ ಅವರ ಮೇಲಿನ ಅಭಿಮಾನದಿಂದ ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರಕ್ಕೆ ಅಕ್ಕನ ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: SSMB 29 ಸಿನಿಮಾ - ಬಹುಮುಖ್ಯ ಅಪ್ಡೇಟ್​​​​​​​​​ ನೀಡಿದ ವಿಜಯೇಂದ್ರ ಪ್ರಸಾದ್ : ಏನದು ಹೊಸ ವಿಷಯ? - Rajamouli Maheshbabu Movie shooting

ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾಲತಿ ಸುಧೀರ್, ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

Gowri movie event
'ಗೌರಿ' ಈವೆಂಟ್​ (ETV Bharat)

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ​​ ಪ್ರಕರಣ: ಆರೋಪಿ ತಂದೆ ಹೃದಯಾಘಾತದಿಂದ ಸಾವು - Darshan case Accused Father Death

ಚಿತ್ರದಲ್ಲಿ ಎ.ಜೆ ಶೆಟ್ಟಿ ಹಾಗೂ ಕೃಷ್ಣಕುಮಾರ್​ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್​ ಮತ್ತು ಟೈಮ್‍ ಬರತ್ತೆ ಎಂಬ ಹಾಡು ಒಂದು ಮಿಲಿಯನ್​ಗೂ ಹೆಚ್ಚು ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಅವರಿಗೆ ತಮ್ಮ ಚಿತ್ರ ಸಿನಿಪ್ರೇಮಿಗಳಿಗೆ ಇಷ್ಟ ಆಗಲಿದೆ ಎಂಬ ವಿಶ್ವಾಸವಿದೆ. ಮತ್ತೊಂದು ಕಡೆ ಚೊಚ್ಚಲ ಚಿತ್ರ ಸಮರ್ಜಿತ್ ಲಂಕೇಶ್​ಗೆ ದೊಡ್ಡ ಮಟ್ಟದ ಹೆಸರು ತಂದುಕೊಡುವ ಸೂಚನೆ ಸಿಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.