ETV Bharat / entertainment

'ನವಗ್ರಹ' ಮರು ಬಿಡುಗಡೆ: ಸೆಲೆಬ್ರೇಷನ್​ ವಿಡಿಯೋ ನೋಡಿ; ದರ್ಶನ್ ಬಗ್ಗೆ ನಟ ನಾಗೇಂದ್ರ ಹೇಳಿದ್ದಿಷ್ಟು - NAVAGRAHA RE RELEASE

16 ವರ್ಷಗಳ ಬಳಿಕ ಬಹುತಾರಾಗಣದ 'ನವಗ್ರಹ' ಇಂದು ತೆರೆಗಪ್ಪಳಿಸಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ.

Navagraha Re release
'ನವಗ್ರಹ' ಮರು ಬಿಡುಗಡೆ, ಅಭಿಮಾನಿಗಳ ಸಂಭ್ರಮಾಚರಣೆ (ETV Bharat)
author img

By ETV Bharat Entertainment Team

Published : Nov 8, 2024, 2:25 PM IST

ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸಿನಿ ಕೆರಿಯರ್​ನ ಹಿಟ್​ ಸಿನಿಮಾಗಳಲ್ಲೊಂದಾದ 'ನವಗ್ರಹ' ಇಂದು ಬಹಳ ಅದ್ಧೂರಿಯಾಗಿ ತೆರೆಕಂಡಿದೆ. 16 ವರ್ಷಗಳ ಬಳಿಕ ಸಿನಿಮಾ ಬಿಗ್​ ಸ್ಕ್ರೀನ್​ಗೆ ಮರಳಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ದರ್ಶನ್​​ ಜೊತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಜೈಲುಪಾಲಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಸದ್ಯ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದಿದ್ದಾರೆ. ಈ ಹೊತ್ತಲ್ಲೇ ನಟನ ಹಿಟ್​ ಸಿನಿಮಾ ಮರು ಬಿಡುಗಡೆ ಆಗಿರೋದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಮಧ್ಯಂತರ ಜಾಮೀನಿಗೂ ಮುನ್ನವೇ, ಸಿನಿಮಾದ ರೀ ರಿಲೀಸ್​ ಡೇಟ್​ ಅನೌನ್ಸ್​​ ಆಗಿತ್ತು.

'ನವಗ್ರಹ' ಮರು ಬಿಡುಗಡೆ, ಅಭಿಮಾನಿಗಳ ಸಂಭ್ರಮಾಚರಣೆ (Navagraha Re release)

ದರ್ಶನ್​​ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಜೈಲುವಾಸದ ಸಂದರ್ಭ, ಕೆಲ ವಾರಗಳ ಹಿಂದಷ್ಟೇ 'ಕರಿಯ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು. ಇಂದು ನವಗ್ರಹ ರೀ ರಿಲೀಸ್​ ಆಗಿದೆ. ಇದಕ್ಕೂ ಮುನ್ನ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಕೆಲವರು ಸಿನಿಮಾ ಪ್ರಮೋಶನ್​​​ ಕೈಗೊಂಡಿದ್ದರು.

ನಟ ನಾಗೇಂದ್ರ ಅರಸ್ ಮಾತನಾಡಿ, 16 ವರ್ಷಗಳ ಬಳಿಕ ಸಿನಿಮಾ ಬಿಡುಗಡೆ ಆಗಿರೋದು ಖುಷಿಯ ವಿಚಾರ. ನಿಜವಾಗಿಯೂ ನಾವು 16 ವರ್ಷದವರಂತೆ ಆಗಿಬಿಟ್ಟಿದ್ದೇವೆ. ಆ ಉತ್ಸಾಹ ಬಂದಿದೆ. ಆ ಒಂದು ಕ್ರೇಜ್​ ಏನಿತ್ತು 16 ವರ್ಷಗಳ ಬಳಿಕವೂ ಅದೇ ಕ್ರೇಜ್​ ಇದೆ. ಜನಸಮೂಹ ನೋಡುತ್ತಿದ್ರೆ ಬಹಳ ಎಮೋಷನಲ್​​ ಫೀಲ್​​ ಆಗ್ತಿದೆ. ಈ ಸಂದರ್ಭ ನಮ್ಮ ಸಂಪೂರ್ಣ ಚಿತ್ರತಂಡ ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು. ಸ್ಕ್ರೀನ್​​ನಲ್ಲಿ ಎಲ್ಲರನ್ನೂ ನೋಡ್ತೀರ. ಎಲ್ಲವೂ ಆದಷ್ಟು ಬೇಗ ಒಳ್ಳೆಯದಾಗುತ್ತದೆ. ಸದ್ಯಕ್ಕಂತೂ ಬಹಳ ಉತ್ಸುಕನಾಗಿದ್ದೇನೆ. ನಿರ್ದೇಶಕ ದಿನಕರ್​​ ಮತ್ತು ನಾನು ಮಾತನಾಡಿದ್ದೆವು. ಸ್ವಲ್ಪ ಟೆನ್ಷನ್​ ಇತ್ತು. ಆದ್ರೆ ಏನೇ ಆಗ್ಲಿ, ಅಭಿಮಾನಿಗಳೆಲ್ಲರೂ ಅವರವರ ಸ್ಟಾರ್ಸ್ ಅನ್ನು ಆರಾಧಿಸಿ. ಎಲ್ಲರನ್ನೂ ಪ್ರೀತಿಸಿ. ನಿಮಗೋಸ್ಕರನೇ ಎಲ್ಲರೂ ಸಿನಿಮಾ ಮಾಡೋದು. ಸಿನಿಮಾನಾ ಸಿನಿಮಾ ತರವೇ ಪ್ರೀತಿಸಿ ಎಂದು ತಿಳಿಸಿದರು.

ನಟ ನಾಗೇಂದ್ರ ಅರಸ್ (Photo: ETV Bharat)

ಇನ್ನೂ ದರ್ಶನ್​​ ಆಸ್ಪತ್ರೆಯಲ್ಲಿರುವ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸಿ, ಫೋನ್​​ನಲ್ಲಿ ಮಾತುಕತೆ ನಡೆದಿಲ್ಲ. ನೇರವಾಗಿ ಮೀಟ್​ ಮಾಡಬೇಕು ಎಂದುಕೊಂಡಿದ್ದೆವು. ದಿನಕರ್​ ಅವರಲ್ಲೂ ಕೇಳಿದೆ. ಪ್ರೋಟೋಕಾಲ್ಸ್​ ಇದೆ ಎಂದರು. ಹಾಗೇ, ಇನ್​ಫೆಕ್ಷನ್ ಆಗುವ ಸಾಧ್ಯತೆಗಳಿವೆ. ನಮಗೂ ತೊಂದರೆ ಕೊಡಲು ಇಷ್ಟವಿಲ್ಲ. ಒಂದೆರಡು ದಿನಗಳಾದ ಬಳಿಕ ನೋಡೋಣ ಅಂತಾ ದಿನಕರ್​ ತಿಳಿಸಿದ್ದಾರೆ. ಹಾಗಾಗಿ, ಎಲ್ಲವನ್ನೂ ನೋಡಿಕೊಂಡು ಇನ್ನೆರಡು ದಿನಗಳಾದ ಮೇಲೆ ಮೀಟ್​ ಮಾಡುವ ಪ್ಲ್ಯಾನ್​ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಬರ್ತಡೇ ದಿನ ಕೈಯಲ್ಲಿ ರುಂಡ ಹಿಡಿದು ಬಂದ ಅನುಷ್ಕಾ ಶೆಟ್ಟಿ; 'ಘಾಟಿ' ಗ್ಲಿಂಪ್ಸ್​ ರಿಲೀಸ್​ ​

ಮರು ಬಿಡುಗಡೆ ಸಂದರ್ಭ ದರ್ಶನ್​ ಇದ್ದಿದ್ದರೆ ಅದಿನ್ನೂ ಮಜಾ ಇರುತ್ತಿತ್ತು. ಇದು ಹಬ್ಬ ಅಂದ್ರೆ, ಅದು ಡಬಲ್​ ಧಮಾಕಾ ತರ ಇರುತ್ತಿತ್ತು. ಜಾತ್ರೆ ಅಂತಾನೇ ಹೇಳಬಹುದು. ಅದೇನೇ ಇರಲಿ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಇದ್ದೇ ಇರುತ್ತದೆ. ಬರುವಾಗೇ ಆಗುತ್ತದೆ. ತಾಯಿ ಆಶೀರ್ವಾದ ನಿಮ್ಮ ಮೇಲಿರುತ್ತದೆ, ನಿಮ್ಮ ಅಭಿಮಾನ ಅವರ ಮೇಲಿರುತ್ತದೆ, ಒಳ್ಳೆದಾಗ್ಲಿ ಎಂದು ತಿಳಿಸಿದರು.

ಇದನ್ನೂ ಓದಿ: 'ಬಘೀರ' ಸಕ್ಸಸ್​ ಮೀಟ್​​ ವಿಡಿಯೋ ರಿಲೀಸ್​​: ಈವರೆಗಿನ ಕಲೆಕ್ಷನ್​ ಡೀಟೆಲ್ಸ್​​ ಹೀಗಿದೆ

ಸಿನಿಮಾದ ಮರು ಬಿಡುಗಡೆ ದಿನಾಂಕ ಘೋಷಿಸಿದ್ದ ನಿರ್ದೇಶಕ ದಿನಕರ್​ ತೂಗುದೀಪ, ''ನನ್ನ ನಿರ್ದೇಶನದ 2ನೇ ಚಿತ್ರ 'ನವಗ್ರಹ', ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿತೆರೆ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8 ರಂದು ಮರು ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ'' ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.