ETV Bharat / entertainment

ಡಾಲಿ ಧನಂಜಯ್​​, ಸತ್ಯದೇವ್ ಸಿನಿಮಾ 'ಜೀಬ್ರಾ' ಬಿಡುಗಡೆಗೆ ದಿನ ನಿಗದಿ - Zebra Release Date - ZEBRA RELEASE DATE

ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುತಾರಾಗಣದ 'ಜೀಬ್ರಾ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ. ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಹಾಗೂ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ತೆರೆ ಹಂಚಿಕೊಂಡಿರುವ ಈ ಸಿನಿಮಾ ಅಕ್ಟೋಬರ್​​ 31ಕ್ಕೆ ಬಿಡುಗಡೆ ಆಗಲಿದೆ.

Zebra Film Poster
ಜೀಬ್ರಾ ಪೋಸ್ಟರ್ (Film Poster)
author img

By ETV Bharat Karnataka Team

Published : Sep 18, 2024, 4:21 PM IST

ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಹಾಗೂ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ ''ಜೀಬ್ರಾ''. ಫಸ್ಟ್ ಲುಕ್ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಮೋಷನ್ ಪೋಸ್ಟರ್ ಅನಾವರಣಗೊಳಿಸಿದೆ. ಜೊತೆಗೆ, ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಮೋಷನ್ ಪೋಸ್ಟರ್​​ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್, ಡಾಲಿ ಧನಂಜಯ್ ಮತ್ತು ಸತ್ಯ ದೇವ್ ಅವರನ್ನು ಪರಿಚಯಿಸಲಾಗಿದೆ. ಚೆಸ್ ಆಟ, ಕಾಯಿನ್ ಫ್ಲಿಪ್ಪಿಂಗ್, ಕರೆನ್ಸಿ ನೋಟುಗಳು ಮತ್ತು ಫ್ಲೈಓವರ್​​ನಿಂದ ಕಾರ್ ಇಳಿಯುವ ದೃಶ್ಯಗಳು ಆಕರ್ಷಕವಾಗಿವೆ. ಬಹಳ ಕ್ರಿಯೇಟಿವ್​ ಆಗಿ ಮೋಷನ್ ಪೋಸ್ಟರ್ ಅನ್ನು ಚಿತ್ರೀಕರಿಸಲಾಗಿದೆ. ಅಕ್ಟೋಬರ್​​ 31ಕ್ಕೆ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರೋ ಚಿತ್ರ ಇದಾಗಿದ್ದು, ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನರ್ ಆಗಿ ದುಡಿದಿದ್ದಾರೆ. ಮೋಷನ್ ಪೋಸ್ಟರ್ ಜೊತೆಗೆ ಚಿತ್ರತಂಡ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಿದೆ. ಬೆಳಕಿನ ಹಬ್ಬ ದೀಪಾವಳಿಗೆ ಜೀಬ್ರಾ ತೆರೆಗೆ ಬರಲಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಅನು ಪ್ರಭಾಕರ್: 'ಹಗ್ಗ' ಟ್ರೇಲರ್​ ರಿಲೀಸ್ ಈವೆಂಟ್​ನಲ್ಲಿ ಹರ್ಷಿಕಾ ಪೂಣಚ್ಚ ಸೀಮಂತ - Hagga Event

ಇನ್ನು ನಟರಾಕ್ಷಸನ ಸಿನಿಮಾ ವಿಚಾರ ಗಮನಿಸೋದಾದ್ರೆ ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದು, ಡಾಲಿ ಕೈಯಲ್ಲಿ ಮೂರ್ನಾಲ್ಕು ಬಹುನಿರೀಕ್ಷಿತ ಪ್ರಾಜೆಕ್ಟ್​​ಗಳಿವೆ. ಕಳೆದ ತಿಂಗಳು ಆಗಸ್ಟ್​ 23ಕ್ಕೆ ಡಾಲಿ ಜನ್ಮದಿನ ಆಚರಿಸಿಕೊಂಡರು. ಅಂದು 'ಜಿಂಗೋ' ಸಿನಿಮಾ ಅನೌನ್ಸ್​​ ಅಗುವುದರ ಜೊತೆಗೆ ನಾಯಕ ನಟನನ್ನೊಳಗೊಂಡ ಇಂಟ್ರೆಸ್ಟಿಂಗ್​​ ಗ್ಲಿಂಪ್ಸ್ ಸಹ ಬಿಡುಗಡೆ ಆಗಿತ್ತು. 'ಡೇರ್​ ಡೆವಿಲ್​​ ಮುಸ್ತಫಾ' ನಿರ್ದೇಶಿಸಿದ್ದ ಶಶಾಂಕ್​​ ಸೋಗಲ್​ ಈ ಚಿತ್ರವನ್ನೂ ನಿರ್ದೆಶಿಸುತ್ತಿದ್ದು, ಡಾಲಿ ಧನಂಜಯ್​​ ಮತ್ತು ಬಿ ನರೇಂದ್ರ ರೆಡ್ಡಿ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಉತ್ತರಕಾಂಡ' ಡಾಲಿ ಮುಖ್ಯಭೂಮಿಕೆಯ ಮತ್ತೊಂದು ಬಹುನಿರೀಕ್ಷಿತ ಚಿತ್ರ. 'ಅಣ್ಣ From Mexico' ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್​ ಅವರ ಪುಷ್ಪ 2ನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ವಿಷ್ಣು​, ಉಪ್ಪಿ, ಶ್ರುತಿ ಜನ್ಮದಿನ: 'ಸಾಹಸಸಿಂಹ ಕರುಣಾಮಯಿಯ ಜನ್ಮದಿನ ಹಂಚಿಕೊಂಡ ನಾನು ಪುಣ್ಯವಂತ'ವೆಂದ ರಿಯಲ್​ ಸ್ಟಾರ್ - UI Poster Release

ETV Bharat Logo

Copyright © 2025 Ushodaya Enterprises Pvt. Ltd., All Rights Reserved.