ETV Bharat / entertainment

'ಕ್ರೆಕ್'​​ ರಿಲೀಸ್​​: ಆರ್ಟಿಕಲ್​ 370ರ ಜೊತೆ ಬಾಕ್ಸ್ ಆಫೀಸ್​​​ ಫೈಟ್

author img

By ETV Bharat Karnataka Team

Published : Feb 23, 2024, 11:19 AM IST

Updated : Feb 23, 2024, 11:40 AM IST

'ಕ್ರೆಕ್: ಜೀತೇಗಾ ತೊ ಜೀಯೇಗಾ' ಮತ್ತು 'ಆರ್ಟಿಕಲ್​ 370' ಸಿನಿಮಾಗಳು ಇಂದು ತೆರೆಗಪ್ಪಳಿಸಿದೆ.

Crakk  and Article 370 release
'ಕ್ರೆಕ್'​​, 'ಆರ್ಟಿಕಲ್​ 370' ರಿಲೀಸ್

ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕ್ರೆಕ್: ಜೀತೇಗಾ ತೊ ಜೀಯೇಗಾ' ಇಂದು ತೆರೆಗಪ್ಪಳಿಸಿದೆ.​​ ಮತ್ತೊಂದೆಡೆ ಯಾವಿ ಗೌತಮ್​ ನಟನೆಯ 'ಆರ್ಟಿಕಲ್​ 370' ಕೂಡ ಚಿತ್ರಮಂದಿರ ಪ್ರವೇಶಿಸಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ. ಬಾಲಿವುಡ್​ನ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆದ ಹಿನ್ನೆಲೆ, ಬಾಕ್ಸ್​ ಆಫೀಸ್​ನಲ್ಲಿ ಬಿಗ್​​ ಫೈಟ್​ ಪಕ್ಕಾ ಅಂತಾರೆ ಸಿನಿ ಪಂಡಿತರು.

  • " class="align-text-top noRightClick twitterSection" data="">

ಆದಿತ್ಯ ದತ್ ನಿರ್ದೇಶನದ 'ಕ್ರೆಕ್'​​ ಸಿನಿಮಾದಲ್ಲಿ ನೋರಾ ಫತೇಹಿ, ಅರ್ಜುನ್ ರಾಂಪಾಲ್​ ಮತ್ತು ಆ್ಯಮಿ ಜಾಕ್ಸನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಂಗ್ಸ್ ಮತ್ತು ಟ್ರೇಲರ್‌ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದ್ದ ಈ ಚಿತ್ರ ಫೈನಲಿ ತೆರೆಗಪ್ಪಳಿಸಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. 'ಆರ್ಟಿಕಲ್​ 370' ಜೊತೆ ಮುಖಾಮುಖಿಯಾಗಿದೆ.

'ಕ್ರೆಕ್'​​ ಭಾರತದಲ್ಲಿ ತನ್ನ ಮೊದಲ ದಿನ 2-3 ಕೋಟಿ ರೂ. ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಆರಂಭಿಕ ದಿನದ ಟಿಕೆಟ್‌ಗಳು 99 ರೂ.ಗಳಿಗೆ ಲಭ್ಯವಿದೆ. 750ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಗೊಂಡಿದೆ. ಜಾಗತಿಕ ಮಟ್ಟದಲ್ಲಿ 2 ಕೋಟಿ ರೂ.ಗೂ ಅಧಿಕ ಹಣ ಗಳಿಸುವ ನಿರೀಕ್ಷೆ ಇದೆ.

ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಅಭಿನಯದ ಪೊಲಿಟಿಕಲ್ ಥ್ರಿಲ್ಲರ್ ಚಿತ್ರ ಆರ್ಟಿಕಲ್ 370 ಕೂಡ ಇಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆದಿತ್ಯ ಸುಹಾಸ್ ಜಂಭಳೆ ನಿರ್ದೇಶನದ ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ವಿಚಾರವನ್ನು ಆಧರಿಸಿದೆ. ಮುಂಗಡ ವ್ಯವಹಾರ ಉತ್ತಮವಾಗಿದೆ.

ಇದನ್ನೂ ಓದಿ: 'ಫಾರ್ ರಿಜಿಸ್ಟ್ರೇಷನ್' ರಿಲೀಸ್​: ಭಾರಿ ಮೊತ್ತಕ್ಕೆ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್

ಅಂದಾಜಿನ ಪ್ರಕಾರ, ಆರ್ಟಿಕಲ್ 370 ಸಿನಿಮಾ ಭಾರತದಾದ್ಯಂತ 1,500 ಚಿತ್ರಮಂದಿರಗಳಲ್ಲಿ, 2,200 ಸ್ಕ್ರೀನ್​​​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ ಉತ್ತಮ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್​ ಪ್ರಯಾಣ ಪ್ರಾರಂಭಿಸುವ ನಿರೀಕ್ಷೆ ಇದೆ. PVR, INOX ಮತ್ತು Cinepolis ನಲ್ಲಿ 80,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಮೊದಲ ದಿನಕ್ಕೆ ಸರಿ ಸುಮಾರು 1,00,000 ಟಿಕೆಟ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಆಲಿಯಾ ಭಟ್ - ವೇದಾಂಗ್​ ರೈನಾ ಸ್ಕ್ರೀನ್ ಶೇರ್: 'ಜಿಗ್ರಾ' ಶೂಟಿಂಗ್​ ಕಂಪ್ಲೀಟ್​

ಜಿಯೋ ಸ್ಟುಡಿಯೋಸ್​ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿದ ನೈಜ ಘಟನೆ ಸುತ್ತ ಸುತ್ತುತ್ತದೆ. ಕಿರಣ್ ಕರ್ಮಾರ್ಕರ್ ಮತ್ತು ಅರುಣ್ ಗೋವಿಲ್ ಜೊತೆಗೆ ಯಾಮಿ ಗೌತಮ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Last Updated : Feb 23, 2024, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.