ETV Bharat / entertainment

ಮಾಲೀಕರ ಅನುಮತಿಯಿಲ್ಲದೇ ಹಾಡುಗಳ ಬಳಕೆ ಆರೋಪ: ವಿಚಾರಣೆಗೆ ಹಾಜರಾದ ರಕ್ಷಿತ್ ಶೆಟ್ಟಿ - Rakshit Shetty Case - RAKSHIT SHETTY CASE

ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಚಿತ್ರದಲ್ಲಿ ಎರಡು ಹಾಡುಗಳನ್ನು ಮಾಲೀಕರ ಅನುಮತಿ ಇಲ್ಲದೇ ಬಳಕೆ ಮಾಡಿದ್ದಾರೆ ಎಂದು ನವೀನ್ ಎಂಬುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ - ನಿರ್ದೇಶಕ ರಕ್ಷಿತ್​​ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದಾರೆ.

Rakshit Shetty
ರಕ್ಷಿತ್​ ಶೆಟ್ಟಿ (ETV Bharat)
author img

By ETV Bharat Entertainment Team

Published : Aug 2, 2024, 12:58 PM IST

ಬೆಂಗಳೂರು: ಕನ್ನಡದ ಜನಪ್ರಿಯ ನಟ - ನಿರ್ದೇಶಕ ರಕ್ಷಿತ್​​ ಶೆಟ್ಟಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಾಲೀಕರ ಅನುಮತಿ ಇಲ್ಲದೇ ಹಾಡುಗಳ ಬಳಕೆ ಮಾಡಿರುವ ಆರೋಪದಡಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್​​ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಇದೇ ಸಾಲಿನ ಜನವರಿ 26ರಂದು ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆ ಆಗಿ ಯಶ ಕಂಡಿತ್ತು. ಸದ್ಯ ಓಟಿಟಿ ವೇದಿಕೆಯಲ್ಲಿ ಸಿನಿಮಾ ಲಭ್ಯವಿದೆ. 'ನ್ಯಾಯ ಎಲ್ಲಿದೆ' ಟೈಟಲ್ ಸಾಂಗ್ ಹಾಗೂ 'ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ' ಹಾಡಗಳನ್ನು ಕದ್ದಿರುವ ಆರೋಪ ಈ ಚಿತ್ರದ ಮೇಲಿದೆ. ಹಾಗಾಗಿ, ನಟ ರಕ್ಷಿತ್ ಶೆಟ್ಟಿ ಮತ್ತು ಅವರ ಒಡೆತನದ ಪರಂವಃ ಸ್ಟುಡಿಯೋ ಮೇಲೆ ಎಫ್​​ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​​ ನೀಡಿದ್ದರು. ಹಾಗಾಗಿ, ಯಶವಂತಪುರ ಪೊಲೀಸ್ ಠಾಣೆಗೆ ರಕ್ಷಿತ್​​ ಶೆಟ್ಟಿ ಆಗಮಿಸಿದ್ದಾರೆ.

ಏನಿದು ದೂರು: ಒಟಿಟಿಯಲ್ಲಿ ಚಿತ್ರ ವೀಕ್ಷಿಸುವಾಗ ಈ ವಿಚಾರ ಗಮನಕ್ಕೆ ಬಂದಿದ್ದು, ಕಾಪಿರೈಟ್ಸ್ ಮಾಲೀಕತ್ವ ಪಡೆದಿದ್ದವರು ದೂರು ದಾಖಲಿಸಿದ್ದಾರೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುತ್ತಿದ್ದ ಬ್ಯುಸಿನೆಸ್ ಮ್ಯಾನ್​​. ಇವರ ಜೊತೆ ಹಾಡಿಗೆ ಸಂಬಂಧಿಸಿದಂತೆ ಚರ್ಚೆ ಆಗಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಎರಡೂ ಹಾಡುಗಳನ್ನು ಬಳಕೆ ಮಾಡಿದ್ದಾರೆ ಎಂದು ನವೀನ್ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: 'ಮೋಹಿನಿಯಾಟ್ಟಂ' ಪ್ರವೀಣೆ ಈ ಜಪಾನ್‌ ಮಹಿಳೆ; ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ಪ್ರದರ್ಶನ - Japan Woman Masters Mohiniyattam

ಎಂ. ಆರ್. ಟಿ ಮ್ಯೂಸಿಕ್​​ ಸಂಸ್ಥೆಯ ನವೀನ್​​ ಕುಮಾರ್ ಎಂ ಅವರು ರಕ್ಷಿತ್​​ ಶೆಟ್ಟಿ ಚಿತ್ರತಂಡದ ಮೇಲೆ ಈ ಆರೋಪ ಹೊರಿಸಿದ್ದಾರೆ. ಎಂ.ಆರ್.ಟಿ ಹೆಸರಿನ ಸಂಸ್ಥೆ ಚಿತ್ರದ ಹಾಡು, ಆಲ್ಬಂ ಸಾಂಗ್, ಇತ್ಯಾದಿ ಹಾಡುಗಳ ಹಕ್ಕುಸ್ವಾಮ್ಯ ಮತ್ತು ಪ್ರಸಾರದ ಹಕ್ಕನ್ನು ಹೊಂದಿದೆ. ಎಂ.ಆರ್.ಟಿ ಮ್ಯೂಸಿಕ್ ಕಂಪನಿ ಒಡೆತನದ 'ನ್ಯಾಯ ಎಲ್ಲಿದೆ' ಮತ್ತು 'ಗಾಳಿ ಮಾತು' ಚಿತ್ರಗಳ ಹಾಡುಗಳನ್ನು ಬಳಸಲು ರಾಜೇಶ್ ಎಂಬುವವರ ಮೂಲಕ ರಕ್ಷಿತ್ ಅವರು ಜನವರಿಯಲ್ಲಿ ಅನುಮತಿ ಕೇಳಿದ್ದರು. ಆದರೆ ಈ ವ್ಯವಹಾರ ಮುಂದುವರಿಯಲಿಲ್ಲ. ಇತ್ತೀಚೆಗೆ, ಒಟಿಟಿಯಲ್ಲಿ 'ಬ್ಯಾಚುಲರ್ ಪಾರ್ಟಿ' ವೀಕ್ಷಿಸುವಾಗ ಕಾಪಿರೈಟ್​​ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಎಂ.ಆರ್.ಟಿ ಮ್ಯೂಸಿಕ್​ ಕಂಪನಿಗೆ ಮೋಸ ಮಾಡಲಾಗಿದೆ ಎಂದು ನವೀನ್ ಕುಮಾರ್ ಅವರು ಆರೋಪಿಸಿ ದೂರು ಸಲ್ಲಿಸಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: 'ಮಗನ ಸಿನಿಮಾ ಬಗ್ಗೆ ಆತಂಕವಿತ್ತು, ಆದ್ರೆ ಜುನೈದ್​​ ನನ್ನನ್ನು ಅವಲಂಬಿಸಲಿಲ್ಲ': ಅಮೀರ್​ ಖಾನ್​​ - Aamir Khan

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈ ಮೊದಲೇ ನೋಟಿಸ್ ಜಾರಿ ಮಾಡಿದ್ದರು. ಆದರೆ ವಿದೇಶ ಚಿತ್ರೀಕರಣ ಕಾರಣ ನೀಡಿ ರಕ್ಷಿತ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಇಂದು ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.