ETV Bharat / entertainment

ವೈವಾಹಿಕ ಸಮಸ್ಯೆ​ to ರಾಜ್ ಕುಂದ್ರಾ ಕೇಸ್​: ಪೂನಂ ಪಾಂಡೆ ವಿವಾದಗಳಿವು! - ಪೂನಂ ಪಾಂಡೆ ವಿವಾದಗಳು

Poonam Pandey Controversies: ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾದ ರೂಪದರ್ಶಿ ಪೂನಂ ಪಾಂಡೆ ಅವರ ಪ್ರಮುಖ ವಿವಾದಗಳು ಈ ಕೆಳಗಿನಂತಿವೆ.

Poonam Pandey Controversies
ಪೂನಂ ಪಾಂಡೆ ವಿವಾದಗಳು
author img

By ETV Bharat Karnataka Team

Published : Feb 2, 2024, 2:46 PM IST

Updated : Feb 2, 2024, 6:26 PM IST

ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ಅವರು ತಮ್ಮ ಬೋಲ್ಡ್ ವ್ಯಕ್ತಿತ್ವ ಮತ್ತು ವಿವಾದಗಳಿಂದ ಸುದ್ದಿಯಾಗಿದ್ದರು. ಜನರ ಗಮನ ಸೆಳೆದಿದ್ದ ನಟಿ ತನ್ನ ಕಿರಿವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ. ನಟಿಯ ತಂಡ ಬಿಡುಗಡೆ ಮಾಡಿರೋ ಹೇಳಿಕೆ ಪ್ರಕಾರ, ಗರ್ಭಕಂಠದ ಕ್ಯಾನ್ಸರ್‌ನಿಂದ ಪಾಂಡೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಪೂನಂ ಪಾಂಡೆ 2013 ರಲ್ಲಿ 'ನಶಾ' ಚಿತ್ರದ ಮೂಲಕ ಬಾಲಿವುಡ್​ನಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಅಂದಿನಿಂದ, ನಟಿ ಸಾಕಷ್ಟು ಟ್ರೋಲ್, ಟೀಕೆ, ವಿವಾದಗಳಿಗೆ ಸಿಲುಕಿಕೊಂಡಿದ್ದರು. ನಟಿಯ ಪ್ರಮುಖ ವಿವಾದಗಳ ಒಂದು ಸಣ್ಣ ಚಿತ್ರಣ ಇಲ್ಲಿದೆ.

ರಾಜ್ ಕುಂದ್ರಾ ವಿರುದ್ಧ ಪೂನಂ ಪಾಂಡೆ ಆರೋಪ: 'ಲಾಕ್ ಅಪ್' ಸ್ಪರ್ಧಿ ಹಲವು ವಿವಾದಗಳಲ್ಲಿ ಸಿಲುಕಿದ್ದರು. ಅದಾಗ್ಯೂ, ಹೆಚ್ಚಿನವರ ಗಮನ ಸೆಳೆದದ್ದು ರಾಜ್ ಕುಂದ್ರಾ ಅವರ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣ. ವರದಿಗಳ ಪ್ರಕಾರ, ರಾಜ್ ಕುಂದ್ರಾ ಭಾಗಿಯಾಗಿರುವ ಸಂಸ್ಥೆಯೊಂದಿಗೆ ಕೈ ಜೋಡಿಸಲು ಪೂನಂ ಅವರಿಗೆ ಬೆದರಿಸಲಾಗಿತ್ತಂತೆ. ಆದರೆ ನಟಿ ನಿರಾಕರಿಸಿದ್ದರು. ಈ ಹಿನ್ನೆಲೆ ಸೇಡು ತೀರಿಸಿಕೊಳ್ಳಲು ನಟಿಯ ಫೋನ್ ನಂಬರ್ ಸೋರಿಕೆ ಮಾಡಲಾಗಿತ್ತು. ಇದು ಸ್ವತಃ ಪೂನಂ ಪಾಂಡೆ ಅವರೇ ಮಾಡಿರುವ ಆರೋಪ.

ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ: ಪೂನಂ ಪಾಂಡೆ 2020ರಲ್ಲಿ ವಿವಾಹವಾದ ಕೆಲವೇ ದಿನಗಳಲ್ಲಿ, ಪತಿ ಸ್ಯಾಮ್ ಬಾಂಬೆ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಅವರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅದಾಗ್ಯೂ, ಕೆಲ ಸಮಯದ ಬಳಿಕ ಈ ದಂಪತಿ ರಾಜಿ ಮಾಡಿಕೊಂಡಂತೆ ಕಂಡು ಬಂದಿತ್ತು.

ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಟಿಯ ಬಂಧನ: ಲಾಕ್‌ಡೌನ್ ಸಮಯದಲ್ಲಿಯೂ ಪೂನಂ ಪಾಂಡೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಲಾಕ್‌ಡೌನ್ ಸಮಯದಲ್ಲಿ, ಪತಿ ಸ್ಯಾಮ್‌ ಅವರೊಂದಿಗೆ ವಾಕ್​ಗೆ ಹೋಗಿದ್ದರು. ಕೋವಿಡ್​​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ನಟಿಯನ್ನು ತೀವ್ರವಾಗಿ ಟೀಕಿಸಲಾಗಿತ್ತು.

'ನಾನು ನಗ್ನಳಾಗುತ್ತೇನೆ'...: 2011ರಲ್ಲಿ ಪೂನಂ ಪಾಂಡೆ ಬಿಸಿಸಿಐಗೆ ಪತ್ರ ಬರೆದು, ಭಾರತವು ಕ್ರಿಕೆಟ್ ವಿಶ್ವಕಪ್ ಗೆದ್ದರೆ ನಾನು ನಗ್ನಳಾಗುತ್ತೇನೆ ಎಂದು ತಿಳಿಸಿದ್ದರು. ಆದರೆ, ಬಿಸಿಸಿಐ ನಟಿಗೆ ಅವಕಾಶ ನೀಡಿರಲಿಲ್ಲ.

ಇದನ್ನೂ ಓದಿ: 'ಲೆಜೆಂಡ್ಸ್': '12th ಫೇಲ್' ಸಿನಿಮಾ ಬಗ್ಗೆ​ ಕರೀನಾ ಗುಣಗಾನ

ನಟಿಯ ಆ್ಯಪ್​​ ನಿರ್ಬಂಧಿಸಿದ ಗೂಗಲ್​: ಪೂನಂ ಪಾಂಡೆ 2017 ರಲ್ಲಿ 'ಪಾಂಡೆ ಆ್ಯಪ್' ಅನ್ನು ಲಾಂಚ್​ ಮಾಡಿದ್ದರು. ಅದಾಗ್ಯೂ, ಅಪ್ಲಿಕೇಶನ್‌ನ ಪ್ರಚೋದನಕಾರಿ ವಿಷಯವನ್ನೊಳಗೊಂಡಿದ್ದ ಕಾರಣ, ಗೂಗಲ್ ಆ ಆ್ಯಪ್​ ಅನ್ನು ಒಂದು ಗಂಟೆಯೊಳಗೆ ಪ್ಲೇ ಸ್ಟೋರ್‌ನಿಂದ ನಿರ್ಬಂಧಿಸಿತ್ತು.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ಪೂನಂ 1991ರ ಮಾರ್ಚ್ 11 ರಂದು ಕಾನ್ಪುರದಲ್ಲಿ ಜನಿಸಿದರು. ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಮತ್ತು ಮೆಗಾಮಾಡೆಲ್ ಸ್ಪರ್ಧೆಯಲ್ಲಿ ಟಾಪ್​ ಮಾಡೆಲ್​ ಆಗಿದ್ದರು. ಬೋಲ್ಡ್​ ಫೋಟೋಶೂಟ್​ ಮೂಲಕ ಸಖತ್​​ ಸದ್ದು ಮಾಡಿದ್ದರು.

Last Updated : Feb 2, 2024, 6:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.