ETV Bharat / entertainment

ಶರಣ್ ಅಭಿನಯದ 'ಛೂ ಮಂತರ್' ಬಿಡುಗಡೆಗೆ ಮುಹೂರ್ತ ಫಿಕ್ಸ್ - Choo Mantar

ಶರಣ್ ಅಭಿನಯದ 'ಛೂ ಮಂತರ್' ಸಿನಿಮಾ ಬರುವ ತಿಂಗಳು ಏಪ್ರಿಲ್​​ ಮೊದಲ ವಾರ ತೆರೆಕಾಣಲಿದೆ.

Choo Mantar movie
ಶರಣ್ ಅಭಿನಯದ 'ಛೂ ಮಂತರ್'
author img

By ETV Bharat Karnataka Team

Published : Mar 2, 2024, 6:02 PM IST

ಸ್ಯಾಂಡಲ್​ವುಡ್ ಅಧ್ಯಕ್ಷನಾಗಿ ಕನ್ನಡಿಗರ ಮನಗೆದ್ದಿರುವ ನಟ ಶರಣ್.‌ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ನಾಯಕ ನಟನಾಗಿ ಯಶಸ್ಸು ಕಂಡಿರುವ ಶರಣ್ ಚಿತ್ರರಂಗದ ಪೈಸಾ ವಸೂಲ್ ಹೀರೋ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಉತ್ತಮ ನಟನೆಯಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ನಟನ ಮುಂದಿನ ಚಿತ್ರಗಳ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಅವತಾರ ಪುರುಷ' ಸಿನಿಮಾ ಆದ ಬಳಿಕ ಶರಣ್ ''ಛೂ ಮಂತರ್'' ಅಂತಿದ್ದಾರೆ.

ಏಪ್ರಿಲ್ 5ಕ್ಕೆ ಛೂ ಮಂತರ್ ರಿಲೀಸ್​: ಹೌದು, ತಮ್ಮ ಸಹಜ ನಟನೆಯ ಮೂಲಕ ಸಿನಿಪ್ರಿಯರ ಹೃದಯ ಗೆದ್ದಿರುವ ಶರಣ್ ಛೂ ಮಂತರ್ ಎನ್ನಲು ಸಜ್ಜಾಗಿದ್ದಾರೆ. ಟೈಟಲ್​​, ಟೀಸರ್​ನಿಂದ ಸದ್ದು ಮಾಡುತ್ತಿರುವ ಈ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಏಪ್ರಿಲ್ 5ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ.

Choo Mantar movie
ನಟ ಶರಣ್

ತೆರೆಹಂಚಿಕೊಂಡ ಶರಣ್ - ಚಿಕ್ಕಣ್ಣ: ತಮ್ಮ ಅಮೋಘ ‌ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಶರಣ್ ಅವರ ಛೂ ಮಂತರ್ ಚಿತ್ರದಲ್ಲಿ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶರಣ್ ಹಾಗೂ ಚಿಕ್ಕಣ್ಣನ ಕಾಂಬಿನೇಷನ್​​ನಲ್ಲಿ ಬರುತ್ತಿರುವ ಚಿತ್ರ ಎಂದ ಮೇಲೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸೋದು ಪಕ್ಕಾ ಅಂತಿದ್ದಾರೆ ಸಿನಿಪ್ರಿಯರು.

ಇದನ್ನೂ ಓದಿ: ತಾತನ ಮೆಚ್ಚಿನ ತಾಣಕ್ಕೆ ಮೊಮ್ಮಗ ಭೇಟಿ: ಅಣ್ಣಾವ್ರ ಊರಲ್ಲಿ 'ಯುವ' ಹವಾ

ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. 'ಛೂ ಮಂತರ್' ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ. ಕರ್ವ ಚಿತ್ರದ‌ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್ ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಿಷಬ್​ ಶೆಟ್ಟಿ, ಪ್ರಶಾಂತ್​ ನೀಲ್​ ಭೇಟಿಯಾದ ಜೂ.ಎನ್​​ಟಿಆರ್​

ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ 'ಛೂ ಮಂತರ್' ಏಪ್ರಿಲ್ 5 ರಂದು ಬಿಡುಗಡೆ ಆಗಲಿದೆ. ಬೆಂಗಳೂರು, ಮೈಸೂರು, ಉತ್ತರಾಖಂಡ ಹಾಗೂ ಲಂಡನ್​​ನಲ್ಲಿ ಚಿತ್ರೀಕರಣವಾಗಿದೆ. ಧರ್ಮ, ರಜನಿ ಭಾರದ್ವಾಜ್ ಸೆರಿದಂತೆ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಅನೂಪ್ ಅವರ ಛಾಯಾಗ್ರಹಣವಿದೆ. ಟೀಸರ್ ನಿಂದಲೇ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ ಛೂ ಮಂತರ್ ಏಪ್ರಿಲ್ 5ರಂದು ನಿಮಗೆ ದರ್ಶನ ಕೊಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.